ಧೋನಿ ವಿರುದ್ಧ ಯುವಿ ಅಪ್ಪ ದೂರು ಕೊಡ್ತಾರಾ? ಗುಲ್ಲೋ ಗುಲ್ಲು
ಬೆಂಗಳೂರು, ಜ. 29: ಆಲ್ ರೌಂಡರ್ ಯುವರಾಜ್ ಸಿಂಗ್ ವರ್ಷಗಳ ನಂತರ ಟೀಂ ಇಂಡಿಯಾಕ್ಕೆ ಮರಳಿದರೂ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಈ ಬಗ್ಗೆ ಧೋನಿ ವಿರುದ್ಧ ಯುವರಾಜ್ ಸಿಂಗ್ ಅವರ ಅಪ್ಪ ದೂರು ನೀಡಬಹುದು ಎಚ್ಚರ ಎಂಬ ಕೀಟಲೆ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.
ಟೀಂ ಇಂಡಿಯಾದ ಟಿ20 ತಂಡಕ್ಕೆ ಆಯ್ಕೆಯಾದ ಯುವರಾಜ್ ಸಿಂಗ್ ಅವರಿಗೆ ಸತತ ಎರಡನೇ ಟಿ20 ಪಂದ್ಯದಲ್ಲೂ ಬ್ಯಾಟಿಂಗ್ ಸಿಗಲಿಲ್ಲ. ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶುಕ್ರವಾರ ನಡೆದ ಎರಡನೇ ಟಿ20 ಪಂದ್ಯವನ್ನು 27ರನ್ ಗಳಿಂದ ಗೆದ್ದ ಧೋನಿ ಪಡೆ ಸರಣಿಯನ್ನು 2-0 ಅಂತರದಿಂದ ಜಯಸಿದೆ. ಆದರೆ, ಎರಡು ಪಂದ್ಯಗಳಲ್ಲಿ ಯುವರಾಜ್ ಬ್ಯಾಟಿಂಗ್ ಸಿಕ್ಕಿಲ್ಲದಿರುವುದು ಅಭಿಮಾನಿಗಳಿಗೆ ನಿರಾಶೆಯಾಗಿದೆ.[ಆಸ್ಟ್ರೇಲಿಯಾ ವಿರುದ್ಧ 2-0 ಅಂತರದಲ್ಲಿ ಟಿ20 ಸರಣಿ ಗೆದ್ದ ಭಾರತ]
ಕ್ರಿಕೆಟ್ ಅಭಿಮಾನಿಗಳಿಗೆ ನೆನಪಿರಬಹುದು. ಈ ಮುಂಚೆ ಯುವರಾಜ್ ಸಿಂಗ್ ಅವರನ್ನು ಧೋನಿ ತಂಡಕ್ಕೆ ಸೇರಿಸಿಕೊಳ್ಳಲಿಲ್ಲವೆಂದು ಯುವರಾಜ್ ಸಿಂಗ್ ಅವರ ತಂದೆ ಮಾಜಿ ಕ್ರಿಕೆಟರ್ ಯೋಗರಾಜ್ ಸಿಂಗ್ ಅವರು ಧೋನಿಯನ್ನು ರಾವಣನಿಗೆ ಹೋಲಿಕೆ ಮಾಡಿದ್ದಲ್ಲದೆ ರಂಪ ರಾಮಾಯಣ ಮಾಡಿದ್ದರು.
2014ರ ಏಪ್ರಿಲ್ ನಲ್ಲಿ ನಡೆದ ಐಸಿಸಿ ವಿಶ್ವಕಪ್ ಟ್ವೆಂಟಿ20 ಫೈನಲ್ ನಂತರ ಯುವರಾಜ್ ಅವರು ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿರಲಿಲ್ಲ. ಎಡಗೈ ಆಲ್ ರೌಂಡರ್ ಯುವರಾಜ್ ಅವರನ್ನು ಟಿ20 ಸ್ಪೆಷಲಿಸ್ಟ್ ಎಂದು ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಮಾಡಲಾಯಿತು.

ಯುವರಾಜ್ ಗೆ ಏಕೆ ಅವಕಾಶ ನೀಡಲಿಲ್ಲ
ಮೊದಲ ಪಂದ್ಯದಲ್ಲಿ ಯುವರಾಜ್ ಗೆ ಏಕೆ ಅವಕಾಶ ನೀಡಲಿಲ್ಲ ಎಂಬುದಕ್ಕೆ ಸಮಜಾಯಿಸಿ ನೀಡಿದ ಧೋನಿ ಈ ಪಂದ್ಯದ ನಂತರ ಏನು ಹೇಳುವ ಅವಶ್ಯಕತೆ ಬರಲಿಲ್ಲ. ಎಲ್ಲವೂ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಚರ್ಚಿತವಾಗುತ್ತಿತ್ತು.
ಯೋಗರಾಜ್ ಸಿಂಗ್ ಹೇಗಿರುತ್ತಾರೆ ಈಗ?
ಯೋಗರಾಜ್ ಸಿಂಗ್ ಹೇಗಿರುತ್ತಾರೆ ಈಗ?
ಯೋಗರಾಜ್ ಸಿಂಗ್ ಪ್ರವಚನ ಯಾರಿಗೆ ಬೇಕು
ಯೋಗರಾಜ್ ಸಿಂಗ್ ಪ್ರವಚನ ಯಾರಿಗೆ ಬೇಕು ಎಂಬ ಕಾರಣಕ್ಕೆ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡರು.
ಯೋಗರಾಜ್ ಸಿಂಗ್ ಟಿವಿ ಹೀಗಿರುತ್ತೆ ನೋಡಿ
ಯೋಗರಾಜ್ ಸಿಂಗ್ ಟಿವಿ ಹೀಗಿರುತ್ತೆ ನೋಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications