For Quick Alerts
ALLOW NOTIFICATIONS  
For Daily Alerts
 

ಲಂಕಾ ಪ್ರವಾಸ: 87 ರನ್ ಲೀಡ್ ಪಡೆದುಕೊಂಡ ಭಾರತ

ಕೊಲಂಬೋ, ಆಗಸ್ಟ್. 22: ಕೊನೆ ಘಟ್ಟದಲ್ಲಿ ಭಾರತದ ಸ್ಪಿನ್ನರ್ ಗಳು 4 ವಿಕೆಟ್ ಕಬಳಿಸಿದ ಕಾರಣ ಮೂರನೇ ದಿನದ ಅಂತ್ಯಕ್ಕೆ ಭಾರತ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ 87 ರನ್ ಮುನ್ನಡೆ ಪಡೆದುಕೊಂಡಿದೆ. ಶ್ರೀಲಂಕಾದ ನಾಯಕ ಆಂಜಿಲೋ ಮ್ಯಾಥ್ಯೂಸ್ ಸಿಡಿಸಿದ ಶತಕ ಮೂರನೇ ದಿನದ ಹೈಲೈಟ್ಸ್.

ಎರಡನೇ ದಿನದಾಟಕ್ಕೆ 3 ವಿಕೆಟ್‌ ಕಳೆದುಕೊಂಡು 140 ರನ್ ಗಳಿಸಿದ್ದ ಲಂಕಾಕ್ಕೆ ನಾಯಕ ಮ್ಯಾಥ್ಯೂಸ್(102)‌, ತಿರಿಮನ್ನೆ(62) ಉತ್ತಮ ಜತೆಯಾಟ ರನ್ ಗಳಿಕೆಗೆ ನೆರವಾಯಿತು.[ಎಲ್ಲಿಂದ ಆಟ ಮುಂದುವರಿದಿತ್ತು?]

cricket

ಭೋಜನ ವೇಳೆಗೆ 224ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ಲಂಕಾ ಭಾರತದ ರನ್ ಗಳಿಕೆ ಮುರಿದು ಲೀಡ್ ನೀಡುವ ತವಕದಲ್ಲಿತ್ತು. ಆದರೆ ಸ್ಪಿನ್ನರ್ ಗಳ ದಾಳಿಗೆ ಕುಸಿದು 306 ರನ್‌ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.

ಭಾರತದ ಪರ ಅಮಿತ್‌ ಮಿಶ್ರಾ 4 ವಿಕೆಟ್ ಪಡೆದು ಮಿಂಚಿದರು. ಇಶಾಂತ್ ಶರ್ಮಾ ಹಾಗೂ ಅಶ್ವಿನ್‌ ತಲಾ 2 ವಿಕೆಟ್‌ ಪಡೆದರೆ, ಯಾದವ್‌, ಬಿನ್ನಿ ತಲಾ ಒಂದು ವಿಕೆಟ್‌ ಉರುಳಿಸಿದರು.

ಮೊದಲನೇ ಟೆಸ್ಟ್ ನಲ್ಲಿ ಕೈತಪ್ಪುತ್ತಿದ್ದ ಪಂದ್ಯವನ್ನು ಲಂಕಾ ತನ್ನ ಹೆಸರಿಗೆ ಬರೆದುಕೊಂಡಿತ್ತು. 2ನೇ ಟೆಸ್ಟ್ ನ ಮೂರು ದಿನ ಮುಕ್ತಾಯವಾಗಿದೆ. ಭಾರತ ನಾಲ್ಕನೇ ದಿನ ಯಾವ ಬಗೆಯ ಬ್ಯಾಟಿಂಗ್ ನಡೆಸಿ ಮೊತ್ತವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುತ್ತದೆ ಎಂಬುದನ್ನು ಕಾದು ನೋಡಬೇಕು. ಮೂರನೇ ದಿನದ ಆಟ ಗಮನಿಸಿದರೆ ಪಿಚ್ ಸ್ಪಿನ್ ಬೌಲರ್ ಗಳಿಗೆ ನೆರವಾಗುತ್ತಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+