ಲಂಕಾ ರನ್ ಚೇಸ್, ಸಂಗಕ್ಕಾರ ಕ್ರಿಕೆಟ್ ಬದುಕು ಅಂತ್ಯ
ಕೊಲಂಬೋ, ಆಗಸ್ಟ್ 23: ಆರಂಭಿಕ ಆಟಗಾರ ಮುರಳಿ ವಿಜಯ್ ಅವರ ಉತ್ತಮ ಅರ್ಧಶತಕದ ಅಡಿಪಾಯದ ಮೇಲೆ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. ನಾಲ್ಕನೇ ದಿನದ ಅಂತ್ಯಕ್ಕೆ ಶ್ರೀಲಂಕಾ ತಂಡ 72/2 ಸ್ಕೋರ್ ಮಾಡಿದೆ.
ಭೋಜನ ವಿರಾಮದ ನಂತರ ಅಜಿಂಕ್ಯ ರಹಾನೆ ಶತಕ ದಾಖಲಿಸಿದರು. 325/8 ಸ್ಕೋರಿಗೆ ಭಾರತದ 2ನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. 2ನೇ ಟೆಸ್ಟ್ ಪಂದ್ಯ ಗೆಲ್ಲಲು ಶ್ರೀಲಂಕಾಕ್ಕೆ 413 ರನ್ ಟಾರ್ಗೆಟ್ ನೀಡಲಾಗಿದೆ.
ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಬ್ಯಾಟಿಂಗ್ ಮಾಡುವ ವೇಳೆ ಗಾಯಗೊಂಡ ಹಿನ್ನೆಲೆಯಲ್ಲಿ ಸಹಾ ಬದಲಿಗೆ ಕೆಎಲ್ ರಾಹುಲ್ ಅವರು ಮೊದಲ ಬಾರಿಗೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಕುಮಾರ್ ಸಂಗಕ್ಕಾರ ಅವರು ತಮ್ಮ ಕ್ರಿಕೆಟ್ ಬದುಕಿನ ಕಟ್ಟ ಕಡೆಯ ಇನ್ನಿಂಗ್ಸ್ ಆಡಿದರು..

ಸಂಗಕ್ಕಾರ ಕ್ರಿಕೆಟ್ ಬದುಕು ಅಂತ್ಯ: ಸಂಗಕ್ಕಾರ ಅವರು ಎರಡನೇ ಇನ್ನಿಂಗ್ಸ್ ನಲ್ಲಿ 18 ರನ್ ಗಳಿಸಿದ್ದಾಗ ಅಶ್ವಿನ್ ಸ್ಪಿನ್ ಬಲೆಗೆ ಸಿಲುಕಿ ವಿಕೆಟ್ ಒಪ್ಪಿಸಿದರು. ಸಂಗಕ್ಕಾರ ಅವರು ತಮ್ಮ ಟೆಸ್ಟ್ ಜೀವನದಲ್ಲಿ 57.40ರನ್ ಸರಾಸರಿಯಂತೆ 12,400 ರನ್ ಗಳಿಸಿದ್ದು, ಟಾಪ್ 10 ರನ್ ಗಳಿಕೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
ಲಂಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ (ಆಗಸ್ಟ್ 23)ಅಜಿಂಕ್ಯ ರಹಾನೆ ಅವರು ತಮ್ಮ ವೃತ್ತಿ ಬದುಕಿನ ನಾಲ್ಕನೇ ಟೆಸ್ಟ್ ಶತಕವನ್ನು ಬಾರಿಸಿದರು. ಇದು ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಶತಕವಾಗಿದೆ. 100 ರನ್ (212 ಎಸೆತ, 7 ಬೌಂಡರಿ) ಗಳಿಸಿದ ಬೆನ್ನಲ್ಲೇ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಭೋಜನ ವಿರಾಮದ ನಂತರ 215/3 ಸ್ಕೋರ್ ಮಾಡಿ 300ರನ್ ಗಳಿಗೂ ಅಧಿಕ ಮುನ್ನಡೆ ಪಡೆದುಕೊಂಡಿದೆ.

ಇದಕ್ಕೂ ಮುನ್ನ ಮುರಳಿ ವಿಜಯ್ ಅವರು 133 ಎಸೆತಗಳಲ್ಲಿ 4 ಬೌಂಡರಿ ಇದ್ದ 82 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಕಳೆದ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಕರ್ನಾಟಕದ ಕೆಎಲ್ ರಾಹುಲ್ ಅವರು 2 ರನ್ ಗಳಿಸಿ ಔಟಾದರೆ, ನಾಯಕ ವಿರಾಟ್ ಕೊಹ್ಲಿ10 ರನ್ ಗಳಿಸಿ ಪೆವಿಲಿಯನ್ ಸೇರಿದರು. ರಹಾನೆ ಹಾಗೂ ರಾಹುಲ್ ಶರ್ಮ ತ್ವರಿತಗತಿಯಲ್ಲಿ ರನ್ ಗಳಿಸುವ ಉತ್ಸಾಹದಲ್ಲಿದ್ದಾರೆ.
ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 108 ಓವರ್ ಗಳಲ್ಲಿ 306 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಏಂಜೆಲೋ ಮ್ಯಾಥ್ಯೂಸ್ 102 ರನ್ ಗಳಿಸಿದರೂ ಭಾರತದ ಮೊದಲ ಇನ್ನಿಂಗ್ಸ್ ಮೊತ್ತ 393 ರನ್ ದಾಟಲಾಗಲಿಲ್ಲ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications