ಟೆಸ್ಟ್ : ನಾಯಕ ಸ್ಮಿತ್ ಶತಕ, ಆಸೀಸ್ ಗೆ 97 ರನ್ ಮುನ್ನಡೆ
ಬ್ರಿಸ್ಬೇನ್, ಡಿ.19: ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಉತ್ತಮ ಮೊತ್ತ ಕಲೆ ಹಾಕದೆ 408 ರನ್ ಗೆ ಉತ್ತರವಾಗಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ನಾಯಕ ಸ್ಮಿತ್ ಶತಕ, ಬಾಲಂಗೋಚಿಗಳ ದಿಟ್ಟ ಹೋರಾಟದ ನಡುವೆ ಟೀಂ ಇಂಡಿಯಾ ಬೌಲರ್ ಗಳು ಸುಸ್ತಾಗಿದ್ದಾರೆ.
ಆಸ್ಟ್ರೇಲಿಯಾ ಚಹಾ ವಿರಾಮದ ವೇಳೆಗೆ 109 ಓವರ್ ಗಳಲ್ಲಿ 4.61 ರನ್ ಸರಾಸರಿಯಂತೆ 503/9 ಸ್ಕೋರ್ ಮಾಡಿದೆ. ನಾಯಕ ಸ್ಮಿತ್ 133(191ಎ, 13 ಬೌಂ, 2ಸಿಕ್ಸರ್), ವೇಗಿ ಮಿಚೆಲ್ ಜಾನ್ಸನ್ 88 ರನ್ ಗಳಿಸಿ ಔಟಾದರು. ನಂತರ ಬಂದ ಬಾಲಂಗೋಚಿಗಳಾದ ಸ್ಟಾರ್ಕ್ ಹಾಗೂ ಹೇಜಲ್ ವುಡ್ ಉತ್ತಮ ಆಟ ನೀಡುತ್ತಿದ್ದಾರೆ. ಸ್ಟಾರ್ಕ್ 52 ರನ್ ರನ್ ಗಳಿಸಿ ಔಟಾಗುವ ಮೂಲಕ ಇನ್ನಿಂಗ್ಸ್ ಮುಕ್ತಾಯ ಹಾಡಲಾಗಿದೆ., ಮೊದಲ ಪಂದ್ಯವಾಡುತ್ತಿರುವ ಹೇಜಲ್ ವುಡ್ 32 ರನ್ ಗಳಿಸಿದರು.

ಎರಡನೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡ ವೇಗಿ ಉಮೇಶ್ ಯಾದವ್ ದಾಳಿಗೆ ಸಿಲುಕಿ ಅಗ್ರ ಸರದಿಯ ವಿಕೆಟ್‌ಗಳನ್ನು ಕೈಚೆಲ್ಲಿದರೂ ನಾಯಕ ಸ್ಟೀವನ್ ಸ್ಮಿತ್ ನಾಯಕನ ಆಟ ಪ್ರದರ್ಶಿಸಿ 97 ರನ್ ಮುನ್ನಡೆ ಪಡೆದುಕೊಂಡಿದೆ.
ಭಾರತದ ಇನ್ನಿಂಗ್ಸ್: ಮೊದಲ ದಿನ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟದಲ್ಲಿ 311 ರನ್ ಮಾಡಿದ್ದ ಭಾರತ ತಂಡ ಎರಡನೆ ದಿನದಾಟ ಮುಂದುವರಿಸಿ ಈ ಮೊತ್ತಕ್ಕೆ 97 ರನ್ ಸೇರಿಸಿತು. ಜೋಶ್ ಹೇಝ್ಲೆವುಡ್ ಭಾರತದ ದೊಡ್ಡ ಮೊತ್ತ ದಾಖಲಿಸುವ ಪ್ರಯತ್ನವನ್ನು ವಿಫಲಗೊಳಿಸಿದರು. ಅಜಿಂಕ್ಯ ರಹಾನೆ 81 ರನ್ ಗಳಿಸುವ ಮೂಲಕ ಮತ್ತೊಮ್ಮೆ ಶತಕದ ಅಂಚಿನಲ್ಲಿ ಎಡವಿದರು. ರೋಹಿತ್ ಶರ್ಮ 32 ರನ್ ಗಳಿಸಿ ಮತ್ತೊಮ್ಮೆ ನಿರಾಶೆ ಮೂಡಿಸಿದರು.
ಐದನೆ ವಿಕೆಟ್‌ಗೆ ನಾಯಕ ಧೋನಿ ಮತ್ತು ರವಿಚಂದ್ರನ್ ಅಶ್ವಿನ್ 57 ರನ್‌ಗಳ ಕೊಡುಗೆ ನೀಡಿದರೂ ಭಾರತ ಬೃಹತ್ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. ಭಾರತ ಪ್ರಥಮ ಇನಿಂಗ್ಸ್109.4 ಓವರ್‌ಗಳಲ್ಲಿ ಆಲೌಟ್ 408 ಆಯಿತು. ಮೊದಲ ಪಂದ್ಯದಲ್ಲೇ ಹೇಜಲ್ ವುಡ್ 68 ರನ್ನಿತ್ತು 5 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications