ಇಂಡಿಯಾ vs ಕೀವಿಸ್ ಎರಡನೇ ಟೆಸ್ಟ್‌ಗೆ ಇಶಾಂತ್ ಶರ್ಮಾ ಅನುಮಾನ

ಟೀಮ್ ಇಂಡಿಯಾದ ಅನುಭವಿ ಆಟಗಾರ ಇಶಾಂತ್ ಶರ್ಮಾ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಎರಡನೇ ಹಾಗು ಅಂತಿಮ ಟೆಸ್ಟ್ ಪಂದ್ಯ ಶನಿವಾರ ಆರಂಭವಾಗಲಿದೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಸೋತಿರುವ ಟೀಮ್ ಇಂಡಿಯಾ 0-1 ಅಂತರದಿಂದ ಹಿನ್ನೆಡೆಯಲ್ಲಿದೆ. ಮೊದಲ ಟೆಸ್ಟ್ ಪಂದ್ಯವನ್ನು 10 ವಿಕೆಟ್‌ಗಳಿಂದ ಸೋತಿರುವ ಟೀಮ್ ಇಂಡಿಯಾ ಕ್ರೈಸ್ಟ್‌ಚರ್ಚ್‌ನಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಇಶಾಂತ್ ಶರ್ಮಾ ಹೊರಗುಳಿದರೆ ಅಚ್ಚರಿಯಿಲ್ಲ. ಇಶಾಂತ್ ಬದಲಿಗೆ ಉಮೇಶ್ ಯಾದವ್ ಅಥವಾ ಯುವ ವೇಗಿ ನವ್‌ದೀಪ್ ಸೈನಿ ಅವಕಾಶವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.
ರಣಜಿ ಪಂದ್ಯದ ವೇಳೆ ಇಶಾಂತ್ ಶರ್ಮಾ ಪಾದದ ಗಾಯಕ್ಕೊಳಗಾಗಿದ್ದರು. ಟೆಸ್ಟ್ ಪಂದ್ಯ ಆರಂಭಕ್ಕೆ ಕೆಲವೇ ದಿನ ಮೊದಲು ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್‌ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಅದ್ಭುತ ಆಟವನ್ನು ಪ್ರದರ್ಶಿಸಿದ್ದರು.
ಇದೀಗ ಮತ್ತೆ ಪಾದದ ಗಾಯ ಮರುಕಳಿಸಿದೆ ಎನ್ನಲಾಗುತ್ತಿದೆ. ಇಶಾಂತ್ ಶರ್ಮಾ ಬುಧವಾರ ಅಭ್ಯಾಸದಲ್ಲಿ ಕೆಲವೇ ಬಾಲ್‌ಗಳನ್ನು ಎಸೆದಿದ್ದರು. ಶುಕ್ರವಾರವೂ ಕೂಡ ಹೆಚ್ಚು ಕಾಲ ಅಭ್ಯಾಸದಲ್ಲಿ ಪಾಲ್ಗೊಳಡಿಲ್ಲ. ಹೀಗಾಗಿ ಎರಡನೇ ಪಂದ್ಯದಲ್ಲಿ ಇಶಾಂತ್ ಶರ್ಮಾ ಲಭ್ಯತೆಯ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications