ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ v ಇಂಗ್ಲೆಂಡ್: ಗೆಲುವಿನ ಲಯಕ್ಕೆ ಬರುವತ್ತ ಕೊಹ್ಲಿ ಪಡೆ ಗಮನ

2nd Test Preview: India Look To Hold The Series Against England

ಲಂಡನ್, ಆಗಸ್ಟ್ 8: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ, ಇಂಗ್ಲೆಂಡ್ ವಿರುದ್ಧ ಆಗಸ್ಟ್ 9ರಿಂದ ದ್ವಿತೀಯ ಟೆಸ್ಟ್ ಸವಾಲು ಸ್ವೀಕರಿಸಲಿದೆ. ಮೊದಲ ಐಸಿಹಾಸಿಕ ಟೆಸ್ಟ್ ನಲ್ಲಿ 31 ರನ್ ಗಳಿಂದ ಸೋತಿರುವ ಭಾರತ, ಲಂಡನ್ ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿರುವ ಎರಡನೇ ಟೆಸ್ಟ್ ನಲ್ಲಿ ಗೆಲ್ಲುವತ್ತ ಗಮನ ಕೇಂದ್ರೀಕರಿಸಿದೆ.

ಟೀಂ ಇಂಡಿಯಾ ಗ್ರೂಪ್ ಫೋಟೋದಲ್ಲಿ ಅನುಷ್ಕಾ ಏಕೆ? ಟ್ವಿಟ್ಟಿಗರ ಪ್ರಶ್ನೆಟೀಂ ಇಂಡಿಯಾ ಗ್ರೂಪ್ ಫೋಟೋದಲ್ಲಿ ಅನುಷ್ಕಾ ಏಕೆ? ಟ್ವಿಟ್ಟಿಗರ ಪ್ರಶ್ನೆ

ಐದು ಪಂದ್ಯಗಳ ಈ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತು ಸರಣಿಯಲ್ಲಿ 1-0ಯ ಹಿನ್ನಡೆ ಅನುಭವಿಸಿದೆ. ಮೊದಲ ಟೆಸ್ಟ್ ನಲ್ಲಿ ಟೀಮ್ ಇಂಡಿಯಾದಿಂದ ಹೊರಗಿದ್ದ ಭಾರತದ ವೇಗಿ ಜಸ್ ಪ್ರೀತ್ ಬುಮ್ರಾ ದ್ವಿತೀಯ ಟೆಸ್ಟ್ ಗೂ ಅಲಭ್ಯರಾಗಲಿದ್ದಾರೆ. ಇಂಗ್ಲೆಂಡ್ ಗೆ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಬಲ ದೊರೆಯದಾಗಿದೆ.

ಎಜ್ ಬಾಸ್ಟನ್ ನಲ್ಲಿನ ಮೊದಲ ಟೆಸ್ಟ್ ನಿಂದ ಹೊರಗುಳಿದಿದ್ದ ಭಾರತದ ಮತ್ತೊಬ್ಬ ಆಟಗಾರ ಚೇತೇಶ್ವರ ಪೂಜಾರ ಅವರ ಬೆಂಬಲ ಈ ಬಾರಿ ಭಾರತಕ್ಕೆ ಲಭಿಸಲಿದೆ. ಟಿ20 ಸರಣಿ ಗೆದ್ದು, ಏಕದಿನ ಸರಣಿ ಸೋತಿರುವ ಭಾರತ ಟೆಸ್ಟ್ ಸರಣಿಯನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವುದರಿಂದ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಗೆಲ್ಲುವ ಸಾಧ್ಯತೆಯಿದೆ.

ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ತಂಡದ ಬಗ್ಗೆ ಮಾತನಾಡಿ, 'ತಂಡದ ಆಯ್ಕೆ ಉತ್ತಮವಾಗಿದೆ. ಮತ್ತಿದು ಬಲಿಷ್ಠ ತಂಡ ಕೂಡ. ಆದರೆ ವಿಕೆಟ್ ಉಳಿಸಿಕೊಳ್ಳುವ ನೆಲೆಯಲ್ಲಿ ತಂತ್ರ ಬದಲಿಸಿಕೊಳ್ಳುವ ಅಗತ್ಯವಿದೆ' ಎಂದಿದ್ದಾರೆ.

ಭಾರತ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ (ವಿ.ಕೆ), ರಿಷಬ್ ಪಂತ್, ಕರುಣ್ ನಾಯರ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಶರ್ದೂಲ್ ಠಾಕೂರ್, ಮೊಹಮ್ಮದ್ ಶಮಿ.

ಇಂಗ್ಲೆಂಡ್: ಜೋ ರೂಟ್ (ಕ್ಯಾಪ್ಟನ್), ಅಲಾಸ್ಟೇರ್ ಕುಕ್, ಕೀಟನ್ ಜೆನ್ನಿಂಗ್ಸ್, ಜಾನಿ ಬೈರ್ಸ್ಟೊ, ಜೋಸ್ ಬಟ್ಲರ್, ಆಲಿವರ್ ಪೋಪ್, ಮೊಯೆನ್ ಅಲಿ, ಆದಿಲ್ ರಶೀದ್, ಜೇಮೀ ಪೋರ್ಟರ್, ಸ್ಯಾಮ್ ಕ್ಯುರನ್, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್.

Story first published: Wednesday, August 8, 2018, 18:14 [IST]
Other articles published on Aug 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X