IPL 2025 RCB:ಈ ಆಟಗಾರರನ್ನು ಆರ್‌ಸಿಬಿ ಕೈ ಬಿಟ್ಟ ನಿರ್ಧಾರ ಒಳ್ಳೆಯದಾ? ಇಲ್ಲಿದೆ ಅಂಕಿ ಅಂಶ
ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಈ ವೇಳೆ ಮಾಜಿ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ತಂಡ ವಿಫಲವಾಗಿದೆ. ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳದೇ ಇರುವುದಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಆರ್‌ಸಿಬಿ ತಂಡ ಹಾಕಿಕೊಂಡ ಲೆಕ್ಕಾಚಾರವನ್ನು ಹರಾಜಿನಲ್ಲಿ ಪ್ರಸ್ತುತ ಪಡಿಸಿತು. ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದರು.
ಆರ್‌ಸಿಬಿ ಅಭಿಮಾನಿಗಳ ಲೆಕ್ಕಾಚಾರಕ್ಕೆ ಮ್ಯಾನೇಜ್ಮೆಂಟ್ ಮಣೆ ಹಾಕಿಲ್ಲ ಎಂಬ ಕೂಗು ಕೇಳಿ ಬಂದಿತ್ತು. ಕಳೆದ ಕೆಲವು ಆವೃತ್ತಿಗಳಲ್ಲಿ ತಂಡ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಮ್ಯಾನೇಜ್ಮೆಂಟ್ ಈ ನಿರ್ಣಯ ಕೈಗೊಂಡಿತ್ತು. ಆದರೆ ಐಪಿಎಲ್ ಹರಾಜು ಮುಗಿದು ತಿಂಗಳುಗಳೇ ಕಳೆದಿವೆ. ಆದರೆ ಈಗ ಆರ್‌ಸಿಬಿ ಮ್ಯಾನೇಜ್ಮೆಂಟ್ ಮಾಡಿರುವ ತೀರ್ಮಾನ ಸರಿಯಾಗಿತ್ತು ಎಂಬ ಭಾವನೆ ಅಭಿಮಾನಿಗಳಲ್ಲೂ ಸಹ ಮೂಡುವಂತೆ ಆಗಿದೆ. ಹೀಗಾಗಿ ಆರ್‌ಸಿಬಿ ಈ ಮೂವರು ಆಟಗಾರರನ್ನು ಕೈ ಬಿಟ್ಟು ಒಳ್ಳೆಯ ಕೆಸಲ ಮಾಡಿದೆ ಎಂಬಂತಾಗಿದೆ.

ಫಾಫ್ ಡುಪ್ಲೇಸಿಸ್
ಆರ್‌ಸಿಬಿ ತಂಡವನ್ನು ಕಳೆದ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ ಫಾಫ್ ಡುಪ್ಲೇಸಿಸ್ ಅವರನ್ನು ತಂಡ ಕೈ ಬಿಟ್ಟಿತ್ತು. ಈ ನಿರ್ಧಾರವನ್ನು ಜನ ಟೀಕಿಸಿದ್ದರು. ಹರಾಜು ಆಟದ ಬಳಿಕ ಫಾಫ್ ಡುಪ್ಲೇಸಿಸ್ ನೀಡಿರುವ ಪ್ರದರ್ಶನ ಅವರನ್ನು ಕೈ ಬಿಟ್ಟಿದ್ದೇ ಒಳ್ಳೆಯದೇ ಆಯಿತು ಎಂಬ ಭಾವನೆ ಬರುತ್ತಿದೆ. ಫಾಫ್ ಆಗಿನಿಂದ ಈ ವರೆಗೆ ಕೇವಲ ಒಮ್ಮೆ ಮಾತ್ರ 30 ಪ್ಲಸ್ ಸ್ಕೋರ್ ಮಾಡಿದ್ದಾರೆ. ಇವರ ಲಯವನ್ನು ಕಳೆದುಕೊಂಡಿದ್ದನ್ನು ನೋಡಿದರೆ ಇವರನ್ನು ಬಿಟ್ಟಿದ್ದೇ ಒಳ್ಳೆಯದಾಯಿತು ಎಂಬ ಭಾವನೆ ಮೂಡುತ್ತಿದೆ.
ಗ್ಲೇನ್ ಮ್ಯಾಕ್ಸ್‌ವೆಲ್
ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ಕೈ ಬಿಟ್ಟಿದ್ದಕ್ಕೂ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು. ಇನ್ನು ಕಳೆದ ಆವೃತ್ತಿಯಲ್ಲಿ ಇವರ ಪ್ರದರ್ಶನ ಸ್ಥಿರವಾಗಿರಲಿಲ್ಲ. ಇವರು ಕಳೆದ ಆವೃತ್ತಿಯಲ್ಲಿ ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ತೋರುವಲ್ಲಿ ವಿಫಲರಾಗಿದ್ದರು. ಗ್ಲೇನ್ ಮ್ಯಾಕ್ಸ್‌ವೆಲ್ ಬಿಗ್ ಬ್ಯಾಷ್‌ಲೀಗ್‌ನಲ್ಲೂ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಅರ್ಧಶತಕ ಸಿಡಿಸಿದ್ದಾರೆ. ಇವರ ಆಟದಲ್ಲಿ ಸ್ಥಿರತೆ ಇಲ್ಲದೇ ಇರುವುದೇ ದೊಡ್ಡ ಚಿಂತೆ ಹೆಚ್ಚಿಸಿದೆ.
ಮೊಹಮ್ಮದ್ ಸಿರಾಜ್
ಕಳೆದ ಕೆಲವು ದಿನಗಳಿಂದ ಮೊಹಮ್ಮದ್ ಸಿರಾಜ್ ಲಯವಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಇನ್ನು 2024 ಐಪಿಎಲ್ ಆವೃತ್ತಿಯಲ್ಲೂ ಸಿರಾಜ್ ಸ್ಥಿರ ಪ್ರದರ್ಶನ ನೀಡಿರಲಿಲ್ಲ. ಸಿರಾಜ್ ವಿಕೆಟ್ ಬೇಟೆ ನಡೆಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಮೂರು ಫಾರ್ಮೆಟ್‌ಗಳಲ್ಲಿ ಸಿರಾಜ್ ವಿಕೆಟ್ ಕಬಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇವರು ಬಾರ್ಡರ್ ಗವಾಸ್ಕರ್ ಸರಣಿಯಲ್ಲೂ ತಮ್ಮ ಛಾಪೂ ಮುಡಿಸುವಲ್ಲಿ ಎಡವಿದ್ದಾರೆ. ಸಿರಾಜ್ ಅವರನ್ನು ಕೈ ಬಿಟ್ಟಿರುವ ನಿರ್ಧಾರ ಸರಿಯಾಗಿತ್ತು ಎಂಬ ಭಾವನೆ ಈಗ ಅಭಿಮಾನಿಗಳಲ್ಲಿ ಮೂಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications