ಧೋನಿ ಕ್ಯಾಪ್ಟನ್ಸಿಯಲ್ಲಿ ಹೀರೋ, ಕೊಹ್ಲಿ ನಾಯಕತ್ವದಲ್ಲಿ ಝೀರೋ ಆದ 3 ಸೂಪರ್‌ಸ್ಟಾರ್‌ಗಳು

ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಅದ್ಭುತ ನಾಯಕರು. ಅದರಲ್ಲೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ನಾಯಕನಾಗಿ ಐಸಿಸಿಯ ಮೂರೂ ಚಾಂಪಿಯನ್‌ಶಿಪ್ ಗೆದ್ದ ನಾಯಕ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಮಾತ್ರವಲ್ಲ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಗೆ ಧೋನಿ ಕಾರಣರಾಗಿದ್ದಾರೆ.
ವಿರಾಟ್ ಕೊಹ್ಲಿ ಕೂಡ ಅದ್ಭುತವಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ದದ ಸರಣಿಯನ್ನು ಹೊರತುಪಡಿಸಿದರೆ ಟೀಮ್ ಇಂಡಿಯಾ ಪಾಲಿಗೆ ಪ್ರತೀ ಸರಣಿಯನ್ನೂ ಸ್ಮರಣೀಯಗೊಳಿಸಿದ್ದಾರೆ ವಿರಾಟ್ ಕೊಹ್ಲಿ.
ಈ ಇಬ್ಬರೂ ನಾಯಕತ್ವದಲ್ಲಿ ಟೀಮ್ ಇಂಡಿಯಾದಲ್ಲಿ ಹಲವಾರು ದಿಗ್ಗಜ ಪ್ರತಿಭಾನ್ವಿತ ಆಟಗಾರರು ಆಡಿದ್ದಾರೆ, ಆಡುತ್ತಿದ್ದಾರೆ. ಆದರೆ ಕೆಲ ಆಟಗಾರರು ಧೋನಿ ನಾಯಕತ್ವದಲ್ಲಿ ಅತ್ಯುನ್ನತ ಫಾರ್ಮ್‌ನಲ್ಲಿದ್ದು ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಫಾರ್ಮ್ ಕಳೆದುಕೊಂಡು ತಂಡದಿಂದಲೇ ಗೇಟ್‌ಪಾಸ್ ಪಡೆದುಕೊಂಡಿದ್ದಾರೆ. ಅಂತಾ ಆಟಗಾರರ ಬಗ್ಗೆ ಮುಂದೆ ಓದಿ.

ಸಿಕ್ಸರ್ ಕಿಂಗ್ ಯುವಿ
ಈ ಪಟ್ಟಿಯಲ್ಲಿರುವ ಮೊದಲ ಆಟಗಾರ ಅಂದರೆ ಅದು ಯುವರಾಜ್ ಸಿಂಗ್. ಯುವಿ ಧೋನಿಗೂ ಮುನ್ನವೇ ಟೀಮ್ ಇಂಡಿಯಾಗೆ ಕಾಲಿಟ್ಟ ಆಟಗಾರ. ಹಲವು ವರ್ಷಗಳ ಕಾಲ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬಲಿಷ್ಠ ಆಟಗಾರನಾಗಿದ್ರು. 2011ರ ವಿಶ್ವಕಪ್ ಗೆಲ್ಲಲು ಯುವರಾಜ್ ಸಿಂಗ್ ಪ್ರಮುಖ ಕಾರಣರಾಗಿದ್ದರು.

ಕ್ಯಾನ್ಸರ್‌ಗೆ ತುತ್ತಾದ ಯುವಿ
ಅದ್ಭುತ ಫಾರ್ಮ್‌ನಲ್ಲಿದ್ದಾಗಲೇ ಯುವರಾಜ್ ಸಿಂಗ್ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆಯ ಕಾರಣಕ್ಕೆ ತಂಡದಿಂದ ಹೊರಗುಳಿದರು. ಬಳಿಕ ಚೇತರಿಸಿಕೊಂಡ ಯುವಿ ಮತ್ತೆ ಟೀಮ್ ಇಂಡಿಯಾಗೆ 2012ರಲ್ಲಿ ಮರಳಿದರು. 2012-13ರಲ್ಲಿ ಯುವರಾಜ್ ಸಿಂಗ್ 25ರ ಸರಾಸರಿಯನ್ನಷ್ಟೇ ಹೊಂದಿದ್ದರು. ಇದರ ಪರಿಣಾಮವಾಗಿ ಯುವರಾಜ್ ಸಿಂಗ್ 2014ರಲ್ಲಿ ಕೇವಲ ಆರು ಪಂದ್ಯಗಳಲ್ಲಷ್ಟೇ ಕಣಕ್ಕಿಳಿದಿದ್ದರು. 20ರ ಸರಾಸರಿಯಲ್ಲಿ ಕೇವಲ 100 ರನ್‌ಗಳಿಸಲಷ್ಟೇ ಯುವಿಗೆ ಸಾಧ್ಯವಾಯಿತು.

ಮತ್ತೆ ಕಮ್‌ಬ್ಯಾಕ್
2016ರಲ್ಲಿ ಯುವರಾಜ್ ಮತ್ತೊಮ್ಮೆ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದರು. 15 ಪಂದ್ಯಗಳಲ್ಲಿ ಯುವರಾಜ್ ಸಿಂಗ್ ಬ್ಯಾಟಲ್ಲಿ ದಾಖಲಾಗಿದ್ದು ಕೇವಲ 166 ರನ್. ಇಷ್ಟಿದ್ದರೂ ಧೋನಿ ನಾಯಕತ್ವದಲ್ಲ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿಯುವರಾಜ್ ಸಿಂಗ್ 34.26ರ ಸರಾಸರಿಯಲ್ಲಿ 5002 ರನ್ ದಾಖಲಿಸಿದ್ದಾರೆ.

ವಿರಾಟ್ ನಾಯಕ
2017ರಲ್ಲಿ ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಮತ್ತೆ ತಂಡಕ್ಕೆ ಆಯ್ಕೆಯಾದರು. ಈ ಸಂದರ್ಭದಲ್ಲಿ ಯುವಿ 14 ಪಂದ್ಯಗಳಲ್ಲಿ 35ರ ಸರಾಸರಿಯಲ್ಲಿ 415ರನ್ ಗಳಿಸಿದರು. ಆದರೆ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಯುವಿ ವಿಫಲರಾದರು ಎಂಬ ಕಾರಣಕ್ಕೆ ಮತ್ತೆ ತಂಡದಿಂದ ದೂರವಾದರು.

ಸುರೇಶ್ ರೈನಾ
ಟೀಮ್ ಇಂಡಿಯಾದ ಮತ್ತೋರ್ವ ಸೀಮಿತ ಓವರ್‌ಗಳ ಸ್ಪೆಶಲಿಸ್ಟ್ ಅಂದರೆ ಅದು ಸುರೇಶ್ ರೈನಾ. ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ರೈನಾ ಕೆಳ ಕ್ರಮಾಂಕದಲ್ಲಿ ಅದ್ಭುತವಾಗಿ ಪ್ರದರ್ಶನವನ್ನು ನಿಡುತ್ತಿದ್ದರು. ಟಿ20 ಕ್ರಿಕೆಟ್‌ನಲ್ಲಿ ರೈನಾ ಅಗ್ರಕ್ರಮಾಂಕದಲ್ಲಿ ಟೀಮ್ ಇಂಡಿಯಾಗೆ ಬಲವಾಗಿದ್ದರು. ಮಾತ್ರವಲ್ಲ ಪಾರ್ಟ್‌ಟೈಮ್ ಬೌಲರ್ ಆಗಿಯೂ ತಂಡಕ್ಕೆ ನೆರವಾಗುತ್ತಿದ್ದ ರೈನಾ ಟೀಮ್ ಇಂಡಿಯಾದ ಅದ್ಭುತ ಫೀಲ್ಡರ್ ಕೂಡ ಹೌದು.

ಸ್ಥಾನ ಕಳೆದುಕೊಂಡ ರೈನಾ
ಆದರೆ 2014ರ ನಂತರ ಟೀಮ್ ಇಂಡಿಯಾದಲ್ಲಿ ರೈನಾ ತಮ್ಮ ಸ್ಥಿತ ಪ್ರದರ್ಶನವನ್ನು ನೀಡಲು ವಿಫಲರಾಗಿದ್ದರು. ಆದರೆ ಹಾಗೂ ಹೀಗೂ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆಯಲು ಸಫಲರಾಗುತ್ತಿದ್ದರು. ಆದರೆ ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಆಯ್ಕೆಯಾದ ಬಳಿಕ ರೈನಾಗೆ ಅವಕಾಶಗಳು ಕಡಿಮೆಯಾಗತೊಡಗಿತು. ಸದ್ಯ ರೈನಾ ಟೀಮ್ ಇಂಡಿಯಾದಿಂದ ದೂರವಾಗಿದ್ದಾರೆ.

ಕೇರಮ್ ಸ್ಪೆಶಲಿಸ್ಟ್ ಅಶ್ವಿನ್
ರವಿಚಂದ್ರನ್ ಅಶ್ವಿನ್ ಕಳೆದ 8-9 ವರ್ಷಗಳಿಂದ ಟೀಮ್ ಇಂಡಿಯಾ ಟೆಸ್ಟ್ ತಂಡದ ಪ್ರಮುಖ ಆಟಗಾರ. ಟೆಸ್ಟ್‌ನಲ್ಲಿ ಅಶ್ವಿ ಈಗಲೂ ತಂಡದಲ್ಲಿದ್ದು ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಬಂದಾಗ ಅಶ್ವಿನ್ ಟೀಮ್ ಇಂಡಿಯಾದಲ್ಲಿ ಕಾಣಸಿಗುತ್ತಿಲ್ಲ. ದೋನಿ ನಾಯಕನಾಗಿದ್ದಾಗ ಅಶ್ವಿನ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂ ಖಾಯಂ ಸದಸ್ಯರಾಗಿದ್ದರು. ಆದರೆ ಬಳಿಕ ಅಶ್ವಿನ್ ಟೆಸ್ಟ್‌ಗಷ್ಟೇ ಮೀಸಲಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications