ಇನ್ನು ಕೇವಲ ಎರಡು ವಾರಗಳಲ್ಲಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಮುಂದಿನ ವಾರದಲ್ಲಿ ಬಹುತೇಕ ರಾಷ್ಟ್ರಗಳ ತಂಡಗಳು ಭಾರತದತ್ತ ಪ್ರಯಾಣವನ್ನು ಆರಂಭಿಸಲಿದ್ದು ವಿಶ್ವಕಪ್ ಟೂರ್ನಿಗೆ ಇಲ್ಲಿ ಕೊನೆಯ ಹಂತದ ಸಿದ್ಧತೆಗಳನ್ನು ಮಾಡಲಿದೆ. ಇನ್ನು ಈ ಬಾರಿ ಭಾರತದ ಆತಿಥ್ಯದಲ್ಲಿಯೇ ವಿಶ್ವಕಪ್ ಟೂರ್ನಿ ಆಯೋಜನೆಯಾಗುತ್ತಿರುವ ಕಾರಣ ಟ್ರೋಫಿ ಗೆಲ್ಲಲು ಇದು ಅತ್ಯುತ್ತಮ ಅವಕಾಶ ಎನ್ನಲಾಗುತ್ತಿದೆ. ಹೀಗಾಗಿ ಭಾರತದ ಐಸಿಸಿ ಟ್ರೋಫಿಯ ಬರ ಇಲ್ಲಿದೆ ಅಂತ್ಯವಾಗಲಿದೆಯಾ ಎನ್ನುವ ಕುತೂಹಲ ಕೂಡ ಮನೆಮಾಡಿದೆ.
ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಅತ್ಯುತ್ತಮ ಆಟಗಾರರ ಅದ್ಭುತ ಪಡೆಯನ್ನೇ ಹೊಂದಿದೆ ಎನ್ನುವುದು ಗಮನಾರ್ಹ. ಎಲ್ಲಾ ವಿಭಾಗದಲ್ಲಿಯೂ ಪರಿಣಾಮಕಾರಿ ಪ್ರದರ್ಶನ ನೀಡುವ ದೊಡ್ಡ ಬಳಗವೇ ಇದೆ. ಇದರ ಜೊತೆಗೆ ವಿಶ್ವಕಪ್ ಟ್ರೋಫಿಯನ್ನು ಈಗಾಗಲೇ ಗೆದ್ದಿರುವ ಅನುಭವ ಹೊಂದಿರುವ ಆಟಗಾರರು ಕೂಡ ಈ ತಂಡದಲ್ಲಿ ಇದ್ದಾರೆ.

ವಿಶ್ವಕಪ್ ಟ್ರೋಫಿಯನ್ನು ಗೆದ್ದು ಚಾಂಪಿಯನ್ ತಂಡದ ಭಾಗವಾಗಿರುವ ಮೂವರು ಆಟಗಾರರು ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಭಾರೀ ಬಲ ನೀಡಲಿದ್ದಾರೆ. ಹಾಗಾದರೆ ಆ ಮೂವರು ಆಟಗಾರರು ಯಾರು? ಇಲ್ಲಿದೆ ಮಾಹಿತಿ ಮುಂದೆ ಓದಿ..
ಟೀಮ್ ಇಂಡಿಯಾದ ನಾಯಕನಾಗಿರುವ ರೋಹಿತ್ ಶರ್ಮಾ 2007ರಲ್ಲಿ ಟೀಮ್ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಾಗ ಭಾರತ ತಂಡದ ಭಾಗವಾಗಿದ್ದರು. ಆ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಸ್ಟುವರ್ಟ್ ವ್ರಾಡ್ ಎಸೆತದಲ್ಲಿ ಎಲ್ಲಾ 6 ಎಸೆತಗಳನ್ನು ಸಿಕ್ಸ್‌ಗೆ ಅಟ್ಟಿದ ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಪಂದ್ಯದಲ್ಲಿ ರೋಹಿತ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಆ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ದೊರೆತಿರಲಿಲ್ಲ. ಮುಂದಿನ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಅವಕಾಶ ದೊರೆತಾದ ಅದ್ಭುತವಾಗಿ ಬಳಸಿಕೊಂಡ ರೋಹಿತ್ 40 ಎಸೆತಗಳಲ್ಲಿ ತಮ್ಮ ಚೊಚ್ಚಲ ಅರ್ಧ ಶತಕ ಬಾರಿಸಿ ಗಮನಸೆಳೆದಿದ್ದರು. ಆ ವಿಶ್ವಕಪ್‌ನಲ್ಲಿ ಒಟ್ಟು ಮೂರು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ 88 ರನ್‌ಗಳನ್ನು ಗಳಿಸಿದ್ದರು ಮತ್ತು ವಿಶ್ವಕಪ್ ವಿಜೇತ ತಂಡದ ಭಾಗ ಎನಿಸಿಕೊಂಡಿದ್ದರು.
ಟೀಮ್ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ 2011ರಲ್ಲಿ ಭಾರತ ಗೆದ್ದ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದ್ದರು. 9 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ 35.25ರ ಸರಾಸರಿಯಲ್ಲಿ 282 ರನ್‌ಗಳನ್ನು ಗಳಿಸಿದ್ದರು. ತಮ್ಮ ಆ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ ವಿರಾಟ್ ಶತಕವನ್ನು ಕೂಡ ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ವಿರುದ್ಧ ಎರಡು ವಿಕೆಟ್‌ಗಳನ್ನು ಶೀಘ್ರದಲ್ಲಿ ಕಳೆದುಕೊಂಡಾಗ ಗೌತಮ್ ಗಂಭೀರ್ ಜೊತೆಗೆ ಸೇರಿ ಮಹತ್ವದ 85 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು, ವೈಯಕ್ತಿಕವಾಗಿ 35 ರನ್‌ಗಳನ್ನು ಗಳಿಸಿದ್ದರು.
ಅನುಭವಿ ಆಟಗಾರ ಆರ್ ಅಶ್ವಿನ್ ಕೂಡ 2011ರ ವಿಶ್ವಕಪ್ ತಂಡದಲ್ಲಿ ಭಾರತ ತಂಡದ ಭಾಗವಾಗಿದ್ದರು. ಆದರೆ ಈ ಬಾರಿಯ ವಿಶ್ವಕಪ್‌ಗಾಗಿ ಈಗಾಗಲೇ ಪ್ರಕಟಿಸಿರುವ ಪ್ರಾಥಮಿಕ ತಂಡದಲ್ಲಿ ಅಶ್ವಿನ್ ಸ್ಥಾನವನ್ನು ಪಡೆದುಕೊಂಡಿಲ್ಲ. ಆದರೆ ಆರ್ ಅಶ್ವಿನ್ ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಊರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಅಕ್ಷರ್ ಪಟೇಲ್ ಗಾಯಕ್ಕೆ ತುತ್ತಾಗಿರುವ ಕಾರಣ ಅವರ ಸ್ಥಾನದಲ್ಲಿ ಅಶ್ವಿನ್ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.