For Quick Alerts
ALLOW NOTIFICATIONS  
For Daily Alerts
 

IPL 2025: ಈ ಬಾರಿ ಅಭಿಮಾನಿಗಳ ಚಿತ್ತ ಕದ್ದ 3 RCB ಆಟಗಾರರು ಇವರೇ

ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ಗೆ ಕ್ಷಣಗಣನೆ ಆರಂಭವಾಗಿದೆ. 18ನೇ ಆವೃತ್ತಿಯ ಐಪಿಎಲ್‌ಗೆ ಭರದ ಸಿದ್ಧತೆಗಳು ನಡೆದಿವೆ. ಐಪಿಎಲ್‌ನಲ್ಲಿ ಭಾಗವಹಿಸುವ ಎಲ್ಲ ತಂಡಗಳು ಮೈದಾನದಲ್ಲಿ ತಾಲೀಮು ನಡೆಸಿವೆ. ಈ ಬಾರಿಯ ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸಹ ಈ ಲೀಗ್‌ನಲ್ಲಿ ಭಾಗವಹಿಸುತ್ತಿದೆ. 17 ಬಾರಿ ಮಾಡಲು ಆಗದ ಸಾಧನೆಯನ್ನು ಮಾಡುವ ನಿಟ್ಟಿನಲ್ಲಿ ಆರ್‌ಸಿಬಿ ಚಿತ್ತ ನೆಟ್ಟಿದೆ. ಈ ವೇಳೆ ಆರ್‌ಸಿಬಿ ಫ್ಯಾನ್ಸ್‌ ಸಹ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.

18ನೇ ಆವೃತ್ತಿಯ ಐಪಿಎಲ್‌ಗೆ ಆರ್‌ಸಿಬಿ ನೂತನ ನಾಯಕನನ್ನು ಘೋಷಣೆ ಮಾಡಿದೆ. ಈ ಬಾರಿ ತಂಡವನ್ನು ಯುವ ಆಟಗಾರ ರಜತ್ ಪಟಿದಾರ್‌ ಮುನ್ನಡೆಸಲಿದ್ದಾರೆ. ವಿರಾಟ್‌ ಕೊಹ್ಲಿ ಅವರ ಮಾರ್ಗದರ್ಶನದಲ್ಲಿ ಈ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಅಭಿಯಾನವನ್ನು ಆರಂಭಿಸಲಿದೆ. ಆದರೆ ಈ ಬಾರಿ ತಂಡದಲ್ಲಿ ವಿರಾಟ್ ಕೊಹ್ಲಿ ಅವರನ್ನು ಬಿಟ್ಟರೆ, ಜನರ ಮನವನ್ನು ಸೆಳಯುವ ಆಟಗಾರರು ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ಈ ಬಗ್ಗೆ ಹುಡುಕಿದಾಗ ಆರ್‌ಸಿಬಿ ತಂಡದ ಮೂವರು ಆಟಗಾರರು ಅಭಿಮಾನಿಗಳನ್ನು ಮೈದಾನಕ್ಕೆ ಸೆಳೆಯುವಲ್ಲಿ ಸಫಲರಾಗುತ್ತಾರೆ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ.

3 RCB Stars Who Will Set Stadiums on Fire in IPL 2025

ವಿರಾಟ್ ಕೊಹ್ಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶಕ್ತಿ ವಿರಾಟ್‌ ಕೊಹ್ಲಿ. ಇವರ ಆಟವನ್ನು ನೋಡಲು ಅಭಿಮಾನಿಗಳು ಮೈದಾನದತ್ತ ಬರುತ್ತಾರೆ. ಇವರು ಈಗಾಗಲೇ 17 ಆವೃತ್ತಿಗಳಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನದಿಂದ ಅಭಿಮಾನಿಗಳ ಮನ ಗೆದಿದ್ದಾರೆ. ಅಲ್ಲದೆ ಬಿಗ್‌ ಇನಿಂಗ್ಸ್‌ ಕಟ್ಟಿ ಗಮನ ಸೆಳೆದಿದ್ದಾರೆ. ಇವರು ಆರ್‌ಸಿಬಿ ತಂಡದ ಬೆನ್ನೆಲಬು. 252 ಐಪಿಎಲ್‌ ಪಂದ್ಯಗಳನ್ನು ಆಡಿರುವ ವಿರಾಟ್‌, 8004 ರನ್‌ ಸಿಡಿಸಿದ್ದಾರೆ. ಇವರಿಗೆ ತಂಡ ನಾಯಕತ್ವ ನೀಡದೇ ಇದ್ದರೂ ಸಹ ಮೈದಾನದಲ್ಲಿ ಇವರೇ ಕ್ಯಾಪ್ಟನ್‌.

ಆರ್‌ಸಿಬಿ ಕ್ಯಾಪ್ಟನ್‌

ತನ್ನ 31ನೇ ವಯಸ್ಸಿನಲ್ಲಿ ವಿಶ್ವದ ಪ್ರತಿಷ್ಠಿತ ಕ್ರಿಕೆಟ್‌ ಫ್ರಾಂಚೈಸಿಯ ನಾಯಕತ್ವವನ್ನು ವಹಿಸಿಕೊಳ್ಳುತ್ತಿರುವ ಹೆಮ್ಮೆ ರಜತ್ ಪಟಿದಾರ್ ಅವರದ್ದಾಗಿದೆ. ಇವರು ಕಳೆದ ಆವೃತ್ತಿಗಳಲ್ಲಿ ಮಿಡ್ಲ್‌ ಆರ್ಡರ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇವರು 2024ರ ಐಪಿಎಲ್‌ನಲ್ಲಿ 395 ರನ್‌ ಸಿಡಿಸಿದ್ದಾರೆ. ಇದರಿಂದ ಇವರ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಇವರ ಶಾಟ್‌ ಸೆಲೆಕ್ಷನ್‌ ಹಾಗೂ ಅಂಜಿಕೆ ಇಲ್ಲದೆ ಬ್ಯಾಟಿಂಗ್ ಮಾಡುವ ಧಾಟಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇವರ ಮುಂದಾಳತ್ವದಲ್ಲಿ ಆರ್‌ಸಿಬಿ ಚೊಚ್ಚಲ ಐಪಿಎಲ್‌ ಟ್ರೋಫಿ ಗೆಲುವಿನ ಕನಸು ಕಾಣುತ್ತಿದೆ.

3 RCB Stars Who Will Set Stadiums on Fire in IPL 2025

ಭುವನೇಶ್ವರ್‌ ಕುಮಾರ್‌

ಆರ್‌ಸಿಬಿ ಕಳೆದ ಕೆಲವು ಆವೃತ್ತಿಗಳಲ್ಲಿ ಮಾಡಿದ ತಪ್ಪನ್ನು ಈ ಬಾರಿಯ ಐಪಿಎಲ್‌ನಲ್ಲಿ ಮಾಡಲು ಹೋಗಿಲ್ಲ. ತನ್ನ ಬೌಲಿಂಗ್ ವಿಭಾಗವನ್ನು ಬಲ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಆರ್‌ಸಿಬಿ ಶ್ರಮಿಸಿದೆ. ಈ ಬಾರಿ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗವನ್ನು ಐಪಿಎಲ್‌ನ ಅನುಭವಿ ಆಟಗಾರ ಭುವನೇಶ್ವರ್‌ ಕುಮಾರ್‌ ಮುನ್ನಡೆಸಲಿದ್ದಾರೆ. ಇವರು ಈಗಾಗಲೇ ಆರ್‌ಸಿಬಿ ಪರ 2009ರಲ್ಲಿ ಆಡಿ ಸೈ ಎನಿಸಿಕೊಂಡಿದ್ದರು. ಇವರ ಆಗಮನ ನಿಶ್ಚಿತವಾಗಿ ಆರ್‌ಸಿಬಿ ತಂಡಕ್ಕೆ ದೊಡ್ಡ ಆನೆ ಬಲ ತಂದಿದೆ. ಇವರು ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಲು ಹೆಸರುವಾಸಿ.

Story first published: Tuesday, March 11, 2025, 22:19 [IST]
Other articles published on Mar 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+