ಆರ್‌ಸಿಬಿಗೆ ಹಾರ್ದಿಕ್ ಪಾಂಡ್ಯ ಏಕೆ ಬೇಕು? ಇಲ್ಲಿದೆ ಮೂರು ಕಾರಣ
ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಮಾಲೀಕರು ಉಳಿಸಿಕೊಂಡ ಆಟಗಾರರು ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯಲ್ಲಿ ರಿಲೀಸ್ ಮಾಡಲಿದ್ದಾರೆ. ಈ ನಡುವೆ ಯಾರನ್ನು ಕೈಬಿಡಬೇಕು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಈ ಮಧ್ಯ ಆರ್‌ಸಿಬಿ ಸಹ ಯಾವ ಪ್ಲೇಯರ್‌ನನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಟೆನ್ಷನ್ ಆರಂಭವಾಗಿದೆ. ಆರ್‌ಸಿಬಿ ತನ್ನ ಅಗ್ರೇಸಿವ್ ಗೇಮ್ ಪ್ಲ್ಯಾನ್‌ನಿಂದ ಹೆಸರುವಾಸಿ. ಈ ಹರಾಜಿನಲ್ಲೂ ಆರ್‌ಸಿಬಿ ಮಾಸ್ಟರ್ ಸ್ಟ್ರೋಕ್ ನೀಡಲು ಸಿದ್ಧತೆ ನಡೆಸಿದೆ.
ಐಪಿಎಲ್ 17 ಆವೃತ್ತಿಗಳು ಮುಗಿದರೂ ಆರ್‌ಸಿಬಿ ತಂಡ ಇನ್ನು ಒಂದೂ ಬಾರಿ ಕಪ್ ಗೆಲ್ಲದೇ ಇರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಈ ಬಾರಿಯ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕಿ ಪ್ರಶಸ್ತಿ ಗೆಲುವಿನ ಬರವನ್ನು ನೀಗಿಸುವ ಪ್ಲ್ಯಾನ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ತಂಡಕ್ಕೆ ಒಬ್ಬ ಆಲ್‌ರೌಂಡರ್ ಅವಶ್ಯಕತೆ ಇದೆ. ಈ ಆಲ್‌ರೌಂಡರ್‌ಗಾಗಿ ಆರ್‌ಸಿಬಿಗಾಗಿ ಹುಡುಕಾಟ ನಡೆಸಿದ್ದು, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಗಾಳ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ. ಅಂದಹಾಗೆ ಆರ್‌ಸಿಬಿಗೆ ಹಾರ್ದಿಕ್ ಏಕೆ ಬೇಕು ಎಂಬುದಕ್ಕೆ ಕಾರಣ ಇಲ್ಲಿದೆ.

ಅನುಭವ ಹಾಗೂ ನಾಯಕತ್ವ
ಹಾರ್ದಿಕ್ ಪಾಂಡ್ಯ ಆರ್‌ಸಿಬಿ ತಂಡಕ್ಕೆ ಸೇರಿದರೆ ನಿಶ್ಚಿತವಾಗಿಯೂ ಅವರ ಅನುಭವ ತಂಡಕ್ಕೆ ಪ್ಲಸ್ ಆಗಲಿದೆ. ಇವರು ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ರೀತಿ ಇವರನ್ನು ಫ್ರಾಂಚೈಸಿಗಿಗಳು ಪದೇ ಪದೇ ನೋಡುವಂತೆ ಮಾಡುತ್ತದೆ. ಇವರ ನಾಯಕತ್ವದ ಗುಣಗಳು ಎಲ್ಲರ ಗಮನ ಸೆಳೆದಿವೆ. ಈ ಗುಣಗಳನ್ನು ಬಳಸಿಕೊಳ್ಳಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಆರ್‌ಸಿಬಿ ಸಹ ಒಬ್ಬ ಉತ್ತಮ ನಾಯಕನ ಹುಡುಕಾಟದಲ್ಲಿದೆ. ಇವರು ತಂಡದ ಉಳಿದ ಆಟಗಾರರೊಂದಿಗೆ ಉತ್ತಮವಾಗಿ ಹೊಂದಾಣಿಕೆ ಮಾಡುವ ಸಾಧ್ಯತೆ ಇದೆ. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆನೆ ಬಲ ತುಂಬ ಬಲ್ಲ ಪ್ಲೇಯರ್.

ಸ್ಟಾರ್ ಆಲ್‌ರೌಂಡರ್
ಹಾರ್ದಿಕ್ ಪಾಂಡ್ಯ ಆರ್‌ಸಿಬಿಗೆ ಸೇರಿದರೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ. ಇವರು ಒತ್ತಡದ ಸನ್ನಿವೇಶದಲ್ಲಿ ಬೌಲಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಆರ್‌ಸಿಬಿ ಕಳೆದ ಕೆಲವು ವರ್ಷಗಳಲ್ಲಿ ತನ್ನ ಬೌಲಿಂಗ್ ಸಮಸ್ಯೆಯಿಂದ ಟೀಕೆಗೆ ಗುರಿಯಾಗಿತ್ತು. ಇನ್ನು ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್‌ವೆಲ್ ಅವರಂತಹ ಸ್ಟಾರ್ ಆಟಗಾರರು ಇದ್ದರೂ ಸಹ ಫಿನಿಶರ್ ಪಾತ್ರವನ್ನು ನಿಭಾಯಿಸಬಲ್ಲ ಪ್ಲೇಯರ್ ಯಾರು ಇಲ್ಲ. ಹೀಗಾಗಿ ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಉತ್ತಮ ಆಯ್ಕೆ ಆಗಿದೆ.

ಮಾರ್ಕೆಟ್ ಹಾಗೂ ಅಪಾರ ಫ್ಯಾನ್ಸ್ ಫಾಲೋ
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಒಬ್ಬ ಸ್ಟಾರ್ ಆಲ್‌ರೌಂಡರ್. ಇವರ ಮಾರ್ಕೆಟ್ ಮೌಲ್ಯವೂ ಸಹ ಈ ದಿನಗಳಲ್ಲಿ ದ್ವಿಗುಣವಾಗಿದೆ. ಹಾರ್ದಿಕ್ ಪಾಂಡ್ಯ ಆರ್‌ಸಿಬಿಗೆ ಎಂಟ್ರಿ ಆದರೆ, ಇದರ ಸಂಪೂರ್ಣ ಲಾಭವನ್ನು ಸಹ ಪಡೆದುಕೊಳ್ಳಲು ಆರ್‌ಸಿಬಿ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಇವರಿಗೆ ದೇಶದಲ್ಲಿ ಅಪಾರ ಫ್ಯಾನ್ ಫಾಲೋವರ್ಸ್ ಇದ್ದಾರೆ. ಇದನ್ನು ಬಳಸಿಕೊಂಡು ಆರ್‌ಸಿಬಿ ಇನ್ನಷ್ಟು ಖ್ಯಾತಿ ಪಡೆಯಲು ಸಜ್ಜಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications