For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಒಂದೇ ಒಂದು ಸಾರಿ ಐಪಿಎಲ್ ಕಪ್‌ ಗೆಲ್ಲದ್ದಕ್ಕೆ ಅಸಲಿ ಕಾರಣಗಳಿವು!

3 Reasons why RCB have not won single IPL title yet

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕರ್ನಾಟಕದ, ಬೆಂಗಳೂರು ಮೂಲದ ಫ್ರಾಂಚೈಸಿ 'ರಾಯಲ್ ಚಾಲೆಂಜರ್ಸ್ ಬೆಂಗಳೂರ್‌'ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ಅವೇನೆಂದರೆ, 1. ಕರ್ನಾಟಕದ ತಂಡವೆಂಬ ಹಿರಿಮೆ, 2. ಟೀಮ್ ಇಂಡಿಯಾದ ನಾಯಕ, ರನ್ ಮೆಷೀನ್ ವಿರಾಟ್ ಕೊಹ್ಲಿ ಈ ತಂಡದ ಕ್ಯಾಪ್ಟನ್. ಇಷ್ಟೆಲ್ಲಾ ಪ್ರೀತಿ-ಅಭಿಮಾನ ಹೊಂದಿರುವ ಆರ್‌ಸಿಬಿ ಬಲಿಷ್ಠ ತಂಡವೂ ಹೌದು. ಆದರೆ ಆರ್‌ಸಿಬಿ ಇದುವರೆಗೂ ಒಂದೇ ಒಂದು ಬಾರಿ ಕಪ್‌ ಗೆದ್ದಿಲ್ಲ ಯಾಕೆ!?

ಗೆಲ್ಲುವ ಫೇವರಿಟ್ ತಂಡವಾಗಿದ್ದರೂ ಆರ್‌ಸಿಬಿ ಸೋಲಿನ ಮುಖಭಂಗ ಅನುಭವಿಸುತ್ತಲೇಯಿದೆ. ಇದಕ್ಕೆ ಪ್ರಮುಖ ಕಾರಣವೇನೆಂದು ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಆಶಿಶ್ ನೆಹ್ರಾ ಅವರಂಥ ಒಂದಿಷ್ಟು ಪರಿಣಿತರು ಈ ಮೊದಲು ಅಭಿಪ್ರಾಯ ಹಂಚಿಕೊಂಡಿದ್ದರು.

ಕ್ರಿಕೆಟ್‌ ಪರಿಣಿತರ ಪ್ರಕಾರ, ಆರ್‌ಸಿಬಿ ಹಿನ್ನಡೆಗೆ ಪ್ರಮುಖ ಅಂಶಗಳು, ಅಸಲಿ ಕಾರಣಗಳು ಇಲ್ಲಿವೆ ನೋಡಿ.

# ಆರ್‌ಸಿಬಿ ಸೋಲಿಗೆ ಕಾರಣ-1

# ಆರ್‌ಸಿಬಿ ಸೋಲಿಗೆ ಕಾರಣ-1

ಆರ್‌ಸಿಬಿ ಸೋಲಿನ ಬಗ್ಗೆ ಮಾತನಾಡಿದಾಗ ಟೀಮ್ ಇಂಡಿಯಾ ಮಾಜಿ ನಾಯಕ ಮತ್ತು ಆರ್‌ಸಿಬಿ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಕೂಡ ಈ ಕಾರಣ ಹೇಳಿದ್ದರು. ಅದೇನೆಂದರೆ ತಂಡದ ಆಯ್ಕೆಯಲ್ಲಿನ ತಪ್ಪು. ಆರ್‌ಸಿಬಿಯಲ್ಲಿ ಎದುರಾಳಿಗೆ ನಡುಕ ಹುಟ್ಟಿಸಲು ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್‌ನಂತ ಅನೇಕ ಬಲಿಷ್ಠರಿದ್ದಾರೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಡೆತ್ ಬೌಲಿಂಗ್‌, ಪ್ರಭಾವ ಬೀರುವ ಪ್ರಮುಖ ಸಂಗತಿಗಳಲ್ಲೊಂದು. ಆರ್‌ಸಿಬಿ ತಂಡದಲ್ಲಿ ಗುಣಮಟ್ಟದ ಡೆತ್ ಬೌಲರ್‌ ಇಲ್ಲ. ತಂಡದ ಈ ವೈಫಲ್ಯ ಮುಂದುವರೆಯುತ್ತಲೇ ಬಂದಿದೆ. 2015ರಲ್ಲಿ ಮಿಚೆಲ್ ಸ್ಟಾರ್ಕ್ ಬಿಟ್ಟರೆ, ಸೀಸನ್ ಪೂರ್ತಿ ಆರ್‌ಸಿಬಿಗೆ ಬಲವಾಗಿ ನಿಂತ ಒಬ್ಬರೇ ಒಬ್ಬ ಬೌಲರ್ ಕಾಣಸಿಗುವುದಿಲ್ಲ.

# ಕಪ್ ಗೆಲ್ಲದ ತಂಡಗಳು

# ಕಪ್ ಗೆಲ್ಲದ ತಂಡಗಳು

ಐಪಿಎಲ್‌ನಲ್ಲಿ ಆರ್‌ಸಿಬಿ, 2016, 2011 ಮತ್ತು 2009ರಲ್ಲಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಈಗ ಕಪ್ಪೇ ಗೆಲ್ಲದ ತಂಡಗಳ ಸಾಲಿನಲ್ಲಿ ಆರ್‌ಸಿಬಿ ಕೂಡ ಇದೆ. ಈವರೆಗೆ ಐಪಿಎಲ್ ಕಪ್ಪೇ ಗೆಲ್ಲದ ತಂಡಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್‌ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮಾತ್ರ. ಇನ್ನು ಹೆಚ್ಚ ಬಾರಿ ಚಾಂಪಿಯನ್ಸ್ ಆಗಿ ಮಿನುಗಿದ ತಂಡಗಳೆಂದರೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ (4 ಬಾರಿ) ಮತ್ತು ಎಂಎಸ್ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ಕಿಂಗ್ಸ್ (3 ಬಾರಿ).

# ಕಪ್ ಗೆಲ್ಲದ್ದಕ್ಕೆ ಕಾರಣ-2

# ಕಪ್ ಗೆಲ್ಲದ್ದಕ್ಕೆ ಕಾರಣ-2

ಮೊದಲೇ ಹೇಳಿದಂತೆ ಆರ್‌ಸಿಬಿ ಯಾವತ್ತಿಗೂ ವೀಕ್ ತಂಡ ಅನ್ನಿಸಿಲ್ಲ. ಪ್ರತೀ ಸೀಸನ್‌ನಲ್ಲೂ ಬಲಿಷ್ಠ ಆಟಗಾರರು ತಂಡದಲ್ಲಿ ಇದ್ದೇ ಇರುತ್ತಾರೆ. ಆದರೆ ದುರದೃಷ್ಟವೆಂದರೆ ಬಹುತೇಕ ಸೀಸನ್‌ಗಳಲ್ಲಿ ತಂಡದಲ್ಲಿರುವ ಪ್ರಮುಖ ಆಟಗಾರರೇ ನೀರಸ ಪ್ರದರ್ಶನ ನೀಡುತ್ತಾರೆ. ಬಹುಶಃ ಆಕರ್ಷಣೀಯ ತಂಡದಲ್ಲಿ ಆಡುತ್ತಿರುವುದಕ್ಕೆ ಹೆಚ್ಚಿನ ಒತ್ತಡವೋ ಗೊತ್ತಿಲ್ಲ; ಅಂತೂ ಅವರು ನಿರೀಕ್ಷಿಸಿದಷ್ಟು ಪ್ರದರ್ಶನ ನೀಡುವುದಿಲ್ಲ. ಆರ್‌ಸಿಬಿ ಸೋಲಿಗೆ ಇದೂ ಒಂದು ಕಾರಣವೆ. ಕೆಎಲ್ ರಾಹುಲ್, ಶೇನ್ ವಾಟ್ಸನ್, ಕ್ವಿಂಟನ್ ಡಿ ಕಾಕ್ ಇಂಥ ಅನೇಕ ಗುಣಮಟ್ಟದ ಆಟಗಾರರು ಆರ್‌ಸಿಬಿಯಲ್ಲಿ ಆಡಿದ್ದಾರೆ. ಆದರೆ ಆರ್‌ಸಿಬಿಯಲ್ಲಿದ್ದಾಗ ಇವರು ಗಣನೀಯ ಪ್ರದರ್ಶನವೇನೂ ನೀಡಲಿಲ್ಲ, ಆದರೆ ಈಗ ಇರುವ ತಂಡದಲ್ಲಿ ಅವರೆಲ್ಲ ಪ್ರಮುಖ ಆಟಗಾರರೆನಿಸಿದ್ದಾರೆ.

# ಬೆಂಗಳೂರು ಫೇಲಿಗೆ ಕಾರಣ-3

# ಬೆಂಗಳೂರು ಫೇಲಿಗೆ ಕಾರಣ-3

ಉಳಿದ ತಂಡಗಳಲ್ಲಿರುವಂತೆ ಪ್ಲೇಯಿಂಗ್ XIನಲ್ಲಿರುವ ಸ್ಥಿರತೆ ಆರ್‌ಸಿಬಿಯಲ್ಲಿಲ್ಲ. ಮೇಲಾಗಿ ವಿರಾಟ್ ಕೊಹ್ಲಿಯ ತಂಡವೆಂದರೆ ಅಲ್ಲಿ ಆಟಗಾರರ ಬದಲಾವಣೆ ಆಗುತ್ತಲೇ ಇರುತ್ತದೆ ಅನ್ನೋದು ನಿಮಗೆ ಗೊತ್ತಿರಬಹುದು. ಪ್ರತಿಭಾವಂತರಿಗೆ ತಂಡದಲ್ಲಿ ಸ್ಥಾನ ನೀಡೋದು ಒಳ್ಳೆಯದೆ. ಆದರೆ ಪ್ರಮುಖ ಕೆಲವಾದರೂ ತಂಡದಲ್ಲಿ ಉಳಿಸಿಕೊಳ್ಳಬೇಕು. ಪ್ರಮುಖ ಆಟಗಾರರನ್ನೇ ಪದೇ ಪದೇ ಬದಲಾಯಿಸುತ್ತಿದ್ದರೆ ತಂಡದ ಸ್ಥಿರತೆಯೇ ಹಾಳಾಗುತ್ತದೆ. ನೀವೇ ಗಮನಿಸಿರುವಂತೆ ಆರ್‌ಸಿಬಿಯಲ್ಲಿ ಕೊಹ್ಲಿಯೊಬ್ಬರನ್ನು ಬಿಟ್ಟರೆ, ಬಹುತೇಕ ಎಲ್ಲಾ ಆಟಗಾರರನ್ನು ಸೀಸನ್‌ನಿಂದ ಸೀಸನ್‌ಗೆ ಬದಲಾಯಿಸಲಾಗುತ್ತದೆ. 2019ರ ಸೀಸನ್‌ನನ್ನೇ ಗಮನಿಸಿ; ಆರ್‌ಸಿಬಿ ಆಡಿರುವ 14 ಪಂದ್ಯಗಳಲ್ಲಿ 8ರಲ್ಲಿ ತಂಡವನ್ನು ಬದಲಾಯಿಸಿತ್ತು. ಹೀಗಾಗಿಯೇ ಆರ್‌ಸಿಬಿ ಪಾಯಿಂಟ್‌ ಟೇಬಲ್‌ನಲ್ಲಿ ತಳದಲ್ಲಿ ಉಳಿಯಿತು!

Story first published: Thursday, July 30, 2020, 14:24 [IST]
Other articles published on Jul 30, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+