ಈಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಸರಣಿ ಹಾಗೂ ಸೌದಿಯಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನ ಮೇಲೆ ನೆಟ್ಟಿದೆ. ಈ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಲು ಮಾಲೀಕರು ಪ್ಲ್ಯಾನ್ ನಡೆಸಿದ್ದಾರೆ. ಪ್ರಸಕ್ತ ಹರಾಜು ಎರಡು ದಿನಗಳ ಕಾಲ ನಡೆಯಲಿದ್ದು, 1500ಕ್ಕೂ ಹೆಚ್ಚು ಆಟಗಾರರು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಈ ವೇಳೆ ಆರ್‌ಸಿಬಿ ಕೈ ಬಿಟ್ಟ ಮೂವರು ಆಟಗಾರರಿಗೆ ಮಾಲೀಕರು ಹಣದ ಹೊಳೆಯನ್ನು ಹರಿಸುವ ಸಾಧ್ಯತೆ ಇದೆ.
ಐಪಿಎಲ್ ಮೆಗಾ ಹರಾಜು ಇದೇ ತಿಂಗಳು 24 ಹಾಗೂ 25 ರಂದು ನಡೆಯಲಿದೆ. ಈ ಹರಾಜಿನಲ್ಲಿ ಸ್ಟಾರ್ ಆಟಗಾರರು ಬಿಡ್ ಅಂಗಳ ಪ್ರವೇಶಿಸಲಿದ್ದಾರೆ. ಹೀಗಾಗಿ ಎಲ್ಲ ಮಾಲೀಕರು ಚಿತ್ತ ಈ ಆಟಗಾರರ ಮೇಲೆ ನೆಟ್ಟಿದೆ. ಈ ಸ್ಟಾರ್ ಆಟಗಾರರು ಈಗಾಗಲೇ ಐಪಿಎಲ್ ಹರಾಜಿನಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದಾರೆ. ಆರ್‌ಸಿಬಿ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿದ್ದು, ಎಲ್ಲ ಆಟಗಾರರನ್ನು ಕೈ ಬಿಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಿಲೀಸ್ ಮಾಡಿದ ಮೂವರು ಆಟಗಾರರಿಗೆ ಮಾಲೀಕರು ಹಣವನ್ನು ಹೂಡ ಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ನಿರತವಾಗಿದೆ. ಈ ಲೆಕ್ಕಾಚಾರದಿಂದಲೇ ಆರ್‌ಸಿಬಿ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಕೊಳ್ಳಲು ಮನಸ್ಸು ಮಾಡಿದ್ದು, ಮೂವರನ್ನು ಮಾತ್ರ ಉಳಿಸಿಕೊಂಡಿದೆ. ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರಲ್ಲಿ ಒಬ್ಬನೇ ಒಬ್ಬ ವಿದೇಶಿ ಆಟಗಾರರ ಇಲ್ಲ ಎಂಬುದೇ ವಿಶೇಷ. ಇನ್ನು ಆರ್‌ಸಿಬಿ ಕೈ ಬಿಟ್ಟ ಮೂವರು ಆಟಗಾರರಿಗೆ ಐಪಿಎಲ್ ಮೆಗಾ ಹರಾಜಿನಲ್ಲಿ 10 ಕೋಟಿ ರೂಪಾಯಿ ಪಡೆಯಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗುತ್ತಿದೆ.
ಆರ್‌ಸಿಬಿ ರಿಲೀಸ್ ಮಾಡಿದ ಆಟಗಾರರ ಪಟ್ಟಿಯಲ್ಲಿ ಗ್ಲೇನ್ ಮ್ಯಾಕ್ಸ್‌ವೆಲ್ ಸಹ ಒಬ್ಬರು. ವಿಶ್ವ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಕಾಣಿಸಿಕೊಳ್ಳುವ ಈ ಪ್ಲೇಯರ್‌ಗೆ ಬಾಜಿ ಕಟ್ಟಲು ಮಾಲೀಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇವರನ್ನು ತಂಡದಲ್ಲಿ ಸೇರಿಸಿಕೊಳ್ಳುವುದರಿಂದ ತಂಡದ ಮಿಡ್ಲ್ ಆರ್ಡರ್ ಬ್ಯಾಟಿಂಗ್ ವಿಭಾಗ ಬಲಾಢ್ಯವಾಗುತ್ತದೆ. ಅಲ್ಲದೆ ಮಿಡ್ಲ್ ಓವರ್‌ಗಳಲ್ಲಿ ಇವರು ಬೌಲಿಂಗ್ ದಾಳಿಯನ್ನು ನಡೆಸಬಲ್ಲರು. ಆಸ್ಟ್ರೇಲಿಯಾದ ಈ ಪ್ಲೇಯರ್ ಬೆಸ್ಟ್ ಫೀಲ್ಡರ್ ಎಂದು ಹೇಳುವ ಅವಶ್ಯಕತೆ ಇಲ್ಲ. ಹೀಗಾಗಿ ಮಾಲೀಕರು ಇವರಿಗೆ ಬಾಜಿ ಕಟ್ಟಬಹುದು.
ಇಂಗ್ಲೆಂಡ್ ತಂಡದ ಭರವಸೆಯ ಸ್ಟಾರ್ ಆಟಗಾರ ವಿಲ್ ಜಾಕ್ಸ್ ಅವರನ್ನು ಸಹ ಆರ್‌ಸಿಬಿ ರಿಲೀಸ್ ಮಾಡಿದೆ. ಈ ಪ್ಲೇಯರ್ ಟಾಪ್ ಆರ್ಡರ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಅಲ್ಲದೆ ಅಗತ್ಯ ವಿದ್ದಾಗ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗಬಲ್ಲರ ಪ್ಲೇಯರ್. 25 ವರ್ಷದ ಯುವ ಆಟಗಾರ ಈಗಾಗಲೇ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದಾರೆ. ಕಳೆದ ಬಾರಿ ಬೆಂಗಳೂರು ತಂಡ ಇವರಿಗೆ ಮಣೆ ಹಾಕಿತ್ತು. ಇವರು ಆಡಿದ 8 ಪಂದ್ಯಗಳಲ್ಲಿ 230 ರನ್ ಸಿಡಿಸಿದ್ದು, ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕ ಸೇರಿದೆ. ಅಲ್ಲದೆ 2 ವಿಕೆಟ್ ಸಹ ಕಬಳಿಸಿದ್ದಾರೆ. ಇವರಿ ಐಪಿಎಲ್ ತಂಡಗಳ ಮಾಲೀಕರು ಬಿಡ್ ಮಾಡಬಹುದು.

ಟೀಮ್ ಇಂಡಿಯಾದ ಭರವಸೆಯ ಬೌಲರ್ ಮೊಹಮ್ಮದ್ ಸಿರಾಜ್ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರು ಐಪಿಎಲ್ 93 ಪಂದ್ಯಗಳನ್ನು ಆಡಿದ್ದು, 93 ವಿಕೆಟ್ ಪಡೆದಿದ್ದಾರೆ. ಇವರ ಏಕನಾಮಿ ಸಹ ಸ್ಥಿರವಾಗಿದ್ದು ಮಾಲೀಕರು ಇವರತ್ತ ಸೆಳೆಯುವಂತೆ ಮಾಡಿದೆ. ಅಲ್ಲದೆ ಇವರು ಹೊಸ ಚೆಂಡಿನ ಮೂಲಕ ಪರಿಣಾಮಕಾರಿಯಾಗಿ ಬೌಲಿಂಗ್ ನಡೆಸಬಲ್ಲರು. ಡೆತ್ ಓವರ್‌ಗಳಲ್ಲಿ ಇವರು ವಿಕೆಟ್ ಬೇಟೆ ನಡೆಸಿ ತಂಡಕ್ಕೆ ಆಧಾರವಾಗಬಲ್ಲರು. ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಇವರು ಪರ್ಫೆಕ್ಟ್ ಲೈನ್ ಹಾಗೂ ಲೆಂಥ್‌ನಲ್ಲಿ ಬೌಲಿಂಗ್ ನಡೆಸುವ ಕಲೆ ಹೊಂದಿದ್ದಾರೆ. ಹೀಗಾಗಿ ಇವರನ್ನು ಕೊಳ್ಳಲು ಮಾಲೀಕರು ಮುಗಿ ಬೀಳಬಹುದು.