2025ರ ಚಾಂಪಿಯನ್ಸ್ ಟ್ರೋಫಿ: ಕೊನೆಯ ಎರಡು ಸ್ಥಾನಕ್ಕಾಗಿ ಮೂರು ತಂಡಗಳ ಫೈಟ್!
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಆಯೋಜಿಸಲಾಗುತ್ತದೆ. 2023ರ ಏಕದಿನ ವಿಶ್ವಕಪ್‌ನ ಅಂಕಪಟ್ಟಿಯ ಟಾಪ್-8 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ.
ಆತಿಥೇಯ ಪಾಕಿಸ್ತಾನ ತಂಡ ಮಾತ್ರವಲ್ಲದೆ, ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿವೆ. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ 6 ತಂಡಗಳನ್ನು ನಿರ್ಧರಿಸಲಾಗಿದ್ದು, ಉಳಿದ 2 ಸ್ಥಾನಗಳಿಗೆ 3 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

2023ರ ವಿಶ್ವಕಪ್‌ನ ಅಗ್ರ-8 ತಂಡಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುತ್ತವೆ. ಪ್ರಸಕ್ತ ಟೂರ್ನಿಯಲ್ಲಿ ಆರು ತಂಡಗಳು ಈಗಾಗಲೇ ಚಾಂಪಿಯನ್ಸ್ ಟ್ರೋಫಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ.
ಏಳು ಹಾಗೂ ಎಂಟು ಎರಡು ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಯುತ್ತಿದೆ. ಈ ಸ್ಥಾನಕ್ಕಾಗಿ ಇಂಗ್ಲೆಂಡ್ ಹೊರತುಪಡಿಸಿ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ತಂಡಗಳು ಈ ಸ್ಥಾನದ ಮೇಲೆ ಕಣ್ಣು ನೆಟ್ಟಿವೆ.

ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಸೋಲನ್ನು ಎದುರಿಸಬೇಕಾಯಿತು. ಅಲ್ಲದೆ ನ್ಯೂಜಿಲೆಂಡ್ ತಂಡ ಶ್ರೀಲಂಕಾವನ್ನು ಸೋಲಿಸಿತು. ಹೀಗಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಶ್ರೀಲಂಕಾದ ಆಸೆ ಕೊನೆಗೊಂಡಿದೆ. ಅಂದರೆ, ಈಗ ಶ್ರೀಲಂಕಾ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ.
ಪ್ರಸಕ್ತ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಹೀನಾಯ ಪ್ರದರ್ಶನ ನೀಡುತ್ತಿದೆ. ವಿಶ್ವಕಪ್‌ಗೂ ಮುನ್ನ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದೇ ಗುರುತಿಸಿಕೊಂಡಿದ್ದ ಇಂಗ್ಲೆಂಡ್, ಈಗ ಚಾಂಪಿಯನ್ಸ್ ಟ್ರೋಫಿ ಸ್ಥಾನಕ್ಕಾಗಿ ಹೊರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಕ್ರಿಕೆಟ್ ಜನಕರ ಈ ಸ್ಥಿತಿ ನಿಜಕ್ಕೂ ಚಿಂತೆ ಹೆಚ್ಚಿಸಿದೆ.

ಸದ್ಯ ಇಂಗ್ಲೆಂಡ್ ಆಡಿದ 8 ಪಂದ್ಯಗಳಲ್ಲಿ 4 ಅಂಕಗಳನ್ನು ಹೊಂದಿದೆ. ಈ ತಂಡ 6 ಪಂದ್ಯಗಳಲ್ಲಿ ಸೋತಿದ್ದರೆ, 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ ಟಾಪ್-8ರಲ್ಲಿ ಸ್ಥಾನ ಪಡೆದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲಿದೆ.
ಇಂಗ್ಲೆಂಡ್ ಹೊರತುಪಡಿಸಿ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ತಂಡಗಳು ಸಹ ಸ್ಪರ್ಧಿಗಳು. ಬಾಂಗ್ಲಾದೇಶವು 8 ಪಂದ್ಯಗಳಿಂದ 4 ಅಂಕಗಳನ್ನು ಹೊಂದಿದೆ, ಆದರೆ ನೆಟ್ ರನ್ ರೇಟ್‌ನಲ್ಲಿ ಇಂಗ್ಲೆಂಡ್‌ಗಿಂತಲೂ ಈ ತಂಡಗಳು ಕೆಳಗಿವೆ.
ಇದಲ್ಲದೇ ನೆದರ್ಲೆಂಡ್ 8 ಪಂದ್ಯಗಳಲ್ಲಿ 4 ಅಂಕ ಹೊಂದಿದೆ. ಡಚ್ ತಂಡ ಅಂಕಪಟ್ಟಿಯಲ್ಲಿ ಕೊನೆಯ ಅಂದರೆ ಹತ್ತನೇ ಸ್ಥಾನದಲ್ಲಿದೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಡಲಾಗುತ್ತದೆ. ಈ ಕಾರಣಕ್ಕಾಗಿ, ಪಾಕಿಸ್ತಾನವು ಆತಿಥ್ಯ ವಹಿಸುತ್ತಿದ್ದರಿಂದ ನೇರ ಪ್ರವೇಶವನ್ನು ಪಡೆಯುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications