Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಬ್ಲ್ಯಾಕ್ ಲೈವ್ಸ್ ಮ್ಯಾಟರ್‌'ಗೆ 30 ಮಾಜಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಬೆಂಬಲ

30 South Africa cricketers, including Herschelle Gibbs supporting BLM movement

ಕೇಪ್‌ಟೌನ್, ಜುಲೈ 15: ಮಖಾಯಾ ಎನ್ಟಿನಿ, ಹರ್ಷಲ್ ಗಿಬ್ಸ್ ಮತ್ತು ವೆರ್ನಾನ್ ಫಿಲಾಂಡರ್ ಸೇರಿ ಒಟ್ಟಿಗೆ 30ಕ್ಕೂ ಹೆಚ್ಚು ದಕ್ಷಿಣ ಆಫ್ರಿಕಾ ಮಾಜಿ ಆಟಗಾರರು 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' (ಬಿಎಲ್‌ಎಮ್) ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ವರ್ಣಭೇದ ನೀತಿ ನಮ್ಮ ದೇಶದಲ್ಲಿ ಕ್ರಿಕೆಟ್‌ನ ಭಾಗವಾಗಿದೆ ಎಂದು ಮಾಜಿ ಕ್ರಿಕೆಟಿಗರು ಹೇಳಿದ್ದಾರೆ.

ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಸಾನಿ ಎನ್‌ಗಿಡಿಯನ್ನು ಆಫ್ರಿಕಾ ಮಾಜಿ ಆಟಗಾರರಾದ ಪ್ಯಾಟ್ ಸಿಮ್ಕಾಕ್ಸ್ ಮತ್ತು ಬೋಟಾ ಡಿಪ್ಪೆನಾರ್ ಟೀಕಿಸಿದ್ದರು. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಮಾಜಿ ಆಟಗಾರರು ಎನ್‌ಗಿಡಿ ಬೆನ್ನಿಗೆ ನಿಂತಿದ್ದಾರೆ.

ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಮತ್ತು ಲುಂಗಿ ಎನ್‌ಗಿಡಿಗೆ 30 ಮಾಜಿ ಆಟಗಾರರು ಸ್ಟೇಟ್‌ಮೆಂಟ್‌ಗೆ ಸಹಿ ಮಾಡುವ ಮೂಲಕ ಬೆಂಬಲಿಸಿದ್ದಾರೆ. ಹೇಳಿಕೆಗೆ ಸಹಿ ಮಾಡಿದವರಲ್ಲಿ ಮಖಾಯಾ ಎನ್ಟಿನಿ, ಹರ್ಷಲ್ ಗಿಬ್ಸ್, ವೆರ್ನಾನ್ ಫಿಲಾಂಡರ್, ಅಶ್ವೆಲ್ ಪ್ರಿನ್ಸ್, ಜೆಪಿ ಡುಮಿನಿ, ಪಾಲ್ ಆಡಮ್ಸ್ ಇಂಥ ಪ್ರಮುಖ ಹೆಸರುಗಳು ಸೇರಿವೆ.

'ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅನ್ನು ಬೆಂಬಲಿಸಿದ್ದಕ್ಕಾಗಿ ನಾವು ಲುಂಗಿ ಎನ್‌ಗಿಡಿಯನ್ನು ಪ್ರಶಂಸಿಸುತ್ತೇವೆ. ನಾವೂ ಕೂಡ ಬೆಂಬಲಕ್ಕೆ ಜೊತೆಗೂಡುತ್ತಿದ್ದೇವೆ. ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾಗಿ ಲುಂಗಿ ಎನ್‌ಗಿಡಿ ಟೀಕಿಸಲ್ಪಟ್ಟಿರುವುದನ್ನು ಗಮನಿಸಿದ್ದೇವೆ. ಹೀಗಾಗಿ ಹಿಂದಿನ ಮತ್ತು ಈಗಿನ ಎಲ್ಲಾ ದಕ್ಷಿಣ ಆಫ್ರಿಕಾ ಸಹ ಆಟಗಾರರು ಬಿಎಲ್‌ಎಮ್‌ಗೆ ಪ್ರಬಲ ಬೆಂಬಲ ನೀಡುತ್ತಿದ್ದೇವೆ,' ಎಂದು ಸ್ಟೇಟ್‌ಮೆಂಟ್‌ನಲ್ಲಿ ಬರೆಯಲಾಗಿದೆ.

Story first published: Wednesday, July 15, 2020, 10:02 [IST]
Other articles published on Jul 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+