Virat Kohli: ಸಚಿನ್ ದಾಖಲೆ, 2ನೇ ವಿಶ್ವಕಪ್ ಬೆನ್ನಟ್ಟಿರುವ 'ಕಿಂಗ್' ವಿರಾಟ್ ಕೊಹ್ಲಿಗೆ 35ನೇ ಜನ್ಮದಿನ
ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಇಂದು (ನವೆಂಬರ್ 5) 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಮತ್ತು ಈ ಬಾರಿ ಅವರ ಜನ್ಮದಿನದ ಸಂದರ್ಭವು ಹೆಚ್ಚು ವಿಶೇಷವಾಗಿರುತ್ತದೆ.
ಚೇಸ್ ಮಾಸ್ಟರ್ ಖ್ಯಾತಿಯ ವಿರಾಟ್ ಕೊಹ್ಲಿ ಗಳಿಸಿದ ಪುರಸ್ಕಾರಗಳು ಮತ್ತು ರನ್‌ಗಳಿಗಾಗಿ ಕ್ರಿಕೆಟ್‌ನ ಅಗಾಧ ವ್ಯಕ್ತಿಯಾಗಿ ಬೆಳೆದಿದ್ದಾರೆ. ಕೇವಲ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿದಿದ್ದಾರೆ.
ವಿರಾಟ್ ಕೊಹ್ಲಿ ಈ ಬಾರಿ ವಿಶೇಷ ಹುಟ್ಟುಹಬ್ಬದ ಶುಭಾಶಯಗಳನ್ನು ಹೊಂದಿರುತ್ತಾರೆ. ಏಕೆಂದರೆ, ಸದ್ಯ ಭಾರತ ತಂಡ ತವರಿನಲ್ಲಿ ಏಕದಿನ ವಿಶ್ವಕಪ್ ಆಡುತ್ತಿದೆ. 12 ವರ್ಷಗಳ ಅಂತರದ ನಂತರ ಐಸಿಸಿ ಟ್ರೋಫಿಯನ್ನು ಎತ್ತಿಹಿಡಿಯುವ ಗುರಿಯನ್ನು ಹೊಂದಿದೆ.

2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಾಗ ವಿರಾಟ್ ಕೊಹ್ಲಿ ಯುವ ಉದಯೋನ್ಮುಖ ಆಟಗಾರನಾಗಿದ್ದರು ಮತ್ತು ಅಭಿಯಾನದ ಕೊನೆಯಲ್ಲಿ ಭಾರತ ತಂಡವು ಪ್ರಮುಖ ಟ್ರೋಫಿಯನ್ನು ಎತ್ತುವುದಕ್ಕಾಗಿ ಕೆಲವು ಪ್ರಮುಖ ಪ್ರದರ್ಶನಗಳನ್ನು ನೀಡಿದರು.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2015 ಮತ್ತು 2019ರಲ್ಲಿ ಭಾರತ ತಂಡ ಐಸಿಸಿ ವಿಶ್ವಕಪ್‌ನ ಹತ್ತಿರ ಬಂದು ನಿರಾಸೆ ಅನುಭವಿಸಿತ್ತು. ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಈ ಬಾರಿ ತಮ್ಮ ಆಟದಲ್ಲಿ ಮೇಲಿರುವಂತೆ ತೋರುತ್ತಿದೆ.
2023ರ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧ ಅಜೇಯ 103 ರನ್‌ಗಳ ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಶತಕವು 35 ವರ್ಷದ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಲು ಒಂದು ಹೆಜ್ಜೆ ಹತ್ತಿರಕ್ಕೆ ಬಂದಿದ್ದಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಬೆನ್ನಟ್ಟಿರುವ ದಾಖಲೆ ಇದೊಂದೇ ಅಲ್ಲ.
2 ವಿಶ್ವಕಪ್ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ
ಭಾರತೀಯ ಕ್ರಿಕೆಟ್‌ನ ಕೆಲವು ದೊಡ್ಡ ಲೆಜೆಂಡ್‌ಗಳು ಭಾರತ ತಂಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ, ಅವರಲ್ಲಿ ಯಾರೂ ತಮ್ಮ ವೃತ್ತಿಜೀವನದಲ್ಲಿ ಎರಡು ಏಕದಿನ ವಿಶ್ವಕಪ್ ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಅವರಂತ ದಿಗ್ಗಜರು ಕೇವಲ ಒಂದು ವಿಶ್ವಕಪ್ ಗೆಲ್ಲಲು ಮಾತ್ರ ಸಾಧ್ಯವಾಗಿದೆ. ಆದರೆ ವಿರಾಟ್ ಕೊಹ್ಲಿಗೆ ಇದೀಗ ಎರಡನೇ ವಿಶ್ವಕಪ್ ಗೆಲ್ಲುವ ಅವಕಾಶವಿದೆ.
ವಿರಾಟ್ ಕೊಹ್ಲಿ ವಿಶ್ವಕಪ್ ಗೆಲ್ಲುವ ಅನ್ವೇಷಣೆಯಲ್ಲಿ ಯಾವುದೇ ಅವಕಾಶವನ್ನು ಕೈಬಿಡುವುದಿಲ್ಲ. ಈ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಇದುವರೆಗೆ ಆಡಿದ 7 ಇನ್ನಿಂಗ್ಸ್‌ಗಳಲ್ಲಿ 442 ರನ್ ಗಳಿಸಿದ್ದಾರೆ ಮತ್ತು ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಮೂರು ಆಟಗಾರರ ಪಟ್ಟಿಯಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಪರೂಪದ ವೈಫಲ್ಯದ ಹೊರತಾಗಿ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ.
ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಶತಕಗಳನ್ನು ಸ್ವಲ್ಪದರ ಅಂತರದಲ್ಲಿ ತಪ್ಪಿಸಿಕೊಂಡರು. ಇದೇ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ದಾಖಲೆ ನಿರ್ಮಿಸಲಿದ್ದಾರೆ ಎಂಬ ಸೂಚನೆ ತೋರುತ್ತದೆ.
ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆ ಮೇಲೆ ವಿರಾಟ್ ಕೊಹ್ಲಿ ಕಣ್ಣು
ಶ್ರೀಲಂಕಾ ವಿರುದ್ಧ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 88 ರನ್ ಗಳಿಸಿ ಔಟಾದಾಗ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೌನ ಆವರಿಸಿತು.
ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 48 ಏಕದಿನ ಶತಕಗಳನ್ನು ಗಳಿಸಿದ್ದಾರೆ ಮತ್ತು ಈ ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ಮುರಿಯುತ್ತಾರೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ.
ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೆಲವು ದಿನಗಳ ಹಿಂದೆ ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬದಂದು 50ನೇ ಏಕದಿನ ಶತಕವನ್ನು ಗಳಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications