ಪ್ರಸಕ್ತ ಸಾಲಿನಿಂದ ರಣಜಿಯಲ್ಲಿ ಆಡಲಿವೆ 37 ತಂಡಗಳು

ಬೆಂಗಳೂರು, ಜುಲೈ 18: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಣಜಿ ಕ್ರಿಕೆಟ್ ಆವೃತ್ತಿಯನ್ನು ಇನ್ನಷ್ಟು ವಿಸ್ತರಿಸಿದೆ.
2018-19ನೇ ಸಾಲಿನ ರಣಜಿ ಟ್ರೋಫಿಯಲ್ಲಿ 37 ತಂಡಗಳು ಪಾಲ್ಗೊಳ್ಳಲಿದ್ದು, 9 ಹೊಸ ತಂಡಗಳು ಸೇರ್ಪಡೆಯಾಗಿವೆ.
ಎಲೈಟ್ ಗುಂಪಿನ ಎ ಮತ್ತು ಬಿ ಗುಂಪಿನಲ್ಲಿ ತಲಾ 9 ತಂಡಗಳು ಇರಲಿದ್ದು, ಸಿ ಗುಂಪಿನಲ್ಲಿ 10 ತಂಡಗಳು ಇರಲಿವೆ.
ಹೊಸ ಒಂಬತ್ತು ತಂಡಗಳು ಪ್ಲೇಟ್ ಗ್ರೂಪ್ ವಿಭಾಗದಲ್ಲಿ ಆಡಲಿವೆ. ಅರುಣಾಚಲ ಪ್ರದೇಶ, ಬಿಹಾರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪುದುಚೆರಿ, ಸಿಕ್ಕಿಂ ಮತ್ತು ಉತ್ತರಾಖಂಡಗಳು ರಣಜಿ ಆಡುವ ಅವಕಾಶ ಗಿಟ್ಟಿಸಿಕೊಂಡಿವೆ.
ಪ್ಲೇಟ್ ಗ್ರೂಪ್ ಹಂತದಲ್ಲಿ ಕ್ವಾರ್ಟರ್ ಫೈನಲ್ಸ್‌ಗೆ ಪ್ರವೇಶ ಪಡೆಯುವ ತಂಡಗಳು ಮುಂದಿನ ಆವೃತ್ತಿಯಲ್ಲಿ ಎಲೈಟ್ ಸಿ ಗುಂಪಿಗೆ ಅರ್ಹತೆ ಪಡೆದುಕೊಳ್ಳಲಿವೆ.
ಎಲೈಟ್ ಗ್ರೂಪ್ ಸಿನ ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶ ಪಡೆಯುವ ಮೊದಲ ಎರಡು ತಂಡಗಳು ಎಲೈಟ್ ಗ್ರೂಪ್ ಎ ಮತ್ತು ಬಿ ಗೆ ಮುಂದಿನ ಆವೃತ್ತಿಯಲ್ಲಿ ಬಡ್ತಿ ಪಡೆದುಕೊಳ್ಳಲಿವೆ.
ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಗಳಲ್ಲಿಯೂ ಎಲ್ಲ 37 ತಂಡಗಳು ಭಾಗವಹಿಸಲಿವೆ.
ರಣಜಿ ಟ್ರೋಫಿ ನಾಕೌಟ್ ಪಂದ್ಯಗಳು ಜನವರಿ 15 ರಿಂದ ಆರಂಭವಾಗಲಿವೆ. ಟ್ರೋಫಿ ಗೆದ್ದ ತಂಡ ಮತ್ತು ಭಾರತದ ಇತರೆ ತಂಡಗಳ ನಡುವಣ ಇರಾನಿ ಟ್ರೋಫಿ ಫೆಬ್ರುವರಿ 11 ರಂದು ನಡೆಯಲಿದೆ.
ಆಗಸ್ಟ್ 17ರಿಂದ ನಾಲ್ಕು ದಿನಗಳ ಆಟದ ದುಲೀಪ್ ಟ್ರೋಫಿ ನಡೆಯಲಿದ್ದು, ನಾಲ್ಕು ತಂಡಗಳ ಈ ಟೂರ್ನಿಯಲ್ಲಿ ಪಿಂಕ್ ಚೆಂಡಿನ ಪ್ರಯೋಗವನ್ನು ಬಿಸಿಸಿಐ ಮುಂದುವರಿಸಲಿದೆ.
ಮಹಿಳೆಯರ ಕ್ರಿಕೆಟ್
ಮಹಿಳೆಯರ ದೇಶಿ ಕ್ರಿಕೆಟ್ ಟೂರ್ನಿಯನ್ನು ಕೂಡ ಬಿಸಿಸಿಐ ಹಿಗ್ಗಿಸಿದೆ. ಹಿರಿಯರ ತಂಡ ಹಾಗೂ 23 ವರ್ಷದ ಒಳಗಿನವರ ಮಹಿಳಾ ತಂಡಗಳಿಗೆ ಪ್ರತ್ಯೇಕ ಟಿ20 ಹಾಗೂ ಏಕದಿನದ ಚಾಲೆಂಜರ್ ಟ್ರೋಫಿಯನ್ನು ಪರಿಚಯಿಸಿದೆ.
ಈಗಾಗಲೇ ಟಿ 20 ಲೀಗ್ ಹಾಗೂ ಏಕದಿನದ ಪಂದ್ಯಗಳ ಲೀಗ್ ಅಸ್ತಿತ್ವದಲ್ಲಿದ್ದು, ಈ ಎರಡು ಹೊಸ ಸೇರ್ಪಡೆಯಾಗಿವೆ.
ಲೀಗ್ ಸುತ್ತಿನಲ್ಲಿ ಮೂರು ತಂಡಗಳು ತಲಾ ಎರಡು ಬಾರಿ ಮುಖಾಮುಖಿಯಾಗಲಿದ್ದು, ಮೊದಲ ಎರಡು ತಂಡಗಳು ಫೈನಲ್ ತಲುಪಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications