For Quick Alerts
ALLOW NOTIFICATIONS  
For Daily Alerts
 

ಮೆಲ್ಬೋರ್ನ್ ಟೆಸ್ಟ್ ಡ್ರಾ, ಸರಣಿ ಆಸ್ಟ್ರೇಲಿಯಾ ವಶ

By Mahesh

ಮೆಲ್ಬೋರ್ನ್, ಡಿ.30: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪೇರಿಸಿದ ಬೃಹತ್ ಮೊತ್ತಕ್ಕೆ ತಕ್ಕ ಉತ್ತರ ನೀಡಲು ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ವಿಫಲವಾಗಿತ್ತು. ಪಂದ್ಯ ಗೆಲ್ಲಲು ಟೀಂ ಇಂಡಿಯಾ ಮುಂದೆ 384ರನ್ ಗಳ ಮೊತ್ತ ನೀಡಲಾಗಿತ್ತು. ಆಸೀಸ್ ತನ್ನ ಎರಡನೇ ಇನ್ನಿಂಗ್ಸ್ 318/9 ಸ್ಕೋರಿಗೆ ಡಿಕ್ಲೇರ್ ಮಾಡಿಕೊಂಡಿದ್ದು, ಪಂದ್ಯ ಕುತೂಹಲಕಾರಿಯಾಗಿತ್ತು. ಅದರೆ, ಅಂತಿಮವಾಗಿ ವಿಕೆಟ್ ಉಳಿಸಿಕೊಂಡ ಭಾರತ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

47 ಓವರ್ ಗಳಲ್ಲಿ 133/4 ಸ್ಕೋರ್ ಮಾಡಿದ್ದ ಟೀಂ ಇಂಡಿಯಾ ಅಂತಿಮವಾಗಿ 174/6 ಸ್ಕೋರ್ ಮಾಡಿದ್ದಾಗ ಪಂದ್ಯಕ್ಕೆ ತೆರೆ ಎಳೆಯಲಾಯಿತು. ಇನ್ನೂ 4 ಓವರ್ ಬಾಕಿ ಇತ್ತು. ಭಾರತಕ್ಕೆ 210 ರನ್ ಬೇಕಿತ್ತು. ಕ್ರೀಸ್ ನಲ್ಲಿ ಧೋನಿ 24 ಹಾಗೂ ಅಶ್ವಿನ್ 8 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡು ಪಂದ್ಯವನ್ನು ಡ್ರಾ ಮಾಡಿಕೊಂಡರು. ಅಂತಿಮ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ಜ.6ರಂದು ನಡೆಯಲಿದೆ.

India 104/3 chasing 384 to win


ಭಾರತದ ಚೇಸಿಂಗ್:
384ರನ್ ಮೊತ್ತ ಚೇಸ್ ಮಾಡಲು ಆರಂಭಿಸಿದ ಧೋನಿ ಪಡೆ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಮುರಳಿ ವಿಜಯ್ 11 ರನ್, ಶಿಖರ್ ಧವನ್ ಶೂನ್ಯ ಸುತ್ತಿದರೆ, ಮುಂಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಬಂದ ಕೆಎಲ್ ರಾಹುಲ್ ಅವರು ಕೇವಲ 1 ರನ್ ಗಳಿಸಿ ಔಟಾದರು.

19 ರನ್ನಿಗೆ 3 ವಿಕೆಟ್ ಕಳೆದು ಕೊಂಡು ದುಃಸ್ಥಿತಿಯಲ್ಲಿದ್ದ ಟೀಂ ಇಂಡಿಯಾಕ್ಕೆ ವಿರಾಟ್ ಕೊಹ್ಲಿ ಹಾಗೂ ರಹಾನೆ ಚೇತರಿಕೆ ನೀಡಿದರು. ಆದರೆ, ಕೊಹ್ಲಿ 54 ರನ್ ಗಳಿಸಿ ಹ್ಯಾರಿಸ್ ಬೌಲಿಂಗ್ ನಲ್ಲಿ ಬರ್ನ್ಸ್ ಗೆ ಕ್ಯಾಚಿತ್ತು ಪೆವಿಲಿಯನ್ ತೆರಳಿದರು.

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+