For Quick Alerts
ALLOW NOTIFICATIONS  
For Daily Alerts
 

ಲಂಕಾ ವಿರುದ್ಧ ಸರಣಿ ಗೆಲ್ಲಲು ಭಾರತಕ್ಕೆ 216ರನ್ ಟಾರ್ಗೆಟ್

By Mahesh

ವಿಶಾಖಪಟ್ಟಣಂ, ಡಿಸೆಂಬರ್ 17: ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 215ರನ್ನಿಗೆ ಟೀಂ ಇಂಡಿಯಾ ನಿಯಂತ್ರಿಸಿದೆ. ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ತಲಾ 3 ವಿಕೆಟ್ ಗಳಿಸಿದರು.

ಸ್ಕೋರ್ ಕಾರ್ಡ್

2015ರ ಅಕ್ಟೋಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿದ್ದ ಭಾರತ, ಆ ನಂತರ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಇನ್ನೊಂದೆಡೆ ಶ್ರೀಲಂಕಾ ತಂಡ ದ್ವಿಪಕ್ಷೀಯ ಸರಣಿಯಲ್ಲಿ ಮೊದಲ ಸರಣಿ ಜಯದ ನಿರೀಕ್ಷೆಯಲ್ಲಿದೆ.

3rd-odi India vs Sri Lanka Match report Visakhapatnam

ಧರ್ಮಶಾಲದಲ್ಲಿ ಮೊದಲ ಪಂದ್ಯ ಸೋತ ರೋಹಿತ್ ಪಡೆ, ಮೊಹಾಲಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಜಯಭೇರಿ ಬಾರಿಸಿದ್ದರಿಂದ ಸರಣಿ 1-1ರ ಸಮಬಲ ಕಂಡಿದೆ. ಇಂದಿನ ಪಂದ್ಯ ಗೆದ್ದವರು ಸರಣಿ ಗೆದ್ದ ಸಂಭ್ರಮಾಚರಣೆಯಲ್ಲಿ ತೊಡಗಲಿದ್ದಾರೆ.

ಟಾಸ್ ವರದಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಅವರು ಟಾಸ್ ಗೆದ್ದು, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ತಂಡದಲ್ಲಿ ಬದಲಾವಣೆ: ಅಜಿಂಕ್ಯ ರಹಾನೆ ಅವರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಗೆ ಸ್ಥಾನ ಸಿಕ್ಕಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+