3ನೇ ಏಕದಿನದಲ್ಲಿ 77 ರನ್ ಜಯ ಸಾಧಿಸಿದ ಭಾರತ
ಮೀರ್ ಪುರ್ , ಜೂ. 24 : ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಕ್ಲೀನ್ ಸ್ವೀಪ್ ಹಾನಿಯಿಂದ ತಪ್ಪಿಸಿಕೊಂಡಿತು. ಬಾಂಗ್ಲಾದೇಶನ್ನು 77 ರನ್ ಗಳಿಂದ ಸೋಲಿಸಿದರೂ ಸರಣಿಯಲ್ಲಿ ಯಾವುದೇ ಮಹತ್ವದ ಸಾಧನೆ ಮಾಡಿದಂತೆ ಆಗಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಶಿಖರ್ ಧವನ್ ಮತ್ತು ನಾಯಕ ಧೋನಿ ಅವರ ಅರ್ಧಶತಕದಿಂದಾಗಿ ಆರು ವಿಕೆಟಿಗೆ 317 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಭಾರತದ ದಾಳಿಗೆ ಕುಸಿದ ಬಾಂಗ್ಲಾದೇಶ 47 ಓವರ್‌ಗಳಲ್ಲಿ 240 ರನ್ನಿಗೆ ಆಲೌಟಾಯಿತು.
ಶಿಕರ್ ಧವನ್ ಮತ್ತು ನಾಯಕ ಎಂಎಸ್ ಧೋನಿ ಅರ್ಧಶತಕ ಮತ್ತು ಮಧ್ಯಮ ಕ್ರಮಾಂಕದ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ಉತ್ತಮ ಮೊತ್ತ ಕಲೆಹಾಕಲು ಸಾಧ್ಯವಾಗಿತ್ತು. ಸುರೇಶ್ ರೈನಾ ಬೌಲಿಂಗ್ ನಲ್ಲೂ ಮಿಂಚಿದರು.
ಭಾರತ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡಲಾಗಿತ್ತು. ರವೀಂದ್ರ ಜಡೇಜಾ ಮತ್ತು ಭುವನೇಶ್ವರ ಕುಮಾರ್ ಅವರನ್ನು ಕೈ ಬಿಟ್ಟು, ಸ್ಟುವರ್ಟ್ ಬಿನ್ನಿ ಮತ್ತು ಉಮೇಶ್ ಯಾದವ್ ಅವರನ್ನು ಆಡಿಸಲಾಗಿತ್ತು. ಬಾಂಗ್ಲಾ ಪರ ಗಾಯಾಳು ಯಸ್ಕೀನ್ ಅಹಮದ್ ಬದಲಿಗೆ ಅರಾಫತ್ ಸನ್ನಿ ತಂಡ ಸೇರಿಕೊಂಡಿದ್ದರು.[ರಹಾನೆ ಹೊರಗಿಟ್ಟ ಧೋನಿ, ಜಡೇಜ ಬೆನ್ನು ತಟ್ಟಿದ್ರು]

ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಬಾಂಗ್ಲಾದೇಶ ಸರಣಿ ಕೈ ವಶ ಮಾಡಿಕೊಂಡಿತ್ತು. ವಿಶ್ವದಾಖಲೆ ಪ್ರದರ್ಶನ ನೀಡಿದ ಮುಸ್ತುಫಿಜುರ್ ರೆಹಮಾನ್ ಸದ್ಯ ಬಾಂಗ್ಲಾ ಹೀರೋ. [ಭಾರತ ಸರಣಿ ಸೋತಿದ್ದು ಹೇಗೆ]
ಬಾಂಗ್ಲಾ ಪ್ರವಾಸದ ನಂತರ ಭಾರತ ಸ್ವದೇಶಕ್ಕೆ ಹಿಂದಿರುಗಲಿದೆ. ಜಿಂಬಾಬ್ವೆ ಪ್ರವಾಸವೂ ರದ್ದಾಗಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿವರೆಗೆ ಕಾಯಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications