ಆಸ್ಟ್ರೇಲಿಯ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ
ಸಿಡ್ನಿ, ಜ.31: ಪ್ರವಾಸಿ ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕ ಶೇನ್ ವಾಟ್ಸನ್ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಕೊಂಡು ಉತ್ತಮ ಮೊತ್ತ ದಾಖಲಿಸಿದರೂ ಪಂದ್ಯ ಗೆಲ್ಲಲಾಗಲಿಲ್ಲ. ಆಸ್ಟ್ರೇಲಿಯಾ ನೀಡಿದ್ದ 198ರನ್ ಗಳ ದಾಖಲೆ ಮೊತ್ತವನ್ನು ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು ದಾಟಿ ಜಯಭೇರಿ ಬಾರಿಸಿದೆ.
ಈ ಮೂಲಕ ಮೂರು ಟಿ20 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಧೋನಿ ಪಡೆ ಹೊಸ ಇತಿಹಾಸ ಬರೆದಿದೆ. ಜೊತೆಗೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿದೆ. ಸರಣಿಯುದ್ದಕ್ಕೂ ಬಿರುಸಿನ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು.[ಧೋನಿ ವಿರುದ್ಧ ಯುವಿ ಅಪ್ಪ ದೂರು ಕೊಡ್ತಾರಾ? ಗುಲ್ಲೋ ಗುಲ್ಲು]

ಟೀಂ ಇಂಡಿಯಾ ಪರ ರನ್ ಚೇಸ್ ನಲ್ಲಿ ರೋಹಿತ್ ಶರ್ಮ 38 ಎಸೆತಗಳಲ್ಲಿ 52 ರನ್ (5X4, 1X6), ಶಿಖರ್ ಧವನ್ 9 ಎಸೆತಗಳಲ್ಲಿ 26ರನ್(4x4,1x6) ಗಳಿಸಿದರು. ನಂತರ ವಿರಾಟ್ ಕೊಹ್ಲಿ 50ರನ್ (36ಎಸೆತ 2x4,1x6), ಅಂತಿಮವಾಗಿ 12 ಎಸೆತಗಳಲ್ಲಿ ಯುವರಾಜ್ ಸಿಂಗ್ 15ರನ್ ಮತ್ತು ರೈನಾ 25 ಎಸೆತಗಳಲ್ಲಿ 49ರನ್ (6x4,1x6) ಬಾರಿಸಿ ಗೆಲುವಿನ ರೂವಾರಿಗಳಾದರು.[ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಭಾರತದ ಮಹಿಳೆಯರ ತಂಡ]

71 ಎಸೆತಗಳಲ್ಲಿ 124ರನ್ ಗಳಿಸಿ ಅಜೇಯರಾಗಿ ಉಳಿದ ವಾಟ್ಸನ್ ಅವರ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 197ರನ್ ಗಳಿಸಿದೆ. ಉಳಿದಂತೆ ಹೆಡ್ ಮಾತ್ರ 24 ರನ್ ಗಳಿಸಿದರು. ಟೀಂ ಇಂಡಿಯಾ ಬೌಲಿಂಗ್ ಮೊನಚು ಕಳೆದುಕೊಂಡಿತ್ತು. ನೆಹ್ರಾ, ಬೂಮ್ರಾ, ಅಶ್ವಿನ್, ಜಡೇಜ, ಯುವರಾಜ್ ತಲಾ 1 ವಿಕೆಟ್ ಪಡೆದರು.
ಜನವರಿ 31ರ ಭಾನುವಾರ ಸಿಡ್ನಿ ಕ್ರಿಕೆಟ್ ಮೈದಾನ (ಎಸ್ ಸಿಜಿ) ದಲ್ಲಿ ಆಸ್ಟ್ರೇಲಿಯಾ ತಂಡ 5 ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಗಾಯಾಳು ಅರೋನ್ ಫಿಂಚ್ ಬದಲಿಗೆ ಉಸ್ಮಾನ್ ಖವಾಜ ಬಂದಿದ್ದಾರೆ, ಕೆಮರೂನ್ ಬ್ಯಾನ್ ಕ್ರಾಫ್ಟ್, ಟ್ರಾವಿಸ್ ಹೆಡ್, ಕೆಮರೂನ್ ಬೊಯ್ಸ್, ಶೇನ್ ಟೈಟ್ ತಂಡದಲ್ಲಿದ್ದಾರೆ.

ಜೇಮ್ಸ್ ಫಾಲ್ಕ್ನರ್, ಜಾನ್ ಹೇಸ್ಟಿಂಗ್ಸ್, ಮ್ಯಾಥ್ಯೂ ವೇಡ್, ನಾಥನ್ ಲಿಯಾನ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆಸ್ಟ್ರೇಲಿಯಾ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ನಿರೀಕ್ಷೆಯಲ್ಲಿರುವ ಧೋನಿ ಪಡೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ಭಾರತ ಪ್ರವಾಸದ ಕೊನೆ ಪಂದ್ಯವಾಗಿದೆ. (ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications