ಭಾರತ vs ಆಸ್ಟ್ರೇಲಿಯಾ: ಆಸಿಸ್ ನೆಲದಲ್ಲಿ ವಿರಾಟ್ ಕೊಹ್ಲಿ ಮುಡಿಗೇರುತ್ತಾ ಮತ್ತೊಂದು ಗರಿಮೆ?

ಮೊದಲ ಎರಡು ಏಕದಿನ ಪಂದ್ಯಗಳನ್ನು ಸೋತು ಆಸ್ಟ್ರೇಲಿಯಾ ನೆಲದಲ್ಲಿ ಕಠಿಣ ಕ್ಷಣಗಳನ್ನು ಎದುರಿಸುತ್ತಿದ್ದ ಟೀಮ್ ಇಂಡಿಯಾ ಕ್ಯಾನ್‌ಬೆರಾಗೆ ಬಂದಿಳಿದ ಬಳಿಕ ಅದೃಷ್ಟ ಬದಲಾಗಿಬಿಟ್ಟಿತ್ತು. ಕ್ಯಾನ್‌ಬೆರಾದಲ್ಲಿ ನಡೆದ ಅಂತಿಮ ಏಕದಿನ ಪಂದ್ಯವನ್ನು ಗೆದ್ದ ಭಾರತ ಬಳಿಕ ಮೊದಲ ಟಿ20 ಪಂದ್ಯವನ್ನು ತನ್ನದಾಗಿಸಿಕೊಂಡಿತು. ಬಳಿಕ ಮತ್ತೆ ಸಿಡ್ನಿಗೆ ತೆರಳಿ ಎರಡನೇ ಟಿ20 ಪಂದ್ಯವನ್ನೂ ಗೆದ್ದು ಚುಟುಕು ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.
ಭಾರತ ಕ್ಯಾನ್‌ಬೆರಾದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಗೆದ್ದು ಕ್ಲೀಸ್ ಸ್ವೀಪ್ ತಪ್ಪಿಸಿಕೊಂಡಿತ್ತು. ಈಗ ಟಿ20 ಕ್ರಿಕೆಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಕ್ಲೀನ್ ಸ್ವೀಪ್ ಮುಖಭಂಗಕ್ಕೆ ಒಳಪಡಿಸುವ ಹುಮ್ಮಸ್ಸಿನಲ್ಲಿದೆ. ಸಿಡ್ನಿಯಲ್ಲಿ ಮಂಗಳವಾರ ನಡೆಯುವ ಮೂರನೇ ಟಿ20 ಪಂದ್ಯದಲ್ಲಿ ಗೆಲವು ಸಾಧ್ಯವಾದರೆ ನಾಯಕ ಕೊಹ್ಲಿ ಮುಕುಟಕ್ಕೆ ಮತ್ತೊಂದು ಗರಿ ಸೇರಿಕೊಳ್ಳಲಿದೆ.
ಹಾಗಾದರೆ ನಾಯಕ ವಿರಾಟ್ ಕೊಹ್ಲಿ ಯಾವ ವಿಶೇಷ ಸಾಧನೆಯನ್ನು ಮಾಡಲಿದ್ದಾರೆ? ಟಿ20 ಕ್ರಿಕೆಟ್‌ನಲ್ಲಿ ಸತತ ಗೆಲುವಿನ ಸಾಧನೆ ಮಾಡಿ ಮುನ್ನುಗ್ಗುತ್ತಿರುವ ಭಾರತ ತಂಡ ಅಂತಿಮ ಪಂದ್ಯವನ್ನು ಗೆಲ್ಲಲಿದೆಯಾ? ಮುಂದೆ ಓದಿ..

ಆಸಿಸ್ ನೆಲದಲ್ಲಿ ಕ್ಲೀನ್ ಸ್ವೀಪ್?
ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟಿ20 ಪಂದ್ಯವನ್ನು ಭಾರತ ಗೆದ್ದರೆ ಟಿ20 ಸರಣಿಯನ್ನು ಭಾರತ ವೈಟ್ ವಾಶ್ ಮಾಡಲಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವನ್ನು ಅದರದ್ದೇ ನೆಲದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಕ್ಲೀನ್ ಸ್ವೀಪ್ ಮಾಡಿದ ಸಾಧನೆಯನ್ನು ಕೊಹ್ಲಿ ಮಾಡಲಿದ್ದಾರೆ. ಈ ಮೂಲಕ ಮಾಜಿ ನಾಯಕ ಎಂಎಸ್ ಧೋನಿ ಮಾಡಿದ ಸಾಧನೆಗೆ ಸಮನಾದ ಸಾಧನೆಯನ್ನು ಕೊಹ್ಲಿ ಮಾಡಿದಂತಾಗಲಿದೆ.

ಈ ಸಾಧನೆ ಮಾಡಿದ ಎರಡನೇ ಭಾರತೀಯ ನಾಯಕ
ಆಸ್ಟ್ರೇಲಿಯಾವನ್ನು ಅದರದ್ದೇ ನೆಲದಲ್ಲಿ ಟಿ20 ಮಾದರಿಯಲ್ಲಿ ಕ್ಲೀನ್ ಸ್ವೀಪ್ ಮೂಲಕ ಸೋಲಿಸಿದ ಭಾರದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರಾಗುವ ಸಾಧ್ಯತೆಯಿದೆ. 2016ರಲ್ಲಿ ನಾಯಕ ಮಹೇಂದ್ರ ಧೋನಿ ಮೊದಲ ಬಾರಿಗೆ ಈ ಸಾಧನೆಯನ್ನು ಮಾಡಿದ್ದರು. ಮೆಲ್ಬೋರ್ನ್, ಬ್ರಿಸ್ಬೇನ್ ಹಾಗೂ ಸಿಡ್ನಿಯಲ್ಲಿ ನಡೆದ ಪಂದ್ಯವನ್ನು ಭಾರತ ಗೆದ್ದು ಬೀಗಿತ್ತು. ಈ ಸರಣಿಯಲ್ಲಿ ವಿರಾಟ್ ಕೊಹ್;ಇ 199 ರನ್ ಗಳಿಸಿ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರೆ ಬೂಮ್ರಾ 6 ವಿಕೆಟ್ ಕಿತ್ತು ಮಿಂಚಿದ್ದರು.

ಆಸಿಸ್ ನೆಲದಲ್ಲಿ ವೈಟ್‌ವಾಶ್ ಮಾಡಿದ ತಂಡ ಹಾಗೂ ನಾಯಕರು
ಎರಡು ಅಥವಾ ಅದಕ್ಕೂ ಹೆಚ್ಚಿನ ಪಂದ್ಯಗಳು ಇರುವ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ತನ್ನದೇ ನೆಲದಲ್ಲಿ ಕ್ಲೀನ್ ಸ್ವೀಪ್ ಅವಮಾನಕ್ಕೆ ಗುರಿಯಾಗಿದ್ದು 2013ರಲ್ಲಿ. ಶ್ರೀಲಂಕಾ ವಿರುದ್ಧ 2 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಎರಡನ್ನೂ ಕಳೆದುಕೊಂಡಿತ್ತು. ಶ್ರೀಲಂಕಾ ತಂಡವನ್ನು ಏಂಜಲೋ ಮ್ಯಾಥ್ಯೂಸ್ ಮುನ್ನಡೆಸುತ್ತಿದ್ದರು. ಬಳಿಕ ಮೂರು ಪಂದ್ಯಗಳ ಸರಣಿಯನ್ನು 2016ರಲ್ಲಿ ಭಾರತ ಗೆದ್ದುಕೊಂಡಿದ್ದು ಎಂಎಸ್ ಧೋನಿ ನಾಯಕನಾಗಿದ್ದರು.

SENA ದೇಶಗಳಲ್ಲಿ ಟಿ20 ಸರಣಿ ಗೆದ್ದ ಮೊದಲ ಭಾರತೀಯ ನಾಯಕ
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಸರಣಿ ಗೆಲ್ಲುವ ಮೂಲಕ ಈಗಾಗಲೇ ಭಾರತೀಯ ತಂಡದ ಪರವಾಗಿ ವಿಶೇಷ ದಾಖಲೆಯನ್ನು ಮಾಡಿದ್ದಾರೆ. SENA(ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ) ದೇಶಗಳಲ್ಲಿ ಟಿ20 ಸರಣಿಯನ್ನು ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಯನ್ನು ವಿರಾಟ್ ಕೊಹ್ಲಿ ಮುಡಿಗೇರಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications