3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ, ಲಂಕಾ ವಿರುದ್ಧ ಭಾರತಕ್ಕೆ ಸರಣಿ ಜಯ

Posted By:

ನವದೆಹಲಿ, ಡಿಸೆಂಬರ್ 06: ಪ್ರವಾಸಿ ಶ್ರೀಲಂಕಾ ತಂಡದ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಶ್ರೀಲಂಕಾ ಯಶಸ್ವಿಯಾಗಿದೆ. ಮೂರು ಟೆಸ್ಟ್‌‌ ಪಂದ್ಯಗಳ ಸರಣಿಯನ್ನ ಟೀಂ ಇಂಡಿಯಾ 1-0 ಅಂತರದಲ್ಲಿ ಗೆದ್ದು ದಾಖಲೆ ಬರೆದಿದೆ.

ಮುಖ ಮುಚ್ಚಿಕೊಂಡ ಲಂಕನ್ನರಿಗೆ ಮಂಗಳಾರತಿ ಮಾಡಿದ ಟ್ವೀಟ್ ಲೋಕ

ಟೆಸ್ಟ್‌ ಇತಿಹಾಸದಲ್ಲಿ ಸತತ 9ನೇ ಸರಣಿ ಗೆದ್ದಿರುವ ಟೀಂ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.ಕೋಲ್ಕತ್ತಾದಲ್ಲಿ ನಡೆದ ಸರಣಿಯ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರೆ ನಾಗ್ಪರದಲ್ಲಿ ನಡೆದ ದ್ವಿತೀಯ ಟೆಸ್ಟ್‌ನಲ್ಲಿ ಅಮೋಘ 239 ರನ್‌ಗಳ ಗೆಲುವು ದಾಖಲಿಸಿತ್ತು.

3rd Test: Dhananjaya stars with hundred as Sri Lanka earn draw against India

ಸ್ಕೋರ್ ಕಾರ್ಡ್

ಫಿರೋಷ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್‌‌ ಪಂದ್ಯದ ಕೊನೆಯ ದಿನದಾಟದಲ್ಲಿ ಗೆಲುವಿನ ಆಸೆಯಿಂದ ಕಣಕ್ಕಿಳಿದ ಭಾರತ ತಂಡಕ್ಕೆ ಲಂಕಾ ಬ್ಯಾಟ್ಸ್ ಮನ್ ಗಳು ಆಘಾತ ನೀಡಿದರು. ಧನಂಜಯ ಡಿ ಸಿಲ್ವ ಶತಕ (119, 15 ಬೌಂಡರಿ ಹಾಗೂ ಒಂದು ಸಿಕ್ಸರ್) ಬಾರಿಸಿ, ಪಂದ್ಯವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.

ಕೊನೆಯ ದಿನದಾಟದಲ್ಲಿ ಗೆಲುವಿಗೆ 379 ರನ್ ಗಳಿಸಬೇಕಾಗಿದ್ದ ಶ್ರೀಲಂಕಾ ಅಂತಿಮವಾಗಿ 103 ಓವರ್ ಗಳಲ್ಲಿ 299/5 ಸ್ಕೋರ್ ಮಾಡಿದ್ದಾಗ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಲಾಯಿತು.

Story first published: Wednesday, December 6, 2017, 17:35 [IST]
Other articles published on Dec 6, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ