ನಾಗ್ಪುರ ಟೆಸ್ಟ್ : ಭಾರತ 215 , ದ. ಆಫ್ರಿಕಾ 11ಕ್ಕೆ 2
ನಾಗ್ಪುರ, ನ.25: ಇಲ್ಲಿನ ವಿಸಿಎ ಸ್ಟೇಡಿಯಂನಲ್ಲಿ ಉಭಯ ದೇಶಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 215 ಸ್ಕೋರಿಗೆ ಆಲೌಟ್ ಆಗಿದೆ. ಇದಕ್ಕೆ ಉತ್ತರವಾಗಿ ದಿನದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 2 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿದೆ.
ಆರಂಭಿಕ ಆಘಾತ ಅನುಭವಿಸಿರುವ ಭಾರತ, ಶಿಖರ್ ಧವನ್ ಹಾಗೂ ಮುರಳಿ ವಿಜಯ್ ವಿಕೆಟ್ ಕಳೆದುಕೊಂಡಿತು. ಭೋಜನ ವಿರಾಮದ ನಂತರ ನಾಯಕ ಕೊಹ್ಲಿ ವಿಕೆಟ್ ಸೇರಿದಂತೆ ಐದು ವಿಕೆಟ್ ಪತನಗೊಂಡಿದ್ದು 197/8 ಸ್ಕೋರ್ ಗಳಿಸಿ ಸಂಕಷ್ಟದಲ್ಲಿತ್ತು.

ನಂತರ ಚೇತರಿಸಿಕೊಳ್ಳದೆ 215ಸ್ಕೋರಿಗೆ ಆಲೌಟ್ ಆಗಿದೆ. ಭಾರತದ ಪರ ವಿಜಯ್ 40 ರನ್ ಗಳಿಸಿದ್ದೇ ಅತ್ಯಧಿಕ ವೈಯಕ್ತಿಕ ಮೊತ್ತ ಎನಿಸಿದೆ.ಹಾರ್ಮರ್ 78/4, ಮಾರ್ಕೆಲ್ 35/3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ವಿದೇಶದ ನೆಲಗಳಲ್ಲಿ ಸತತವಾಗಿ 10 ಟೆಸ್ಟ್ ಸರಣಿ ಗೆದ್ದ ದಾಖಲೆ ಹೊಂದಿರುವ ದಕ್ಷಿಣ ಆಫ್ರಿಕಾದ ಸಾಧನೆಗೆ ಅಡ್ಡಗಾಲು ಹಾಕಲು ಟೀಂ ಇಂಡಿಯಾ ಸಜ್ಜಾಗಿದೆ. ನಾಲ್ಕು ಟೆಸ್ಟ್ ಸರಣಿಯಲ್ಲಿ ಭಾರತ 1-0 ಅಂತರದಲ್ಲಿ ಮುಂದಿದೆ.
14 ಟೆಸ್ಟ್ ಸರಣಿ ಪೈಕಿ 10 ಟೆಸ್ಟ್ ಸರಣಿ ಗೆದ್ದು ಹೊಸ ದಾಖಲೆ ಬರೆದ ದಕ್ಷಿಣ ಆಫ್ರಿಕಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ವಿರಾಟ್ ಕೊಹ್ಲಿ ಪಡೆ ಸಿದ್ಧವಾಗುತ್ತಿದೆ. 2006ರಲ್ಲಿ ಶ್ರೀಲಂಕಾ ವಿರುದ್ಧ 0-2ರಲ್ಲಿ ಸರಣಿ ಗೆದ್ದ ದಕ್ಷಿಣ ಆಫ್ರಿಕಾ ಇಲ್ಲಿ ತನಕ ಯಾವುದೇ ಟೆಸ್ಟ್ ಸರಣಿಯನ್ನು ವಿದೇಶದಲ್ಲಿ ಸೋತಿಲ್ಲ.

ಆಡುವ XI: ಭಾರತ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಇಶಾಂತ್ ಶರ್ಮ
ದಕ್ಷಿಣ ಆಫ್ರಿಕಾ: ಹಶೀಂ ಆಮ್ಲಾ (ನಾಯಕ), ಎಬಿ ಡಿ ವಿಲೆಯರ್ಸ್, ಡೀನ್ ಎಲ್ಗಾರ್, ಫಾಫ್ ಡು ಪ್ಲೆಸಿಸ್, ಜೆಪಿ ಡುಮಿನಿ, ವಾನ್ ಜಿಲ್, ಡೇನ್ ವಿಲಾಸ್ (ವಿಕೆಟ್ ಕೀಪರ್), ಸಿಮೋನ್ ಹಾರ್ಮರ್, ಇಮ್ರಾನ್ ತಾಹೀರ್, ಮಾರ್ನೆ ಮಾರ್ಕೆಲ್, ಕಾಗಿಸೋ ರಬಾಡಾ (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications