Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 124 ರನ್ ಗಳ ಜಯ

ಬೆಂಗಳೂರು, ನ.27: ಇಲ್ಲಿನ ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್‌ನ ಮೂರನೇ ದಿನ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳು ಕೊಂಚ ಹೋರಾಟ ತೋರಿದರೂ ಫಲ ನೀಡಲಿಲ್ಲ. 185 ರನ್‌ಗಳಿಗೆ ದಕ್ಷಿಣ ಆಫ್ರಿಕಾ ಆಲ್‌ ಔಟ್ ಆಗುವ ಮೂಲಕ ಟೀಂ ಇಂಡಿಯಾಕ್ಕೆ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ 124 ರನ್‌ಗಳ ಗೆಲುವಿನ ಕೊಡುಗೆ ನೀಡಿದೆ.

ಆರ್ ಅಶ್ವಿನ್ ಅವರು ಎಬಿ ಡಿ ವಿಲಿಯರ್ಸ್ ವಿಕೆಟ್ ಪಡೆದು ಪಂದ್ಯದ ಮೇಲೆ ಹಿಡಿತ ಸಾಧಿಸಿದರೂ ಆಮ್ಲಾ ಹಾಗೂ ಡುಫ್ಲೆಸಿಸ್ ಉತ್ತಮ ಆಟವಾಡುತ್ತಾ ಭಾರತದ ಗೆಲುವಿಗೆ ಅಡ್ಡಿಯಾಗಿದ್ದರು. ಭೋಜನವಿರಾಮ ವೇಳೆಗೆ 4 ವಿಕೆಟ್ ಕಳೆದುಕೊಂಡಿದ್ದ(105/4) ದಕ್ಷಿಣ ಆಫ್ರಿಕಾ ಚಹಾ ವಿರಾಮದ ವೇಳೆಗೆ ಇವರಿಬ್ಬರ ವಿಕೆಟ್ ಪತನವಾಗಿದೆ.

| ಟೆಸ್ಟ್ ಗ್ಯಾಲರಿ ನೋಡಿ

Amla, Du Plessis fightback

ಬುಧವಾರದ ಒಂದೇ ದಿನ 20 ವಿಕೆಟ್‌ಗಳು ಪತನಗೊಂಡಿತ್ತು. ಮೂರನೆ ಟೆಸ್ಟ್ ಮೂರು ದಿನಗಳಲ್ಲಿ ಮುಗಿಯುವ ಸಾಧ್ಯತೆ ಕಂಡು ಬಂದಿತ್ತು. ಗೆಲುವಿಗೆ 310 ರನ್‌ಗಳ ಸವಾಲನ್ನು ಪಡೆದಿರುವ ದಕ್ಷಿಣ ಆಫ್ರಿಕ ತಂಡ ಆರಂಭದಲ್ಲೇ 58/4 ಸ್ಕೋರ್ ಮಾಡಿ ಸಂಕಷ್ಟಕ್ಕೆ ಸಿಲುಕಿತ್ತು.

R Ashwin

ಅದರೆ, ನಾಯಕ ಹಶೀಂ ಅಮ್ಲಾ 39ರನ್ ಹಾಗೂ ಫಾಫ್ ಡುಪ್ಲೆಸಿಸ್ 39ರನ್ ಗಳಿಸಿ ಹೋರಾಟ ತೋರಿ ಔಟಾದರು. ಚಹಾ ವಿರಾಮದ ವೇಳೆಗೆ 75 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂದು 151ರನ್ ಗಳಿಸಿದೆ. ಆರ್ ಅಶ್ವಿನ್ 3 ಹಾಗೂ ಅಮಿತ್ ಮಿಶ್ರಾ 3 ವಿಕೆಟ್ ಪಡೆದಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+