Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಕ್ಸಿಂಗ್ ಡೇ ಟೆಸ್ಟ್: ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 259/5

ಮೆಲ್ಬೋರ್ನ್, ಡಿ.26: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆರಂಭಿಕ ಆಘಾತದ ನಂತರ ಆಸೀಸ್ ಇನ್ನಿಂಗ್ಸ್ ಚೇತರಿಕೆ ಕಂಡಿದೆ. ಕರ್ನಾಟಕದ ಕೆಎಲ್ ರಾಹುಲ್ ಅವರನ್ನು ಟೀಂ ಇಂಡಿಯಾ XI ನಲ್ಲಿ ಸೇರಿಸಿಕೊಳ್ಳಲಾಗಿದೆ. ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 259/5 ಸ್ಕೋರ್ ಮಾಡಿದೆ.

ಆರಂಭಿಕ ಆಟಗಾರ ಡೇವಿಡ್ ವಾರ್ನರ್ ವಿಕೆಟ್ ಉದುರಿದ ನಂತರ ರೋಜರ್ಸ್ ಹಾಗೂ ಶೇನ್ ವಾಟ್ಸನ್ ಎರಡನೇ ವಿಕೆಟ್ ಗೆ 92 ರನ್ ಕಲೆ ಹಾಕಿದರು. ಇನ್ನಿಂಗ್ಸ್ ನ ಎರಡನೇ ಓವರ್ ನಲ್ಲೇ ವಾರ್ನರ್ ಬಲಿ ಪಡೆದ ಭಾರತ ವಾಟ್ಸನ್ 37 ರನ್ ಆಗಿದ್ದಾಗ ಜೀವದಾನ ನೀಡಿತು. ಶಿಖರ್ ಧವನ್ ಅವರು ಕ್ಯಾಚ್ ಕೈಚೆಲ್ಲಿದರು.

Smith Batting, MCG

ಕೊನೆಗೆ ವಾಟ್ಸನ್ 52 ಹಾಗೂ ರೋಜರ್ಸ್ 57 ರನ್ ಗಳಿಸಿ ಔಟಾದರು. ಭೋಜನ ವಿರಾಮ ವೇಳೆಗೆ 92/1 ಇದ್ದ ಆಸೀಸ್ ಸ್ಕೋರ್ ಸ್ಮಿತ್ ಅವರ ಸಮಯೋಜಿತ ಅರ್ಧಶತಕ (72ರನ್) ದ ನೆರವಿನಿಂದ ಉತ್ತಮ ಮೊತ್ತ ಕಲೆ ಹಾಕುತ್ತಿದೆ. ಮಾರ್ಷ್ 32ರನ್ ಹಾಗೂ ಬರ್ನ್ಸ್ 13 ರನ್ನಿಗೆ ಔಟ್ ಆದರು. ಶಮಿ ಹಾಗೂ ಯಾದವ್ ತಲಾ ಎರಡು ವಿಕೆಟ್ ಹಾಗೂ ಅಶ್ವಿನ್ ಒಂದು ವಿಕೆಟ್ ಗಳಿಸಿದ್ದಾರೆ.

ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಜಿ) ದಲ್ಲಿ ನಡೆದಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 22 ವರ್ಷ ವಯಸ್ಸಿನ ಕೆಎಲ್ ರಾಹುಲ್ ಅವರು ಭಾರತದ 284ನೇ ಆಟಗಾರನಾಗಿ ಟೆಸ್ಟ್ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದಾರೆ.

Mohd Shami


ಭಾರತ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್) ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಆರ್ ಅಶ್ವಿನ್, ಮಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್

ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಕ್ರಿಸ್ ರೋಜರ್ಸ್, ಶೇನ್ ವಾಟ್ಸನ್, ಶಾನ್ ಮಾರ್ಷ್, ಜೋ ಬರ್ನ್ಸ್, ಬ್ರಾಡ್ ಹಡ್ಡೀನ್(ವಿಕೆಟ್ ಕೀಪರ್) , ಮಿಚೆಲ್ ಜಾನ್ಸನ್, ಹ್ಯಾರೀಸ್, ಜೋಶ್ ಹೇಜಲ್ ವುಡ್, ನಾಥನ್ ಲಿಯಾನ್

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+