3ನೇ ಟೆಸ್ಟ್ : ಇಂಗ್ಲೆಂಡ್ 283 ಆಲೌಟ್, ಟೀಂ ಇಂಡಿಯಾ 271/6
ಮೊಹಾಲಿ, ನವೆಂಬರ್ 27: ಇಂಗ್ಲೆಂಡಿನ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಾನಿ ಬೈರ್ಸ್ಟೋ 89ರನ್ ಗಳಿಸಿ ಇಂಗ್ಲೆಂಡ್ ತಂಡದ ಮೊತ್ತವನ್ನು ಹೆಚ್ಚಿಸಲು ಯತ್ನಿಸಿದ್ದು ವಿಫಲವಾಗಿದೆ. 93.5 ಓವರ್ ಗಳಲ್ಲಿ ಆಂಗ್ಲ ಪಡೆ 283 ಸ್ಕೋರಿಗೆ ಆಲೌಟ್ ಆಗಿದೆ.
ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 271/6 ಸ್ಕೋರ್ ಮಾಡಿದೆ. ರವೀಂದ್ರ ಜಡೇಜ 31 ರನ್ ಹಾಗೂ ಆರ್ ಅಶ್ವಿನ್ 57ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು 268/8 ರಿಂದ ಆಟ ಮುಂದುವರೆಸಿ ಹೆಚ್ಚು ಕಾಲ ನಿಲ್ಲಲಿಲ್ಲ. 283ಕ್ಕೆ ಸರ್ವಪತನ ಕಂಡಿತು. ಭಾರತದ ಪರ ಮೊಹಮ್ಮದ್ ಶಮಿ 3/63 ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಮುರಳಿ ವಿಜಯ್ ವಿಕೆಟ್ ಕಳೆದುಕೊಂಡಿದ್ದು, ಪಾಥೀವ್ ಪಟೇಲ್ ಹಾಗೂ ಚೇತೇಶ್ವರ್ ಪೂಜಾರಾ ನಿಧಾನಗತಿಯಲ್ಲಿ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಇತ್ತೀಚಿನ ವರದಿಗಳಂತೆ 21.5ಓವರ್ ಗಳಲ್ಲಿ 60/1ಸ್ಕೋರ್ ಮಾಡಿದೆ. (ಒನ್ ಇಂಡಿಯಾ ಸುದ್ದಿ)
Story first published: Wednesday, January 3, 2018, 10:04 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications