ನಾಗ್ಪುರ, ನವೆಂಬರ್, 26: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ನಲ್ಲೂ ಸ್ಪಿನ್ ವೈಭವ. ಪಂದ್ಯದ ಎರಡನೇ ದಿನವೇ ನಾಲ್ಕನೇ ಇನಿಂಗ್ಸ್ ಆರಂಭವಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 310 ರನ್ ಟಾರ್ಗೆಟ್ ನೀಡಲಾಗಿದೆ.
ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ದಾಳಿಗೆ ದಕ್ಷಿಣ ಆಫ್ರಿಕಾ ಗುರುವಾರ 79 ರನ್ ಗಳಿಸಿಆಲೌಟ್ ಆಯಿತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಸಹ 173 ರನ್ ಗಳಿಗೆ ಆಲೌಟ್ ಆಯಿತು. ಮುಕ್ಕಾಲು ದಿನಕ್ಕೆ 18 ವಿಕೆಟ್ ಗಳು ಉದುರಿದವು.

ಭಾರತದ ವಿರುದ್ದ ಟೆಸ್ಟ್ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾ ಗಳಿಸಿರುವ ಕನಿಷ್ಠ ಮೊತ್ತ ಇದಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ಮೊದಲ ಇನಿಂಗ್ಸ್ ನಲ್ಲಿ 215 ರನ್ ಗಳಿಸಿತ್ತು. [ಮೊದಲ ದಿನದ ರಿಪೋರ್ಟ್]
ಭಾರತದ ಎರಡನೇ ಇನಿಂಗ್ಸ್ ನಲ್ಲಿ ಶಿಖರ್ ಧವನ್ ಗಳಿಸಿದ 39 ರನ್ ಅಧಿಕ. ಉಳಿದಂತೆ ಯಾವ ಬ್ಯಾಟ್ಸ್ ಮನ್ ಗಳು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.