3TC Solidarity Cup: ಎಬಿಡಿ ಅಬ್ಬರದಾಟ, ಚಿನ್ನದ ಪದಕ ಹೊತ್ತೊಯ್ದ ಈಗಲ್ಸ್!

ಗೌಟೆಂಗ್: ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಅಬ್ಬರದಾಟದ ನೆರವಿನಿಂದ ದಕ್ಷಿಣ ಆಫ್ರಿಕಾದ ಗೌಟೆಂಗ್‌ನಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್ ಸ್ಟೇಡಿಯಂನಲ್ಲಿ ಶನಿವಾರ (ಜುಲೈ 18) ನಡೆದ 3ಟಿಸಿ ಸಾಲಿಡಾರಿಟಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ಈಗಲ್ಸ್ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಚಿನ್ನಕ್ಕಾಗಿ ಈಗಲ್ಸ್, ಕೈಟ್ಸ್ ಮತ್ತು ಕಿಂಗ್‌ಫಿಶರ್ಸ್ ತಂಡಗಳು ಕಾದಾಡಿದ್ದವು. ಕೈಟ್ಸ್ ಪರ ಡ್ವೈನ್ ಪ್ರಿಟೋರಿಯಸ್ ಸ್ಫೋಟಕ ಅರ್ಧ ಶತಕ ಬಾರಿಸಿದರಾದರೂ ತಂಡ ಒಟ್ಟು 138 ರನ್ ಗಳಿಸಲಷ್ಟೇ ಶಕ್ತವಾಯ್ತು.
ಈಗಲ್ಸ್ ಪರ ಅನುಭವಿ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ 24 ಎಸತಗಳಲ್ಲಿ 61 ರನ್ ಬಾರಿಸಿ ತಂಡಕ್ಕೆ ಬೆಂಬಲಿಸಿದರೆ, ಮಾರಕ ವೇಗಿ ಲುಂಗಿಸಾನಿ ಎನ್‌ಗಿಡಿ ಉತ್ತಮ ಬೌಲಿಂಗ್‌ಗಾಗಿ ಗಮನ ಸೆಳೆದರು.
ವಿಭಿನ್ನ ರೀತಿಯ ಈ '3ಟಿಸಿ ಸಾಲಿಡಾರಿಟಿ ಕಪ್' ಪಂದ್ಯದ ಫಲಿತಾಂಶ, ತಂಡಗಳು ಗಳಿಸಿದ ಸ್ಕೋರ್, ಪಂದ್ಯದ ನಿಯಮಗಳ ಬಗ್ಗೆ ಮಾಹಿತಿ ಕೆಳಗಿದೆ ನೋಡಿ.

ಏನಿದು 3ಟಿಸಿ ಸಾಲಿಡಾರಿಟಿ ಕಪ್?
3ಟಿಸಿ ಇದು ವಿಭಿನ್ನ ಮಾದರಿಯ ಕ್ರಿಕೆಟ್ ಪಂದ್ಯ. ಇಲ್ಲಿ ಮೂರು ಪಂದ್ಯಗಳು ತಲಾ 12 ಓವರ್‌ಗಳಂತೆ ಕಾದಾಡುತ್ತವೆ. ಪ್ರತೀ ತಂಡ 12 ಓವರ್‌ಗಳ ಇನ್ನಿಂಗ್ಸ್ ಆಡುತ್ತದೆಯೆಂದರೆ ಇದು ಒಟ್ಟಾರೆ 36 ಓವರ್‌ಗಳ ಪಂದ್ಯ. 12 ಓವರ್‌ಗಳನ್ನು ಮತ್ತೂ ತಲಾ 6ರಂತೆ ವಿಭಾಜಿಸಲಾಗಿದೆ.

ಹೆಚ್ಚು ರನ್ ಗಳಿಸಿದವರು ಫಸ್ಟ್ ಬ್ಯಾಟಿಂಗ್
ಪಂದ್ಯದ ಆರಂಭದಲ್ಲಿ ಎಲ್ಲಾ ತಂಡಗಳು 6 ಓವರ್‌ಗಳ ಇನ್ನಿಂಗ್ಸ್ ಆಡುತ್ತವೆ. ಆ ಬಳಿಕ ಮೊದಲ 6 ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸಿದ ತಂಡ ಮೊದಲು ಬ್ಯಾಟಿಂಗ್ ಮಾಡುತ್ತದೆ. ಮತ್ತೆ ಸೆಕೆಂಡ್ ಹೈಯೆಸ್ಟ್ ಸ್ಟೋರರ್, ಆಮೇಲೆ ಮೂರನೇ ಹೆಚ್ಚು ರನ್ ಗಳಿಸಿದ ತಂಡ ಬ್ಯಾಟಿಂಗ್ ಮಾಡುತ್ತದೆ. 12 ಓವರ್‌ಗಳು ಮುಕ್ತಾಯವಾದಾಗ ಹೆಚ್ಚು ರನ್ ಗಳಿಸಿದ ತಂಡ ಚಿನ್ನ ಗೆಲ್ಲುತ್ತದೆ. ಉಳಿದ ತಂಡಗಳು ಬೆಳ್ಳಿ, ಕಂಚು ಗೆಲ್ಲುತ್ತವೆ.

ಈಗಲ್ ಟೋಟಲ್ ಸ್ಕೋರ್
ಚಿನ್ನಕ್ಕಾಗಿ ಈಗಲ್ಸ್, ಕೈಟ್ಸ್ ಮತ್ತು ಕಿಂಗ್‌ಫಿಶರ್ಸ್ ತಂಡಗಳು ಉತ್ತಮ ಪೈಪೋಟಿ ನಡೆಸಿದವು. ತಲಾ 12 ಓವರ್‌ಗಳ ಮುಕ್ತಾಯದ ಬಳಿಕ ಈಗಲ್ಸ್ 4 ವಿಕೆಟ್ ನಷ್ಟಕ್ಕೆ 160 ರನ್, ಕೈಟ್ಸ್ 3 ವಿಕೆಟ್ ಕಳೆದು 138 ರನ್ ಮತ್ತು ಕಿಂಗ್‌ಫಿಶರ್ಸ್ 5 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದುಕೊಂಡವು.

ಉತ್ತಮ ಆಟಕ್ಕಾಗಿ ಗಮನ ಸೆಳೆದವರು
ಪಂದ್ಯದ ಮೊದಲ 6 ಓವರ್‌ಗಳಲ್ಲಿ ಈಗಲ್ಸ್ 66 ರನ್ ಕಲೆ ಹಾಕಿತ್ತು. ಇನ್ನುಳಿದ 6 ಓವರ್‌ಗಳಲ್ಲಿ 94 ರನ್ ಬಾರಿಸಿದ್ದರಿಂದ ಒಟ್ಟು ರನ್‌ನಲ್ಲಿ ಈಗಲ್ಸ್ ಲೀಡ್ ಪಡೆಯಲು ಸಾಧ್ಯವಾಯ್ತು. ಪಂದ್ಯದಲ್ಲಿ ಏಡನ್ ಮಾರ್ಕ್ರಮ್, ಡ್ವೈನ್ ಪ್ರಿಟೋರಿಯಸ್ ಮತ್ತು ಜೆಜೆ ಸ್ಮಟ್ಸ್ ಉತ್ತಮ ಪ್ರದರ್ಶನಕ್ಕಾಗಿ ಚಿತ್ತ ತಮ್ಮತ್ತ ಹರಿಸಿಕೊಂಡರು.
ಕಾದಾಡಿದ ಮೂರು ತಂಡಗಳು/ಆಟಗಾರರು
* ಕೈಟ್ಸ್: ಕ್ವಿಂಟನ್ ಡಿ ಕಾಕ್ (ನಾಯಕ), ಟೆಂಬಾ ಬವುಮಾ, ಜಾನ್-ಜಾನ್ ಸ್ಮಟ್ಸ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಲುಥೋ ಸಿಪಮ್ಲಾ, ಬ್ಯೂರನ್ ಹೆಂಡ್ರಿಕ್ಸ್, ಅನ್ರಿಕ್ ನಾರ್ಟ್ಜೆ.
* ಕಿಂಗ್‌ಫಿಶರ್ಸ್: ರೀಜಾ ಹೆಂಡ್ರಿಕ್ಸ್ (ನಾಯಕ), ಹೆನ್ರಿಕ್ ಕ್ಲಾಸೆನ್, ಜನ್ನೆಮನ್ ಮಲನ್, ಫಾಫ್ ಡು ಪ್ಲೆಸಿಸ್, ಥಾಂಡೋ ಎನ್ಟಿನಿ, ಜೆರಾಲ್ಡ್ ಕೋಟ್ಜೀ, ಗ್ಲೆಂಟನ್ ಸ್ಟುವರ್ಮನ್, ತಬ್ರೈಜ್ ಶಮ್ಸಿ.
* ಈಗಲ್ಸ್: ಎಬಿ ಡಿವಿಲಿಯರ್ಸ್ (ಕ್ಯಾಪ್ಟನ್), ಐಡೆನ್ ಮಾರ್ಕ್ರಮ್, ರಾಸ್ಸಿ ವಾನ್ ಡೆರ್ ಡುಸೆನ್, ಕೈಲ್ ವೆರೆನ್ನೆ, ಆ್ಯಂಡಿಲೆ ಫೆಹ್ಲುಕ್ವಾಯೊ, ಜಾರ್ನ್ ಫೋರ್ಟುಯಿನ್, ಜೂನಿಯರ್ ದಲಾ, ಲುಂಗಿ ಎನ್‌ಗಿಡಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications