ಪಾಟಿಂಗ್ ಕನಸಿನ ಐಪಿಎಲ್ ತಂಡದಲ್ಲಿ ಕೊಹ್ಲಿ, ಧೋನಿಗಿಲ್ಲ ಸ್ಥಾನ
ಮೆಲ್ಬೋರ್ನ್(ಆಸ್ಟ್ರೇಲಿಯಾ), ಏಪ್ರಿಲ್ 28 : ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ತಮ್ಮ ಕನಸಿನ ಐಪಿಎಲ್ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ ತಮ್ಮ ಕನಸಿನ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ.
ಪಾಟಿಂಗ್ ಅವರ ಐಪಿಎಲ್ 2017ರ ಬೆಸ್ಟ್ ಇಲೆವೆನ್ ತಂಡದಲ್ಲಿ ಭಾರತದ ನಾಲ್ಕು ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಗಂಗೂಲಿ ಕನಸಿನ ಐಪಿಎಲ್ ತಂಡದಲ್ಲಿ ಸ್ಥಾನ ಪಡೆದಿದ್ದ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಪಾಂಟಿಂಗ್ ತಮ್ಮ ಕನಸಿನ ತಂಡದಲ್ಲಿ ಸ್ಥಾನ ನೀಡಿಲ್ಲ. [ಗಂಗೂಲಿ ಕನಸಿನ ಐಪಿಎಲ್ ತಂಡದಲ್ಲಿ ಧೋನಿ, ವಾರ್ನರ್‌ಗೆ ಕೊಕ್]

ಇನ್ನು ಗಂಗೂಲಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಮಹೇಂದ್ರ ಸಿಂಗ್ ಧೋನಿ ಅವರನ್ನು ಪಾಟಿಂಗ್ ಸಹ ಕಡೆಗಣಿಸಿರುವವುದು ಆಶ್ಚರ್ಯ ಮೂಡಿಸಿದೆ.
ಪಾಟಿಂಗ್ ಅವರ ಐಪಿಎಲ್ 2017ರ ಬೆಸ್ಟ್ ಇಲೆವೆನ್ ತಂಡದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಹಾಶೀಂ ಆಮ್ಲಾ, ಸನ್ ರೈಸರ್ಸ್ ಹೈದರಾಬಾದ್ ನ ಡೇವಿಡ್ ವಾರ್ನರ್, ಭುವನೇಶ್ವರ್ ಕುಮಾರ್ ಮತ್ತು ರಶೀದ್ ಖಾನ್, ಗುಜರಾತ್ ಲಯನ್ಸ್ ತಂಡದ ಸುರೇಶ್ ರೈನಾ, ಮುಂಬೈ ಇಂಡಿಯನ್ಸ್ ನ ಜೋಸ್ ಬಟ್ಲರ್ ಮತ್ತು ನಿತೀಶ್ ರಾಣಾ, ಹರ್ಭಜನ್ ಸಿಂಗ್, ಮಿಚೇಲ್ ಮೇಕ್ಲನ್ ಘನ್ ಅವರಿಗೆ ಸ್ಥಾನ ಪಡೆದಿದ್ದಾರೆ.
ಇನ್ನು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಗ್ಲೇನ್ ಮ್ಯಾಕ್ಸ್ ವೆಲ್, ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಕ್ರಿಸ್ ಮೋರಿಸ್ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications