Ranji Trophy: ಮುಂಬೈಗೆ 42ನೇ ಕಿರೀಟ: ತನ್ನಲ್ಲಿರುವ ನಾಯಕತ್ವ ಸಾಮರ್ಥ್ಯ ಸಾರಿದ ಅಜಿಂಕ್ಯ ರಹಾನೆ
ದೇಶೀಯ ಕ್ರಿಕೆಟ್ ಟೂರ್ನಿಯ ರಾಜ ಎಂದೇ ಕರಿಸಿಕೊಳ್ಳುವ ರಣಜಿ ಟೂರ್ನಿಯನ್ನು ಮುಂಬೈ ತಂಡ ದಾಖಲೆಯ 42ನೇ ಬಾರಿ ಗೆದ್ದು ಬೀಗಿದೆ. ಈ ಮೂಲಕ ಇತಿಹಾಸ ಸೃಷ್ಟಿಸಿದೆ. ರಣಜಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಇನಿಂಗ್ಸ್ ಹಾಗೂ 169 ರನ್‌ಗಳಿಂದ ಮಣಿಸಿದ ಅಜಿಂಕ್ಯ ರಹಾನೆ ಪಡೆ, ದೇಶೀಯ ಕ್ರಿಕೆಟ್ ಸುಲ್ತಾನ್ ರೀತಿ ಮೆರೆದಿದೆ.
ಗುರುವಾರ ಮುಂಬೈ ಐತಿಹಾಸಿಕ ಮೈಲುಗಲ್ಲು ತಲುಪುವುದು ಕನ್ಫರ್ಮ್ ಆಗಿತ್ತು. ಆದರೆ ಯಾವಗ ತಲುತ್ತದೆ ಎಂಬುದೇ ಪ್ರಶ್ನೆ ಆಗಿತ್ತು. ಐದನೇ ದಿನದಾಟವನ್ನು 5 ವಿಕೆಟ್‌ಗೆ 248 ರನ್‌ಗಳಿಂದ ಮುಂದುವರೆಸಿದ ವಿದರ್ಭ, 368 ರನ್‌ಗಳಿಗೆ ಆಲೌಟ್ ಆಯಿತು.

2015-16ನೇ ಸಾಲಿನಲ್ಲಿ ಮುಂಬೈ ತಂಡ ಸೌರಾಷ್ಟ್ರವನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟದ್ದೇ ಕೊನೆಯಾಗಿತ್ತು. ಆ ಬಳಿಕ ಟ್ರೋಫಿ ಎತ್ತಲ್ಲು ಸಾಧ್ಯವೇ ಆಗಿರಲಿಲ್ಲ. 2021-22ರಲ್ಲಿ ಮುಂಬೈ, ಮಧ್ಯಪ್ರದೇಶ ವಿರುದ್ಧ ಫೈನಲ್‌ನಲ್ಲಿ ನಿರಾಸೆಯನ್ನು ಅನುಭವಿಸಿತ್ತು. ಈಗ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಮುಂಬೈ ತಂಡ ಮತ್ತೊಮ್ಮೆ ಪ್ರಶಸ್ತಿ ಎತ್ತುವಲ್ಲಿ ಸಫಲವಾಗಿದೆ.
ವಿದರ್ಭ ತಂಡದ ಪರ ಅಕ್ಷಯ್ ವಾಡ್ಕರ್ ಶತಕ ಬಾರಿಸಿ ಸೋಲಿನಲ್ಲಿ ಮಿಂಚಿದರು. ಹರ್ಷ ದುಬೆ 65 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಮುಂಬೈ ಪರ ತನುಷ್ ಕೋಟ್ಯಾನ್ ನಾಲ್ಕು ವಿಕೆಟ್ ಪಡೆದರು. ಉಳಿದಂತೆ ತುಷಾರ್ ದೇಶಪಾಂಡೆ, ಮುಶೀರ್ ಖಾನ್ 2 ವಿಕೆಟ್ ಕಬಳಿಸಿದರು.
ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಮುಶೀರ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು, ಇವರು 136 ರನ್ ಸಿಡಿಸಿ, ಎರಡು ವಿಕೆಟ್ ಕಬಳಿಸಿದರು.
ಸರಣಿ ಶ್ರೇಷ್ಠ
ತನುಷ್ ಕೋಟ್ಯಾನ್ ಟೂರ್ನಿಯಲ್ಲಿ ನೀಡಿದ ಅಮೋಘ ಪ್ರದರ್ಶನದ ಬಲವಾಗಿ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಅವರು ಈ ಟೂರ್ನಿಯಲ್ಲಿ 29 ವಿಕೆಟ್ ಪಡಿದಿದ್ದಾರೆ.
ನಾಯಕತ್ವ ಗುಣ ಸಾಬೀತು
ಟೀಮ್ ಇಂಡಿಯಾದ ನಾಯಕನಾಗಿ ಅನುಭವ ಹೊಂದಿರುವ ಅಜಿಂಕ್ಯ ರಹಾನೆ ಅವರನ್ನು ಕಳಪೆ ಫಾರ್ಮ್‌ನಿಂದ ತಂಡದಿಂದ ಹೊರ ಬಿದ್ದರು. ಅವರು ರಣಜಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರೂ ಸಹ ತಮ್ಮ ನಾಯಕತ್ವದ ಗುಣಗಳಿಂದ ಗಮನ ಸೆಳೆದರು. ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಸಂಘಟಿತ ಆಟ ಎಷ್ಟು ಎದ್ದು ಕಾಣುತ್ತದೋ, ಅಷ್ಟೇ ಅಜಿಂಕ್ಯ ರಹಾನೆ ಅವರ ನಾಯಕತ್ವದ ಗುಣಗಳು ಸಹ ಎದ್ದು ಕಾಣುತ್ತವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications