Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದೆಹಲಿ ಟೆಸ್ಟ್ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭಾರಿ ಮುನ್ನಡೆ

ನವದೆಹಲಿ, ಡಿ. 04: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 334 ಸ್ಕೋರಿಗೆ ಆಲೌಟ್ ಆಗಿದೆ. ಅಜಿಂಕ್ಯ ರಹಾನೆ ಶತಕ, ಆರ್ ಅಶ್ವಿನ್ ಅರ್ಧ ಶತಕ, ಅಬೋಟ್ ಗೆ 5 ವಿಕೆಟ್ ಎರಡನೇ ದಿನದ ಚಹಾ ವಿರಾಮದ ವೇಳೆ ತನಕದ ಮುಖ್ಯಾಂಶವಾವಾಗಿತ್ತು. ನಂತರ ದಕ್ಷಿಣ ಆಫ್ರಿಕಾವನ್ನು 121 ಸ್ಕೋರಿಗೆ ಆಲೌಟ್ ಮಾಡಿರುವ ಭಾರತ 213ರನ್ ಗಳ ಭಾರಿ ಮುನ್ನಡೆ ಪಡೆದುಕೊಂಡಿದೆ.

| ಸರಣಿಯ ಸುಂದರ ಚಿತ್ರಗಳು
ಭಾರತದ ಮೊದಲ ಇನ್ನಿಂಗ್ಸ್ ಮೊತ್ತ 334ಕ್ಕೆ ಉತ್ತರವಾಗಿ ಎರಡನೇ ದಿನದ ಚಹಾ ವಿರಾಮದ ವೇಳೆಗೆ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 38/1 ಸ್ಕೋರ್ ಮಾಡಿತ್ತು. ನಂತರ ನಿರಂತರ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯಿತು. ಟೀಂ ಇಂಡಿಯಾ ಪರ ರವೀಂದ್ರ ಜಡೇಜ 12-2-30-5, ಆರ್ ಅಶ್ವಿನ್, ಉಮೇಶ್ ಯಾದವ್ ತಲಾ 2 ವಿಕೆಟ್ ಹಾಗೂ ಇಶಾಂತ್ ಶರ್ಮ ಅವರು 1 ವಿಕೆಟ್ ಪಡೆದುಕೊಂಡರು.[ದೆಹಲಿ ಟೆಸ್ಟ್ : ಟೀಂ ಇಂಡಿಯಾದ ಮಾನ ಕಾಪಾಡಿದ ರಹಾನೆ]

India bowled out for 334 after Rahane ton

ಮೊದಲ ದಿನದ ಅಂತ್ಯಕ್ಕೆ 215 ಎಸೆತಗಳಲ್ಲಿ 127ರನ್ (11X4, 4X6) ಗಳಿಸಿ ಅಜಿಂಕ್ಯ ರಹಾನೆ ಔಟಾಗಿದ್ದರು. ಆಫ್ ಸ್ಪಿನ್ನರ್ ಅಶ್ವಿನ್ ಅವರು ಬ್ಯಾಟಿಂಗ್ ಮುಂದುವರೆಸಿ 6 ಬೌಂಡರಿ, 1 ಸಿಕ್ಸರ್ ಇದ್ದ 56ರನ್ ಗಳಿಸಿ ಸ್ಕೋರ್ ಹೆಚ್ಚಿಸಿದರು. ಆದರೆ, ಅಂತಿಮವಾಗಿ 117.5 ಓವರ್ ಗಳಲ್ಲಿ 334 ಸ್ಕೋರಿಗೆ ಭಾರತ ಆಲೌಟ್ ಆಯಿತು.

ದಕ್ಷಿಣ ಆಫ್ರಿಕಾ ಪರ ಪೈಟ್ 4 ಹಾಗೂ ಅಬೋಟ್ 5 ವಿಕೆಟ್ ಪಡೆದು ಯಶಸ್ವಿ ಪ್ರದರ್ಶನ ನೀಡಿದರು. ನಂತರ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಎಲ್ಗಾರ್ ವಿಕೆಟ್ ಕಳೆದುಕೊಂಡಿತು. ಚಹಾ ವಿರಾಮದ ವೇಳೆಗೆ ಬವುಮಾ 22 ರನ್ ನಂತರ ಎಬಿ ಡಿವಿಲಿಯರ್ಸ್ 42 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+