Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

4ನೇ ಟೆಸ್ಟ್ : 2ನೇ ದಿನ ಭೋಜನ ವಿರಾಮಕ್ಕೆ ಭಾರತ 64/1

ಧರ್ಮಶಾಲಾ, ಮಾರ್ಚ್ 26: ಟೀಂ ಇಂಡಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 300 ರನ್ ಸ್ಕೋರ್ ಮಾಡಿ ಆಲೌಟ್ ಆಗಿದ್ದು, ಎರಡನೇ ದಿನದ ಆರಂಭದಲ್ಲಿ ರಹಾನೆ ಪಡೆ ಆರಂಭಿಕ ಆಘಾತ ಅನುಭವಿಸಿತು ಆದರೆ, ನಂತರ ಸುಧಾರಣೆಗೊಂಡು 2ನೇ ದಿನದ ಅಂತ್ಯಕ್ಕೆ 248/6 ಸ್ಕೋರ್ ಮಾಡಿದೆ.

ಕೆಎಲ್ ರಾಹುಲ್ 60. ಚೇತೇಶ್ವರ್ ಪೂಜಾರಾ 57, ಅಜಿಂಕ್ಯ ರಹಾನೆ 46, ಆರ್ ಅಶ್ವಿನ್ 30 ರನ್ ನೆರವಿನಿಂದ ಭಾರತ 248 ಸ್ಕೋರ್ ಮಾಡಿತು. ದಿನದ ಅಂತ್ಯಕ್ಕೆ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ 10, ರವೀಂದ್ರ ಜಡೇಜ 16 ರನ್ ಗಳಿಸಿ ಆಡುತ್ತಿದ್ದರು.

ಆರಂಭಿಕ ಆಟಗಾರ ಮುರಳಿ ವಿಜಯ್ ಅವರು 11 ರನ್ ಗಳಿಸಿ ಜೋಶ್ ಹೇಜಲ್ ವುಡ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ವೇಡ್ ಗೆ ಕ್ಯಾಚಿತ್ತು ನಿರ್ಗಮಿಸಿದ್ದಾರೆ.

4th Test, Day 2: Over to India's batsmen now in Dharamsala


ಇದಕ್ಕೂ ಮೊದಲು ಪಂದ್ಯದ ಮೊದಲ ದಿನದಂದು ನಾಯಕ ಸ್ಟೀವ್ ಸ್ಮಿತ್ 111 ರನ್ ಹಾಗೂ ವೇಡ್ 57ರನ್ ನೆರವಿನಿಂದ ಆಸ್ಟ್ರೇಲಿಯಾ 300ರನ್ ಸ್ಕೋರ್ ಮಾಡಿತು.

ಮೊದಲ ಪಂದ್ಯವಾಡಿದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರು 68/4, ಉಮೇಶ್ ಯಾದವ್ 69/2 ವಿಕೆಟ್ ಗಳಿಸಿ, ಆಸೀಸ್ ರನ್ ಗತಿಗೆ ಕಡಿವಾಣ ಹಾಕಿದರು. ಕೇವಲ ಒಂದು ವಿಕೆಟ್ ಪಡೆದರೂ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ (79) ಗಳಿಸಿದ ದಾಖಲೆ ಬರೆದರು.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+