For Quick Alerts
ALLOW NOTIFICATIONS  
For Daily Alerts
 

2-1 ಅಂತರದಲ್ಲಿ ಸರಣಿ ಗೆದ್ದ ಭಾರತಕ್ಕೆ ಬೆಲ್ಲ, ಆಸೀಸ್ ಗೆ ಬೇವು!

ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ 2-1ರ ಅಂತರದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದುಕೊಂಡಿತು.

ಧರ್ಮಶಾಲಾ, ಮಾರ್ಚ್. 28 : ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಬಾರ್ಡರ್ ಗವಾಸ್ಕರ್‌ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು.

ಸ್ಕೋರ್ ಕಾರ್ಡ್

4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಅಂತರದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಬಾರ್ಡರ್- ಗವಾಸ್ಕರ್ ಟ್ರೋಫಿ ಗೆದ್ದುಕೊಂಡಿತು.

India Vs Australia, 4th Test, Day 4: India 87 runs short of Test series-win

4ನೇ ದಿನದಂದು ಮಂಗಳವಾರ 106 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ ಆರಂಭದಲ್ಲಿ ಮುರಳಿ ವಿಜಯ್ ಮತ್ತು ಪೂಜಾರ ಅವರ ವಿಕೆಟ್‌ ಕಳೆದುಕೊಂಡಿತು. ಕೆ.ಎಲ್ ರಾಹುಲ್ ಮತ್ತು ನಾಯಕ ರಹಾನೆ ಅವರ ದಿಟ್ಟ ಆಟದಿಂದಾಗಿ ಭಾರತ ಗೆಲುವಿನ ನಗೆ ಬೀರಿತು.

ರಾಹುಲ್ ಆಕರ್ಷಕ 51 ರನ್‌ ಗಳಿಸಿದರೆ, ರಹಾನೆ ತಾಳ್ಮೆಯ ಆಟವಾಡಿ 38 ರನ್‌ ಗಳಿಸಿದರು. ತವರಿನಲ್ಲಿ ಕಾಂಗೂರು ಪಡೆಯನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಯುಗಾದಿಯ ಕೊಡುಗೆ ನೀಡಿತು.

ಸಂಕ್ಷಿಪ್ತ ಸ್ಕೋರ್‌
ಭಾರತ ಮೊದಲ ಇನಿಂಗ್ಸ್‌: 300
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 137
ಭಾರತ ಎರಡನೇ ಇನಿಂಗ್ಸ್: 332
ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್: 106

ಆಕ್ರಮಣಕಾರಿ ಆಟವಾಡುತ್ತಿರುವ ನಾಯಕ ಅಜಿಂಕ್ಯಾ ರಹಾನೆ ಕಮ್ಮಿನ್ಸ್ ಓವರ್ ನಲ್ಲಿ ಒಂದರ ಮೇಲೊಂದು ಸಿಕ್ಸರ್ 2 ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯುತ್ತಿದ್ದಾರೆ.

ಇತ್ತೀಚೆಗೆ ಬಂದ ವರದಿಯಂತೆ ಭಾರತ 47 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಮುರುಳಿ ವಿಜಯ್ 8, ಪೂಜಾರ ಯಾವುದೇ ರನ್ ಗಳಿಸದೆ ರನ್ ಔಟ್ ಆದರು. ಕೆಎಲ್ ರಾಹುಲ್ ಮತ್ತು ನಾಯಕ ಅಂಜಿಕ್ಯಾ ರಹಾನೆ ಕ್ರೀಸ್ ನಲ್ಲಿದ್ದಾರೆ.

ಜಯಕ್ಕೆ 106 ರನ್‌ಗಳ ಸುಲಭ ಗುರಿ ಪಡೆದಿರುವ ಆತಿಥೇಯ ತಂಡ ಮೂರನೇ ದಿನವಾದ ಸೋಮವಾರದ ಅಂತ್ಯಕ್ಕೆ ಆರು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 19 ರನ್ ಗಳಿಸಿದೆ. ಎರಡು ದಿನಗಳ ಆಟ ಬಾಕಿಯಿದ್ದು 87 ರನ್ ಕಲೆ ಹಾಕಬೇಕಿದೆ.

ಆಲ್‌ರೌಂಡರ್ ರವೀಂದ್ರ ಜಡೇಜ 63 ರನ್ ಗಳಿಸಿ ಭಾರತದ ಇನಿಂಗ್ಸ್‌ ಮುನ್ನಡೆಗೆ ಕಾರಣರಾದರು. ಜೊತೆಗೆ ಬೌಲಿಂಗ್‌ನಲ್ಲಿ ಮೂರು ವಿಕೆಟ್‌ ಕಬಳಿಸಿ ಮಿಂಚಿದರು. ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್ ಮತ್ತು ವೇಗಿ ಉಮೇಶ್ ಯಾದವ್‌ ಕೂಡ ತಲಾ ಮೂರು ವಿಕೆಟ್‌ ಉರುಳಿಸಿ ಪ್ರವಾಸಿ ಆಸೀಸ್ ತಂಡಕ್ಕೆ ಕಂಟಕವಾದರು.

ನಾಲ್ಕು ಪಂದ್ಯಗಳ ಸರಣಿ ಇದಾಗಿದ್ದು ಸದ್ಯಕ್ಕೆ ಉಭಯ ತಂಡಗಳು 1-1ರಲ್ಲಿ ಸಮಬಲ ಹೊಂದಿವೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಟ್ರೋಫಿ ಎತ್ತಿಹಿಡಿಯಲಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
Read in English: India seal series 2-1
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+