Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

4ನೇ ಟೆಸ್ಟ್ : ಟೀಂ ಇಂಡಿಯಾದಿಂದ ಶ್ರೇಯಸ್ ಗೆ ದಿಢೀರ್ ಬುಲಾವ್

ಧರ್ಮಶಾಲ, ಮಾರ್ಚ್ 23: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರು ಕಣಕ್ಕಿಳಿಯುವರೇ? ಕಾದುನೋಡಿ, ಸದ್ಯಕ್ಕೆ ಕೊಹ್ಲಿಗೆ ಆಸರೆಯಾಗಿ ಮುಂಬೈನ ಶ್ರೇಯಸ್ ಅಯ್ಯರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ನಾಯಕ ವಿರಾಟ್ ಕೊಹ್ಲಿ ಅವರು ಬಲಭುಜದ ನೋವಿನಿಂದ ಬಳಲುತ್ತಿದ್ದು, ಇನ್ನೂ ಗುಣಮುಖರಾಗಿಲ್ಲ. ಮಾರ್ಚ್ 25ರಿಂದ ಧರ್ಮಶಾಲದಲ್ಲಿ ಪಂದ್ಯ ಆರಂಭಗೊಳ್ಳಲಿದೆ. [ಕೊಹ್ಲಿ ಅಣಕಿಸಿದ ಮ್ಯಾಕ್ಸ್ ವೆಲ್, ಟ್ವಿಟ್ಟರ್ ನಿಂದ ಫ್ಯಾನ್ಸ್ ಗರಂ]

4th Test: Shreyas Iyer called as cover for Virat Kohli, to join Team India in Dharamsala

ಕೊಹ್ಲಿ ಅವರು ಒಂದು ವೇಳೆ ಗುಣಮುಖರಾಗದಿದ್ದರೆ, ಅವರ ಬದಲಿಗೆ ಶ್ರೇಯಸ್ ಅಯ್ಯರ್ ಅವರು ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಸದ್ಯಕ್ಕೆ ತಂಡ ಸೇರುವಂತೆ ಶ್ರೇಯಸ್ ಅವರಿಗೆ ಬಿಸಿಸಿಐನಿಂದ ಕರೆ ಬಂದಿದೆ.[ವಿಡಿಯೋ: ಕೊಹ್ಲಿ ಬಲ ಭುಜಕ್ಕೆ ಪೆಟ್ಟು]

ಶುಕ್ರವಾರ(ಮಾರ್ಚ್ 24) ದಂದು ಮುಂಬೈ ಬಿಟ್ಟು ಧರ್ಮಶಾಲಕ್ಕೆ ತೆರಳಲಿರುವ ಶ್ರೇಯಸ್ ಅವರು ತರಬೇತಿ ಶಿಬಿರಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಲು ಆಗುವುದಿಲ್ಲ. ಶುಕ್ರವಾರ ಬೆಳಗ್ಗೆ 9.30ಕ್ಕೆ ಶಿಬಿರ ಶುರುವಾಗಲಿದೆ. [ಕೊಹ್ಲಿ ಕ್ರೀಡಾಲೋಕದ ಟ್ರಂಪ್]

ಗುರುವಾರದ ತಯಾರಿ: ನಾಯಕ ಕೊಹ್ಲಿ ಅವರು ಮೈದಾನದಲ್ಲಿ ಕಾಣಿಸಿಕೊಂಡರೂ, ಬ್ಯಾಟ್ ಹಿಡಿದು ನೆಟ್ ಅಭ್ಯಾಸ ಮಾಡಲಿಲ್ಲ. ಭುಜಕ್ಕೆ ಇನ್ನಷ್ಟು ವಿಶ್ರಾಂತಿ ಕೊಡುತ್ತಿದ್ದಾರೆ. ನಾಳೆ ದೈಹಿಕ ಪರೀಕ್ಷೆ ನಡೆಸಲಾಗುತ್ತಿದ್ದು, ನಂತರ ಕೊಹ್ಲಿ ಆಡುವುದರ ಬಗ್ಗೆ ನಿರ್ಧರಿಸಲಾಗುತ್ತದೆ.

ಶ್ರೇಯಸ್ ಕಳೆದ ಎರಡು ಋತುವಿನಿಂದ ಮುಂಬೈ ಪರ ಭರ್ಜರಿ ಪ್ರದರ್ಶನ ನೀಡಿದ್ದಾರಲ್ಲದೆ, ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಮೋಘ ದ್ವಿಶತಕ ಸಿಡಿಸಿದ್ದರು.

ಶಮಿ ಆಯ್ಕೆ ಇಲ್ಲ: ಗಾಯಗೊಂಡು ಗುಣಮುಖರಾಗಿರುವ ವೇಗಿ ಮೊಹಮ್ಮದ್ ಶಮಿ ಅವರು ಅಂತಿಮ ಟೆಸ್ಟ್ ಪಂದ್ಯ ಆಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, 15 ಮಂದಿ ತಂಡದಲ್ಲೂ ಇಲ್ಲದ ಶಮಿ ಅವರಿಗೆ ಅವಕಾಶ ಸಿಗುವುದು ಸಾಧ್ಯವಿಲ್ಲ. ವಿಜಯ್ ಹಜಾರೆ ಫೈನಲ್ ಆಡುವುದರ ಮೂಲಕ ಫಿಟ್ನೆಸ್ ಪರೀಕ್ಷೆ ನಡೆಸಲಾಗಿತ್ತು ಎಂದು ಬಿಸಿಸಿಐ ಹೇಳಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+