Border Gavaskar Trophy: ಸರಣಿಯಲ್ಲಿ ಸದ್ದು ಮಾಡಿದ ಐದು ವಿವಾದಗಳು
ಒಂದು ಸರಣಿ ಆರಂಭವಾದಗ ಆ ಸರಣಿಯಲ್ಲಿ ಹಲವು ವಿಚಾರಗಳು ಅಭಿಮಾನಿಗಳ ಗಮನ ಸೆಳೆಯುತ್ತವೆ. ಆಟಗಾರರ ಫೀಲ್ಡಿಂಗ್, ಬ್ಯಾಟಿಂಗ್, ಬೌಲಿಂಗ್ ಹೀಗೆ ಎಲ್ಲ ವಿಚಾರಗಳು ಹಲವು ಬಾರಿ ಮನದಲ್ಲಿ ಉಳಿಯುತ್ತವೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆರಂಭವಾಗುವುದಕ್ಕೂ ಮುನ್ನವೇ ಭಾರತ ತಂಡದ ಆಟಗಾರರಿಗೆ ಸ್ಲೆಡ್ಜಿಂಗ್ ಭಯಇತ್ತು. ಆದರೆ ಈ ಬಾರಿ ಸ್ಲೆಡ್ಲಿಂಜ್ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಅಂಪೈರ್‌ಗಳು ಮಾಡಿದ ತಪ್ಪುಗಳು ಚರ್ಚೆಗೆ ಗ್ರಾಸವಾಗಿದೆ. ಈ ಸರಣಿಯಲ್ಲಿ ಆದ ಇಂತಹ 5 ವಿವಾದಗಳ ಬಗ್ಗೆ ವರದಿ ಇಲ್ಲಿದೆ.
ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಅನುಸ್ಥಿತಿಯಲ್ಲಿ ಟೀಮ್ ಇಂಡಿಯಾದ ಆರಂಭಿಕರಾಗಿ ಕೆಎಲ್ ರಾಹುಲ್ ಕಾಣಿಸಿಕೊಂಡರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ರಾಹುಲ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಇವರು 74 ಎಸೆತಗಳಲ್ಲಿ 26 ರನ್ ಸಿಡಿಸಿದ್ದರು. ಈ ವೇಳೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ರಾಹುಲ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿದರು.

ಫೀಲ್ಡ್ ಅಂಪೈರ್ ರಾಹುಲ್ ಬ್ಯಾಟ್‌ಗೆ ಹಾಗೂ ಬೌಲ್‌ಗೆ ಕನೆಕ್ಷನ್ ಇಲ್ಲದನ್ನು ಕಂಡು ನಟಾಟ್ ಎಂದು ತೀರ್ಪನ್ನು ನೀಡಿದರು. ಆಸೀಸ್ ಮೇಲ್ಮನವಿ ಸಲ್ಲಿಸಿತು. ಈ ವೇಳೆ ಸ್ನಿಕೋ ಮೀಟರ್ ಸಹ ಫ್ಲ್ಯಾಟ್ ಆಗಿತ್ತು. ಆದರೆ ಅಂಪೈರ್ ಬೇರೆ ಕೋನ್‌ಗಳನ್ನು ಪರಿಶೀಲಿಸದೆ ಔಟ್ ಎಂದು ತೀರ್ಪು ನೀಡಿದರು.
ವಿರಾಟ್-ಸ್ಯಾಮ್ಸ್ ವಿವಾದ
ಮೆಲ್ಬೊರ್ನ್‌ನಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಆಸೀಸ್ ಪರ ಸ್ಯಾಮ್ ಕಾನ್‌ಸ್ಟಾಸ್ ಪದಾರ್ಪಣೆ ಮಾಡಿದರು. ಈ ವೇಳೆ ಅವರ ಆರ್ಭಟ ಜೋರಾಗಿತ್ತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ, ಸ್ಯಾಮ್ ಭುಜಕ್ಕೆ ಭುಜ ತಾಗಿಸಿದರು. ನೋಡ ನೋಡುತ್ತಿದ್ದಂತೆ ಈ ಪ್ರಕರಣ ಚರ್ಚೆಗೆ ಗ್ರಾಸವಾಯಿತು.

ಯಶಸ್ವಿ ಔಟ್ ನಿರ್ಣಯ
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೊನೆಯ ದಿನದಾಟವನ್ನು ಎಚ್ಚರಿಕೆಯಿಂದ ಆಡಿ ಡ್ರಾ ಸಾಧಿಸುವ ಲೆಕ್ಕಾಚಾರವನ್ನು ಹಾಕಿಕೊಂಡಿತು. ಈ ವೇಳೆ ಯಶಸ್ವಿ ಜೈಸ್ವಾಲ್ ಪುಲ್ ಶಾಟ್ ಹೊಡೆಯಲು ಹೋದರು. ಚೆಂಡು ವಿಕೆಟ್ ಕೀಪರ್ ಕೈ ಸೇರುತ್ತಿದ್ದಂತೆ ಮನವಿ ಮಾಡಲಾಯಿತು. ಈ ವೇಳೆ ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಆಸೀಸ್ ಮೇಲ್ಮನವಿ ಸಲ್ಲಿಸಿತು. ಈ ವೇಳೆ ಮೂರನೇ ಅಂಪೈರ್ ಸ್ನಿಕೋ ಹಾಗೂ ಹಲವು ಕೋನ್‌ಗಳಿಂದ ನೋಡಿ ಔಟ್ ಎಂದು ತೀರ್ಪು ನೀಡಿದರು. ಆದರೆ ಅಸಲಿಗೆ ಬ್ಯಾಟಿಗೆ ಚೆಂಡು ಟಚ್ ಸಹ ಆಗಿರಲಿಲ್ಲ.
ಡಿಆರ್‌ಎಸ್ ವೈಫಲ್ಯ
ಡಿಆರ್‌ಎಸ್ ಎಡವಟ್ಟು ಇಷ್ಟಕ್ಕೇ ನಿಲ್ಲೇ ಇಲ್ಲ. ಈ ಪರಂಪರೆ ಸಿಡ್ನಿ ಟೆಸ್ಟ್‌ಗೂ ಮುಂದುವರೆಯಿತು. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ಅವರ ಸಹ ಪುಲ್ ಶಾಟ್ ಹೊಡೆಯಲು ಹೋದಾಗ ಚೆಂಡು ಇವರ ಬ್ಯಾಟ್ ಪಕ್ಕದಲ್ಲಿ ಪಾಸ್ ಆಗಿ, ವಿಕೆಟ್ ಕೀಪರ್ ಗ್ಲೌಸ್ ಸೇರಿತು. ಆಗ ಸಹ ಫೀಲ್ಡ್ ಅಂಪೈರ್ ನಾಟೌಟ್ ಎಂದೇ ತೀರ್ಪು ನೀಡಿದರು. ಮತ್ತೆ ಟಿವಿ ಅಂಪೈರ್ ಈ ತೀರ್ಪನ್ನು ಪರಿಶೀಲಿಸಿ ಔಟ್ ಎಂದು ತಿಳಿಸಿದರು.

ವೇಗಿಯನ್ನು ಕೆಣಕಿದ ಯುವ ಪ್ಲೇಯರ್
ಆಸ್ಟ್ರೇಲಿಯಾ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಜಸ್ಪ್ರಿತ್ ಬುಮ್ರಾ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಟೀಮ್ ಇಂಡಿಯಾ ವೇಗಿಯನ್ನು ಆಸ್ಟ್ರೇಲಿಯಾ ತಂಡದ ಯುವ ಆಟಗಾರ ಸ್ಯಾಮ್ ಕಾನ್‌ಸ್ಟಾಸ್ ಕೆಣಕಿದರು. ಇದು ವಿವಾದದ ಕಿಡಿ ಹಚ್ಚಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications