IPL Mega Auction 2025: ದುಬಾರಿ ಬೆಲೆಗೆ ಸೇಲ್ ಆದ ಟಾಪ್ 5 ವಿದೇಶಿ ಆಟಗಾರರು
ಐಪಿಎಲ್ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದ್ದಾರೆ. ಮೊದಲು ವಿದೇಶಿ ಆಟಗಾರರು ಬಂದರೆ ಹಣದ ಹೊಳೆಯನ್ನು ಸುರಿಸುತ್ತಿದ್ದ ಮಾಲೀಕರು ಈಗ ಲೆಕ್ಕಾಚಾರ ಆರಂಭಿಸಿದ್ದಾರೆ. ಭಾನುವಾರ ನಡೆದ ಹರಾಜಿನಲ್ಲಿ, ತಾವು ಹಾಕಿಕೊಂಡ ಬ್ಲ್ಯೂ ಪ್ರಿಂಟ್‌ನಂತೆ ಆಟಗಾರರನ್ನು ಖರೀದಿಸಿದ ಮಾಲೀಕರು ತಮ್ಮ ತಂಡವನ್ನು ಬಲ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಈ ವೇಳೆ ಹಲವು ದೇಶೀಯ ಆಟಗಾರರು ಕೋಟಿ ಕೋಟಿ ರೂಪಾಯಿ ಪಡೆದರೆ, ಇನ್ನು ಅನ್ ಕ್ಯಾಪ್ಡ್ ಪ್ಲೇಯರ್ಸ್ ಸಹ ದೊಡ್ಡ ಮೊತ್ತವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ. ಇದೇ ಹರಾಜಿನಲ್ಲಿ ಭಾರೀ ಬೆಲೆಗೆ ಸೇಲ್ ಆದ ಟಾಪ್ 5 ವಿದೇಶಿ ಆಟಗಾರರ ಪಟ್ಟಿ ಇಲ್ಲಿದೆ.
ರಾಜಸ್ಥಾನ ರಾಯಲ್ಸ್ ಜೋಸ್ ಬಟ್ಲರ್ ಅವರನ್ನು ಕೈ ಬಿಟ್ಟಾಗ ಎಲ್ಲರೂ ಇವರನ್ನು ಸೇರಿಸಿಕೊಳ್ಳುವ ಲೆಕ್ಕಾಚಾರವನ್ನು ಆರಂಭಿಸಿದರು. ಇವರು ಒಬ್ಬ ಬೆಸ್ಟ್ ಪ್ಲೇಯರ್, ಅಲ್ಲದೆ ಟಾಪ್ ಆರ್ಡರ್‌ನಲ್ಲಿ ಬ್ಯಾಟಿಂಗ್‌ಗೆ ಆಧಾರವಾಗಬಲ್ಲ ಆಟಗಾರ. ಪಂದ್ಯದ ಗತಿಯನ್ನೇ ಕೆಲವೇ ಓವರ್‌ಗಳಲ್ಲಿ ಬುಡಮೇಲು ಮಾಡಬಲ್ಲ ಕ್ಷಮತೆ ಹೊಂದಿದ್ದಾರೆ. ಇವರು ಮೆಗಾ ಹರಾಜು ಅಂಗಳ ಪ್ರವೇಶಿಸುತ್ತಿದ್ದಂತೆ ಮಾಲೀಕರು ಇವರನ್ನು ಕೊಳ್ಳಲು ಮುಗಿ ಬಿದ್ದರು. ಫೈನಲ್ ಆಗಿ ಗುಜರಾತ್ ಭಾರೀ ಮೊತ್ತ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಗುಜರಾತ್ ಜೋಸ್ ಬಟ್ಲರ್ ಅವರಿಗೆ 15.75 ಕೋಟಿ ನೀಡಿ ತಂಡಕ್ಕೆ ಬರಮಾಡಿಕೊಂಡಿದೆ.

ಮುಂಬೈ ಸೇರಿದ ಟ್ರೆಂಟ್
ನ್ಯೂಜಿಲೆಂಡ್ ತಂಡದ ಸ್ಟಾಟರ್ ಬೌಲರ್ ಟ್ರೆಂಟ್ ಬೌಲ್ಟ್ ಅವರು ಸಹ ಬೇರೆ ಫ್ರಾಂಚೈಸಿ ಕಡೆ ಮುಖ ಮಾಡಿದ್ದರು. ಕಾರಣ ಇವರನ್ನು ರಾಜಸ್ಥಾನ ಕೈ ಬಿಟ್ಟಿತ್ತು. ಇವರಿಗೆ ಮುಂಬೈ ಆರಂಭದಿಂದಲೂ ಬಿಡ್ ಮಾಡಿ ಕೊನೆಗೆ ಬಾಜಿ ಗೆದ್ದಿತು. ಇವರಿಗೆ ಮುಂಬೈ 12.50 ಕೋಟಿ ನೀಡಿದೆ.
ಜೋಫ್ರಾ ಆರ್ಚರ್
ಈಗಾಗಲೇ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿರುವ ಅನುಭವ ಹೊಂದಿರುವ ಜೋಫ್ರಾ ಆರ್ಚರ್, ಮತ್ತೆ ಐಪಿಎಲ್‌ನಲ್ಲಿ ಸದ್ದು ಮಾಡಲು ತಯಾರಾಗಿದ್ದಾರೆ. ಇವರಿಗೆ ರಾಯಲ್ಸ್ ಬಾಜಿ ಕಟ್ಟಿ ಗೆದ್ದಿದೆ. ಇವರು ಸಹ 12.50 ಕೋಟಿ ರೂ.ಗಳನ್ನು ಖಾತೆಗೆ ಸೇರಿಸಿಕೊಂಡಿದ್ದಾರೆ.
ಆರ್‌ಸಿಬಿ ಸೇರಿದ ಜೋಶ್
ಜೋಶ್ ಹ್ಯಾಜಲ್‌ವುಡ್ ತಮ್ಮ ಬಿಗುವಿನ ದಾಳಿಯಿಂದಲೇ ಫೆಮಸ್. ಪರ್ತ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲೂ ಇವರು ಅಮೋಘ ದಾಳಿ ಸಂಘಟಿಸಿದ್ದಾರೆ. ಇವರನ್ನು ಕೊಳ್ಳಲು ಸಹ ಮಾಲೀಕರು ಹಣದ ಮುಟೆಯನ್ನು ಇಟ್ಟುಕೊಂಡು ಕುಳಿತಿದ್ದರು. ಇವರ ಬಾಜಿಯನ್ನು ಆರ್‌ಸಿಬಿ ಗೆದ್ದಿದ್ದು ಇವರಿಗೆ 12.50 ಕೋಟಿ ನಿಡಿದೆ.
ಮಿಚೆಲ್ ಸ್ಟಾರ್ಕ್
ಕಳೆದ ಬಾರಿಯ ದುಬಾರಿ ಆಟಗಾರ ಎಂಬ ಟ್ಯಾಗ್‌ನೊಂದಿಗೆ ಈ ಬಾರಿ ಹರಾಜು ಅಂಗಳ ಪ್ರವೇಶಿಸಿದ್ದ ಮಿಚೆಲ್ ಸ್ಟಾರ್ಕ್‌ಗೆ ನಿರಾಸೆ ಆಗಿದೆ. ಇವರಲ್ಲಿನ ಕ್ಷಮತೆಯನ್ನು ಡೆಲ್ಲಿ ಗುರುತಿಸಿದ್ದು ದೊಡ್ಡ ಮೊತ್ತವನ್ನು ನೀಡಿ ಖರೀದಿ ಮಾಡಿದೆ. ಮಿಚೆಲ್ ಸ್ಟಾರ್ಕ್ ಅವರನ್ನು ಕೆಕೆಆರ್ ಕೈ ಬಿಟ್ಟಿತು. ಇವರಿಗೆ ಡೆಲ್ಲಿ 11.75 ಕೋಟಿ ರೂಪಾಯಿ ನೀಡಿದ್ದು, ಇವರು ಮುಂದಿನ ಆವೃತ್ತಿಯಲ್ಲಿ ಡೆಲ್ಲಿ ಪರ ಆಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications