ಪುರುಷ ಕ್ರಿಕೆಟಿಗರಿಂದ ಸಾಧಿಸಲಾಗದ ಈ 5 ದಾಖಲೆಗಳಿಗೆ ಮಹಿಳಾ ಕ್ರಿಕೆಟರ್‌ಗಳೇ ಒಡತಿಯರು!

ಸುದೀರ್ಘ ಕಾಲದಿಂದಲೂ ಮಹಿಳಾ ಕ್ರಿಕೆಟ್‌ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿಸಲಾಗುತ್ತಿದೆಯಾದರೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಪ್ರೇಮಿಗಳು ಮಹಿಳಾ ಕ್ರಿಕೆಟ್‌ನತ್ತ ಕೂಡ ಕುತೂಹಲದಿಂದ ದೃಷ್ಟಿಹರಿಸುತ್ತಿದ್ದಾರೆ. ಆಟಗಾರ್ತಿಯರ ಸಾಧನೆ ಹಾಗೂ ತಂಡಗಳ ನಡುವಿನ ಪೈಪೋಟಿ ಈ ಬೆಳವಣಿಗೆಗೆ ಕಾರಣವಾಗಿದೆ. ಹಾಗಿದ್ದರೂ ಪುರುಷರ ಕ್ರಿಕೆಟ್‌ಗೆ ಹೋಲಿಸಿದರೆ ಮಹಿಳೆಯರ ಕ್ರಿಕೆಟ್ ಜನಪ್ರಿಯತೆಯಲ್ಲಿ ತುಂಬಾ ಹಿಂದಿದೆ.
ಕ್ರಿಕೆಟ್ ಪ್ರಮುಖ ಕ್ರೀಡೆಯಾಗಿರುವ ಭಾರತ, ಇಂಗ್ಲೆಂಡ್ ಆಸ್ಟ್ರೇಲಿಯಾದಂತಾ ದೇಶದಲ್ಲೇ ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿದೆ. 1934ರಷ್ಟು ಹಿಂದೆಯೇ ಮಹಿಳಾ ಟೆಸ್ಟ್ ಕ್ರಿಕೆಟ್ ಆರಂಭವಾದರೂ ನಂತರ ಅದಕ್ಕೆ ಸಿಗಬೇಕಾದ ಮನ್ನಣೆ ಮಾತ್ರ ಸಿಗಲಿಲ್ಲ.
ಹಾಗಿದ್ದರೂ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟರ್‌ಗಳು ಕೆಲ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಪುರುಷ ಕ್ರಿಕೆಟಿಗರೂ ಸಾಧಿಸಲಾಗದ ಕೆಲ ಸಾಧನೆಗಳು ಮಹಿಳಾ ಕ್ರಿಕೆಟಿಗರ ಹೆಸರಿನಲ್ಲಿದೆ. ಅಂಥಾ ಐದು ದಾಖಲೆಗಳು ಇಲ್ಲಿದೆ.

ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ದಾಖಲೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ದಾಖಲಿಸಿದ ಕ್ರಿಕೆಟರ್ ಯಾರು? ಈ ಪ್ರಶ್ನೆಗೆ ಶಾಹಿದ್ ಅಫ್ರಿದಿ ಎಂಬುದು ನಿಮ್ಮ ಉತ್ತರವಾಗಿದ್ದರೆ ಅದು ತಪ್ಪು. ಈ ದಾಖಲೆ ಭಾರತೀಯ ಕ್ರಿಕೆಟ್‌ನ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಅವರ ಹೆಸರಿನಲ್ಲಿದೆ. ಮೊದಲಿಗೆ ತ್ತು. 1996ರಲ್ಲಿ ಶಾಹಿದ್ ಅಫ್ರಿದಿ ಶ್ರೀಲಂಕಾ ವಿರುದ್ಧ 16 ವರ್ಷ 217ದಿನದಲ್ಲಿ ಈ ದಾಖಲೆಯನ್ನು ಮಾಡಿದ್ದರು. ಆದರೆ ಈ ದಾಖಲೆಯನ್ನು ಪುಡಿಗಟ್ಟಿದ್ದು ಭಾರತ ಮಹಿಳಾ ಕ್ರಿಕೆಟ್‌ನ ಮಾಜಿ ನಾಯಕಿ ಮಿಥಾಲಿ ರಾಜ್. 1999ರಲ್ಲಿ ಮಿಥಾಲಿ 16ವಯಸ್ಸಿನ 205ನೇ ದಿನದಂದು ಐರ್ಲೆಂಡ್ ವಿರುದ್ಧ ಶತಕ ದಾಖಲಿಸಿ ಈ ದಾಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡರು. 20 ವರ್ಷ ಕಳೆದರೂ ಈ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.

ದ್ವಿಶತಕ ಸಿಡಿಸಿದ ಅತಿ ಕಿರಿಯ ಕ್ರಿಕೆಟರ್ ಕೂಡ ಮಹಿಳೆ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲ ದ್ವಿಶತಕ ಸಿಡಿಸಿದ ಕಿರಿಯ ಕ್ರಿಕೆಟರ್ ದಾಖಲೆಯೂ ಮಹಿಳಾ ಆಟಗಾರ್ತಿಯ ಹೆಸರಿನಲ್ಲೇ ಇದೆ. ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ಆಗಿರುವ ಅಮೆಲಿಯಾ ಕೆರ್ ಈ ದಾಖಲೆಯನ್ನು ಹೊಂದಿರುವ ಆಟಗಾರ್ತಿ. 2018ರಲ್ಲಿ ಡೆನ್ಮಾರ್ಕ್ ವಿರುದ್ಧದ ಪಂದ್ಯದಲ್ಲಿ ಅಮೆಲಿಯಾ 145 ಎಸೆತಗಳಲ್ಲಿ 232 ರನ್ ಗಳಿಸಿದ್ದರು. ಆಗ ಅಮೆಲಿಯಾ ವಯಸ್ಸು ಕೇವಲ 17 ವರ್ಷ.

ಏಕದಿನ ಪಂದ್ಯ ಆಡಿದ ಹಿರಿಯ ಕ್ರಿಕೆಟರ್
ವೆಸ್ಟ್ ಇಂಡೀಸ್‌ನ ಮಾಜಿ ವಿಕೆಟ್ ಕೀಪರ್ ಸ್ಟೀಫನಿ ಪವರ್ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ ಅತ್ಯಂತ ಹಿರಿಯ ಕ್ರಿಕೆಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ಸ್ಟೀಫನಿ ಪವರ್ ತಮ್ಮ ಕೊನೆಯ ಏಕದಿನ ಪಂದ್ಯವನ್ನು 47ನೇ ವಯಸ್ಸಿನ 257ನೇ ದಿನದಂದು ಆಡಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಈಗ ಅವರಿಗೆ 64 ವರ್ಷ ವಯಸ್ಸು.

ಟಿ20ಯಲ್ಲಿ ನಿರಂತರ ಅತಿ ಹೆಚ್ಚು ಪಂದ್ಯದಲ್ಲಿ ಕನಿಷ್ಠ ಒಂದು ವಿಕೆಟ್ ದಾಖಲೆ
ಮಹಿಳಾ ಕ್ರಿಕೆಟರ್ ಹೆಸರಿನಲ್ಲಿರುವ ಮತ್ತೊಂದು ಅತ್ಯಂತ ವಿಶಿಷ್ಠ ದಾಖಲೆಯಿದು. ಈ ದಾಖಲೆಯೂ ಭಾರತೀಯ ಆಟಗಾರ್ತಿಯ ಹೆಸರಿನಲ್ಲೇ ಇದೆ. ಭಾರತ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ರಾಧಾ ಯಾದವ್ ಸತತ 24 ಪಂದ್ಯಗಳಲ್ಲಿ ಕನಿಷ್ಠ ಒಂದು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದಾರೆ.

ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಪ್ರತಿಶತ ರನ್
ಎನಿಡ್ ಬೇಕ್‌ವೆಲ್ ವಿಶ್ವ ಕ್ರಿಕೆಟ್‌ನ ವಿಶಿಷ್ಠ ದಾಖಲೆಯೊಂದನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್‌ನ ಈ ಆಟಗಾರ್ತಿ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಪ್ರತಿಶತ ರ್ ಹೊಂದಿದ ದಾಖಲೆಯನ್ನು ಹೊಂದಿದ್ದಾರೆ. ತಮ್ಮ ತಂಡ ಇನ್ನಿಂಗ್ಸ್‌ವೊಂದರಲ್ಲಿ 164 ರನ್ ಗಳಿಸಿದ್ದಾಗ ಎನಿಡ್ ಬೇಕ್‌ವೆಲ್ ಒಬ್ಬರೇ 112 ರನ್ ಗಳಿಸಿದ್ದರು. ಆ ಇನ್ನಿಂಗ್ಸ್‌ನ 68.29 ರನ್‌ಗಳನ್ನು ಈಕೆ ಒಬ್ಬರೇ ಗಳಿಸಿದ್ದರು. ಇದು ಇನ್ನೂ ದಾಖಲೆಯಾಗಿಯೇ ಉಳಿದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications