ರೋಹಿತ್ ಟೀಮ್ ಇಂಡಿಯಾ ನಾಯಕನಾಗಲಿ: ಶರ್ಮಾ ಬೆಂಬಲಕ್ಕೆ ಐವರು ಹಿರಿಯ ಕ್ರಿಕೆಟಿಗರು

ಟೀಮ್ ಇಂಡಿಯಾದ ನಾಯಕತ್ವದ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದರೂ ವಿಭಿನ್ನ ಮಾದರಿಗೆ ಅನುಗುಣವಾಗಿ ನಾಯಕತ್ವದಲ್ಲಿ ಬದಲಾವಣೆ ಆಗಲಿ ಎಂಬ ಮಾತುಗಳು ಕೇಳಿಬರುತ್ತಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡುತ್ತಿದೆಯಾದರೂ ದೊಡ್ಡ ಟೂರ್ನಿಗಳನ್ನು ಗೆಲ್ಲುವಲ್ಲಿ ಭಾರತ ತಂಡ ವಿಫಲವಾಗಿದೆ. ಹಾಗಾಗಿ ಮುಂದೆ ಚುಟುಕು ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ನಾಯಕತ್ವದಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಿ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಸಿದ್ದಾರೆ.
ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ನಾಯಕನಾಗಿ ತೋರಿದ ಪ್ರದರ್ಶನ ಎಲ್ಲರ ಗಮನ ಸೆಳೆದಿದ್ದು ಟೀಮ್ ಇಂಡಿಯಾವನ್ನು ಮುನ್ನಡೆಸಲು ಜವಾಬ್ಧಾರಿ ನೀಡಿದರೆ ತಂಡದ ದೃಷ್ಟಿಯಿಂದ ಉತ್ತಮ ಎಂಬ ಅಭಿಪ್ರಾಯ ಮಾಜಿ ಕ್ರಿಕೆಟಿಗರು ವ್ಯಕ್ತ ಪಡಿಸಿದ್ದಾರೆ. ಹಾಗಾದರೆ ರೋಹಿತ್ ನಾಯಕತ್ವಕ್ಕೆ ಬೆಂಬಲ ನೀಡಿದ ಐವರು ಕ್ರಿಕೆಟಿಗರು ಯಾರು ಮುಂದೆ ಓದಿ.

ಹಿರಿಯ ವೇಗಿ ಶ್ರೀಶಾಂತ್
ಸ್ಪಾಟ್ ಫಿಕ್ಸಿಂಗ್‌ನಿಂದ ನಿಷೇಧಕ್ಕೊಳಗಾಗಿ ಈಗ ಪ್ರಕರಣದಿಂದ ಹೊರಬಂದ ಶ್ರೀಶಾಂತ್ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಶ್ರೀಶಾಂತ್ ಕೂಡ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಒಲವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಬಗ್ಗೆ ಗೌರವವಿದೆ ಎನ್ನುತ್ತಲೇ ಟಿ20 ಕ್ರಿಕೆಟ್‌ಗೆ ರೋಹಿತ್ ಶರ್ಮಾ ನಾಯಕನಾಗಲಿ ಎಂದು ಶ್ರೀಶಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್
ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಕ್ರಿಕೆಟ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಆಗಾಗ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮಾಜಿ ನಾಯಕನಾಗಿರುವ ಗಂಭೀರ್ ರೋಹಿತ್ ಶರ್ಮಾ ಅವರನ್ನು ಅತ್ಯುತ್ತಮ ನಾಯಕ ಎಂದಿದ್ದಾರೆ. ಟೀಮ್ ಇಮಡಿಯಾವನ್ನು ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮುನ್ನಡೆಸಲಿ ಎಂದು ಧ್ವನಿಯೆತ್ತಿದ್ದಾರೆ ಗೌತಮ್ ಗಂಭೀರ್.

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್
2019ರ ವಿಶ್ವಕಪ್‌ನಿಂದ ಭಾರತ ತಂಡ ಹೊರಬಿದ್ದ ನಂತರ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ನಾಯಕತ್ವ ವಿಭಜನೆಯ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಯುವಿ ಪ್ರುಖವಾಗಿ ಚುಟುಕು ಮಾದರಿಯಲ್ಲಿ ನಾಯಕತ್ವವನ್ನು ರೋಹಿತ್ ಶರ್ಮಾಗೆ ನೀಡಬೇಕು ಎಂದು ಹೇಳಿದ್ದರು. ಇದರಿಂದ ನಾಯಕ ವಿರಾಟ್ ಕೊಹ್ಲಿಗೆ ಒತ್ತಡ ಕಡಿಮೆಯಾಗಲಿದೆ ಎಂದು ಯುವಿ ಅಭಿಪ್ರಾಯ ವ್ಯಕ್ತಡಿಸಿದ್ದರು.

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ
ಚುಟುಕು ಕ್ರಿಕೆಟ್‌ನಲ್ಲಿ ನಾಯಕತ್ವ ಬದಲಾವಣೆ ಯಾಗಲಿ ಎಂದು ಹೇಳಿದ ಆಟಗಾರರಲ್ಲಿ ಆಕಾಶ್ ಚೋಪ್ರಾ ಕೂಡ ಪ್ರಮುಖ ವ್ಯಕ್ತಿ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದ ಚೋಪ್ರಾ ವಿರಾಟ್ ಕೊಹ್ಲಿಯ ನಂತರ ನಾಯಕತ್ವಕ್ಕೆ ರೋಹಿತ್ ಶರ್ಮಾ ಸಿದ್ದ ಉತ್ತರ ಎಂದು ಹೇಳಿದ್ದರು. ಈ ಮೂಲಕ ರೋಹಿತ್ ನಾಯಕತ್ವಕ್ಕೆ ತನ್ನ ಬೆಂಬವಿರುವುದನ್ನು ವ್ಯಕ್ತಪಡಿಸಿದ್ದರು.

ಮಾಜಿ ವೇಗಿ ಅತುಲ್ ವಾಸ್ಸನ್
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾಜಿ ಆಟಗಾರ ಅತುಲ್ ವಾಸ್ಸನ್ ಮಾತನಾಡುತ್ತಾ ಬೇರೆ ಬೇರೆ ಮಾದರಿಗಳಿಗೆ ಅನುಗುಣವಾಗಿ ಭಿನ್ನ ನಾಯಕತ್ವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಯ್ಕೆ ಸಮಿತಿ ರೋಹಿತ್ ಶರ್ಮಾ ಅವರನ್ನು ಚುಟುಕು ಮಾದರಿಯ ನಾಯಕನನ್ನಾಗಿ ಆಯ್ಕೆ ಮಾಡುವ ಅಗತ್ಯವಿದೆ ಎಂದು ಅವರು ಹೇಳಿಕೆಯನ್ನು ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications