ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಟಾಸ್ ಸೋತ ಭಾರತದ 5 ನಾಯಕರು

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಿದ್ದು ಮೊದಲ ದಿನದಾಟದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ತಂಡ ಟಾಸ್ ಗೆದ್ದಿದ್ದರೂ ಅದರ ಸಂಪೂರ್ಣ ಲಾಭ ಪಡೆಯುವಲ್ಲಿ ಮೊದಲ ದಿನದಾಟದಲ್ಲಿ ವಿಫಲವಾಗಿದೆ. ಮೊದಲ ದಿನದಾಟದ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಮೇಲುಗೈ ಸಾಧಿಸಿದರೂ ನಾಯಕ ವಿರಾಟ್ ಕೊಹ್ಲಿ ಟಾಸ್ ವಿಚಾರದಲ್ಲಿ ಬೇಡದ ದಾಖಲೆಯೊಂದನ್ನು ಬರೆದಿದ್ದಾರೆ. ಭಾರತ ತಂಡವನ್ನು ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕ ಎಂಬ ಹೆಗ್ಗಳಿಕೆ ಹೊಂದಿರುವ ವಿರಾಟ್ ಕೊಹ್ಲಿ ಟಾಸ್ ಗೆಲ್ಲುವ ವಿಚಾರದಲ್ಲಿ ಮಾತ್ರ ಹಿನ್ನಡೆ ಅನುಭವಿಸಿದ್ದಾರೆ.

ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಎಷ್ಟು ಪ್ರಮುಖ ಭಾಗವಾಗಿರುತ್ತದೆ ಎಂಬುದು ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೆ ತಿಳಿದಿದೆ. ಆಯಾ ದಿನದ ಫಲಿತಾಂಶದಲ್ಲಿ ಟಾಸ್ ಕೆಲವೊಮ್ಮೆ ಬಹಳ ಮಹತ್ವ ಪಡೆದುಕೊಂಡಿರುತ್ತದೆ. ಮೊದಲ ದಿನ ಪಿಚ್ ಬೌಲರ್‌ಗಳಿಗೆ ಉತ್ತಮವಾಗಿ ಸಹಕಾರ ನೀಡುತ್ತದೆ ಎಂಬಂತಿದ್ದರೆ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು ಮೇಲುಗೈ ಸಾಧಿಸುತ್ತದೆ. ಅದೇ ರೀತಿ ಏಕದಿನ ಕ್ರಿಕೆಟ್‌ನಲ್ಲಿ ಇಬ್ಬನಿ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದ್ದರೆ ಟಾಸ್ ಗೆದ್ದ ತಂಡ ರನ್ ಬೆನ್ನಟ್ಟಲು ಬಯಸುತ್ತದೆ. ಎರಡನೇ ಅವಧಿಯಲ್ಲಿ ಬೌಲಿಂಗ್ ನಡೆಸುವುದು ಇಂತಾ ಸಂದರ್ಭದಲ್ಲಿ ಕಠಿಣವಾಗಿರುತ್ತದೆ.

ಟೋಕಿಯೋ ಒಲಿಂಪಿಕ್ಸ್: ಮಣಿಕಾ ಬಾತ್ರಾಗೆ ಟಿಟಿಎಫ್‌ಐನಿಂದ ಶೋಕಾಸ್ ನೋಟಿಸ್!ಟೋಕಿಯೋ ಒಲಿಂಪಿಕ್ಸ್: ಮಣಿಕಾ ಬಾತ್ರಾಗೆ ಟಿಟಿಎಫ್‌ಐನಿಂದ ಶೋಕಾಸ್ ನೋಟಿಸ್!

ಟಾಸ್ ಗೆಲ್ಲುವ ಮೂಲಕ ಪಂದ್ಯದ ಫಲಿತಾಂಶ ತಮ್ಮ ಪರವಾಗಿ ಬರಲು ಪೂರಕವಾಗುವಂತಾ ನಿರ್ಣಯವನ್ನು ಆಯಾ ತಂಡಗಳ ನಾಯಕರು ತೆಗೆದುಕೊಳ್ಳತ್ತಾರೆ. ಹೀಗಾಗಿಯೇ ಟಾಸ್‌ಗೆ ಕ್ರಿಕೆಟ್‌ನಲ್ಲಿ ಹೆಚ್ಚಿನ ಮಹತ್ವವಿದೆ. ಹಾಗಾಗಿ ಭಾರತೀಯ ಕ್ರಿಕೆಟ್ ತಂಡದ ನಾಯಕರ ಪೈಕಿ ಅತಿ ಹೆಚ್ಚು ಬಾರಿ ಟಾಸ್ ಸೋತ ನಾಯಕರ ಬಗ್ಗೆ ಮುಂದೆ ಓದಿ..

5. ಕಪಿಲ್‌ದೇವ್- 19 ಬಾರಿ ಟಾಸ್ ಸೋಲು

5. ಕಪಿಲ್‌ದೇವ್- 19 ಬಾರಿ ಟಾಸ್ ಸೋಲು

ಭಾರತದ ಪ್ರಥಮ ವಿಶ್ವಕಪ್ ಗೆದ್ದ ತಂಡದ ನಾಯಕ ಕಪಿಲ್‌ದೇವ್ ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ ನಾಯಕ ಕಪ್‌ದೇವ್‌ಗೆ ಒಟ್ಟು 19 ಬಾರಿ ಟಾಸ್ ತಮ್ಮ ವಿರುದ್ಧ ಬಂದಿತ್ತು. ಈ ಮೂಲಕ ಅತಿ ಹೆಚ್ಚು ಬಾರು ಟಾಸ್ ಸೋಲು ನಾಯಕರ ಪಟ್ಟಿಯಲ್ಲಿ ಕಪಿಲ್ 5ನೇ ಸ್ಥಾನ ಪಡೆಯುತ್ತಾರೆ. ಇನ್ನು ಟಾಸ್ ಸೋತಿರುವ ಸಂದರ್ಭದಲ್ಲಿ ಕೇವಲ 1 ಬಾರಿ ಮಾತ್ರವೇ ಭಾರತ ತಂಡ ಗೆಲುವು ಸಾಧಿಸಿದೆ. ಟಾಸ್ ಸೋತ 19 ಪಂದ್ಯಗಳಲ್ಲಿ 12 ಪಂದ್ಯಗಳನ್ನು ಭಾರತ ಡ್ರಾ ಮಾಡಿಕೊಂಡಿತ್ತು. ಇದರಲ್ಲಿ ಐದು ಪಂದ್ಯಗಳಲ್ಲಿ ಭಾರತ ಸೋಲು ಕಂಡಿದ್ದರೆ ಒಂದು ಪಂದ್ಯ ಟೈ ಫಲಿತಾಂಶವನ್ನು ಪಡೆದಿತ್ತು.

4. ಸುನಿಲ್ ಗವಾಸ್ಕರ್- 25 ಬಾರಿ

4. ಸುನಿಲ್ ಗವಾಸ್ಕರ್- 25 ಬಾರಿ

ಟೆಸ್ಟ್ ಕ್ರಿಕೆಟ್‌ನ ದಿಗ್ಗಜ ಆಟಗಾರ ಎನಿಸಿರುವ ಸುನಿಲ್ ಗವಾಸ್ಕರ್ ಟಾಸ್ ಸೋತಿರುವ ಭಾರತೀತ ನಾಯಕರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ನಾಯಕನಾಗಿದ್ದ ಸಂದರ್ಣದಲ್ಲಿ ಗವಾಸ್ಕರ್ 25 ಪಂದ್ಯಗಳಲ್ಲಿ ಟಾಸ್ ಸೋತಿದ್ದರು. ಆದರೆ ಅವುಗಳಲ್ಲಿ ಗವಾಸ್ಕರ್ 5 ಗೆಲುವು ಹಾಗೂ 4 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ. ಟಾಸ್ ಸೋತಿರುವ 25 ಪಂದ್ಯಗಳಲ್ಲಿ 16 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಗವಾಸ್ಕರ್ ನೇತೃತ್ವದ ತಂಡಕ್ಕೆ ಟಾಸ್ ಸೋಲು ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

3. ಸೌರವ್ ಗಂಗೂಲಿ-28 ಬಾರಿ

3. ಸೌರವ್ ಗಂಗೂಲಿ-28 ಬಾರಿ

ಟಾಸ್ ಸೋತ ಪಂದ್ಯಗಳಲ್ಲಿ ಹೆಚ್ಚಿನ ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ಸೌರವ್ ಗಂಗೂಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಟೆಸ್ಟ್ ಪಂದ್ಯಗಳಲ್ಲಿ 28 ಬಾರಿ ಸೌರವ್ ಗಂಗೂಲಿ ಟಾಸ್ ಸೋತಿದ್ದಾರೆ. ಇದರಲ್ಲಿ 12 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಇದರಲ್ಲಿ ಒಂಬತ್ತು ಪಂದ್ಯಗಳನ್ನು ಎದುರಾಳಿಗಳು ಗೆದ್ದುಕೊಂಡಿದ್ದಾರೆ ಹಾಗೂ ಏಳು ಪಂದ್ಯಗಳು ಡ್ರಾ ಗೊಂಡಿದೆ.

2. ಎಂಎಸ್ ಧೋನಿ 34 ಬಾರಿ

2. ಎಂಎಸ್ ಧೋನಿ 34 ಬಾರಿ

ಕ್ರಿಕೆಟ್ ಇತಿಹಾಸದ ಅತ್ಯುತ್ತಮ ನಾಯಕರಲ್ಲಿ ಒಬ್ಬರು ಎನಿಸಿರುವ ಮಹೇಂದ್ರ ಸಿಂಗ್ ಧೋನಿ ಟಾಸ್ ಸೋತ ಸಂದರ್ಭದಲ್ಲಿಯೂ 2:1ರಷ್ಟು ಗೆಲುವಿನ ಅನುಪಾತ ಹೊಂದಿರುವುದು ವಿಶೇಷ. ಧೋನಿ ತಮ್ಮ ಟೆಸ್ಟ್ ಕ್ರಿಕಟ್‌ನ ನಾಯಕತ್ವದ ಅವಧಿಯಲ್ಲಿ 34 ಬಾರಿ ಟಾಸ್ ಸೋತಿದ್ದಾರೆ. ಟಾಸ್ ಸೋತಿರುವ ಈ 34 ಪಂದ್ಯಗಳಲ್ಲಿ ಭಾರತ 18 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅವರ ಗೆಲುವಿನ ಪ್ರಮಾಣ 50 ಶೇಕಡಾಗಿಂತ ಹೆಚ್ಚಿದೆ. ಕೇವಲ 9 ಪಂದ್ಯಗಳು ಮಾತ್ರವೇ ಸೋಲಿನಲ್ಲಿ ಅಂತ್ಯವಾಗಿದೆ. 7 ಪಂದ್ಯಗಳನ್ನು ಭಾರತ ಡ್ರಾ ಮಾಡಿಕೊಂಡಿತ್ತು.

1. ವಿರಾಟ್ ಕೊಹ್ಲಿ 35 ಬಾರಿ

1. ವಿರಾಟ್ ಕೊಹ್ಲಿ 35 ಬಾರಿ

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದ ಟಾಸ್ ಸೋಲುವ ಮೂಲಕ ವಿರಾಟ್ ಕೊಹ್ಲಿ 35ನೇ ಬಾರಿ ನಾಯಕನಾಗಿ ಟಾಸ್ ಸೋತಿದ್ದಾರೆ. ಈ ಮೂಲಕ ಭಾರತ ತಮಡದ ಅತಿ ಹೆಚ್ಚಿ ಟಾಸ್ ಸೋತ ಟೆಸ್ಟ್ ನಾಯಕ ಎನಿಸಿದ್ದಾರೆ. ಟಾಸ್ ಸೋತ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸೋಲು ಗೆಲುವಿನ ಅನುಪಾತ 1:1ರಷ್ಟಿದೆ. 14 ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ 14 ಪಂದ್ಯಗಳಲ್ಲ ಸೋಲು ಕಂಡಿದೆ. ಉಳಿದ 6 ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, August 5, 2021, 16:13 [IST]
Other articles published on Aug 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X