ಐಪಿಎಲ್ ಇತಿಹಾಸದ ಪ್ರಪ್ರಥಮ ಪಂದ್ಯದಲ್ಲಿ ನೀವು ಮರೆತಿರುವ ಕುತೂಹಲಕಾರಿ 5 ಸಂಗತಿಗಳಿವು!

ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾದ ಕ್ರಿಕೆಟ್ ಟೂರ್ನಿ ಎಂಬುದರಲ್ಲಿ ಅನುಮಾನವೇ ಇಲ್ಲ. ಹದಿಮೂರು ವರ್ಷಗಳ ಹಿಂದೆ ಆರಂಭವಾದ ಈ ಶ್ರೀಮಂತ ಲೀಗ್, ಆಟಗಾರರ, ಪ್ರೇಕ್ಷಕರ ಹಾಗೂ ಕ್ರಿಕೆಟ್‌ನ ಅಭಿಮಾನಿಗಳ ದೃಷ್ಠಿಕೋನವನ್ನು ಬದಲಾಯಿಸುವಲ್ಲೂ ಕಾರಣವಾಗಿದೆ.
2008ರಲ್ಲಿ ಆರಂಭವಾದ ಐಪಿಎಲ್‌ನ ಪ್ರಥಮ ಪಂದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡೆದಿತ್ತು. ಅಂದಿನ ಪಂದ್ಯದಲ್ಲಿ ಕೆಕೆಆರ್ ಅಬ್ಬರದ ಆಟವನ್ನು ಪ್ರದರ್ಶಿಸಿ ಐಪಿಎಲ್‌ಗೆ ಅಭೂತಪೂರ್ವ ಆರಂಭವನ್ನು ನೀಡಿತ್ತು. ಅಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಸ್ಪೋಟಕ ಆಟಗಾರ ಬ್ರೆಂಡನ್ ಮೆಕ್‌ಕಲಮ್ 13 ಸಿಕ್ಸರ್‌ಗಳ ಸಹಿತ 158 ರನ್‌ಗಳನ್ನು ಚಚ್ಚಿದ್ದರು.
ಇದು ಐಪಿಎಲ್ ಕ್ರಿಕೆಟ್ ಅಭಿಮಾನಿಗಳ ನೆನಪಿನಲ್ಲಿ ತುಂಬಾ ಚೆನ್ನಾಗಿ ಉಳಿದುಕೊಂಡಿದೆ. ಆದರೆ ಇಂದು ಐಪಿಎಲ್ ಇತಿಹಾಸದ ಈ ಪ್ರಪ್ರಥಮ ಪಂದ್ಯದಲ್ಲಿ ನಡೆದ ಅಭಿಮಾನಿಗಳು ಖಂಡಿತಾ ಮರೆತು ಹೋಗಿರಬಹುದಾದ ಐದು ಕುತೂಹಲಕಾರಿ ಸಂಗತಿಯನ್ನು ಬನ್ನಿ ನೋಡೋಣ.

ಒಂದೇ ತಂಡದಲ್ಲಿ ಆಡಿದ್ದರು ಗಂಗೂಲಿ-ಪಾಂಟಿಂಗ್
ವಿಶ್ವ ಕ್ರಿಕೆಟ್ ಕಂಡ ಅದ್ಭುತ ನಾಯಕರು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ. ಈ ಇಬ್ಬರೂ ಶ್ರೇಷ್ಟ ನಾಯಕರು ಜಿದ್ದಿಗೆ ಬಿದ್ದವರಂತೆ ತಮ್ಮ ರಾಷ್ಟ್ರಗಳ ಪರವಾಗಿ ಆಡಿದ್ದರು. ಆದರೆ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ ಈ ಇಬ್ಬರೂ ಮಹಾನ್ ನಾಯಕರು ಒಂದೇ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ ಸೌರವ್ ಗಂಗೂಲಿ ಮುನ್ನಡೆಸಿದ್ದರೆ ರಿಕಿ ಪಾಂಟಿಂಗ್ ಪ್ರಮುಖ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿದ್ದರು.

ಮೊದಲ ಎಸೆತ ಎದುರಿಸಿದ್ದು ಸೌರವ್ ಗಂಗೂಲಿ
ಐಪಿಎಲ್ ಇತಿಹಾಸದ ಮೊದಲ ಎಸೆತವನ್ನು ಎದುರಿಸಿದ್ದು ಹಾಲಿ ಬಿಸಿಸಿಐ ಅಧ್ಯಕ್ಷ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ. ಕೊಲ್ಕತ್ತಾ ತಮಡದ ಪರವಾಗಿ ಆರಂಭಿಕರಾಗಿ ಗಂಗೂಲಿ ಕಣಕ್ಕಿಳಿದಿದ್ದರು. ಈ ಟೂರ್ನಿಯಲ್ಲಿ ಮೊದಲ ಬಾಲ್ ಎಸೆದ ಕೀರ್ತಿ ಟೀಮ್ ಇಂಡಿಯಾದ ಮಾಜಿ ವೇಗಿ ಆರ್‌ಸಿಬಿ ತಂಡದ ಪ್ರಮುಖ ಬೌಲರ್ ಆಗಿದ್ದ ಪ್ರವೀಣ್ ಕುಮಾರ್ ಅವರಿಗೆ ಸಲ್ಲುತ್ತದೆ.

ಆರ್‌ಸಿಬಿ ಪರ ಕಣಕ್ಕಿಳಿದಿದ್ದರು ಸುನಿಲ್ ಜೋಶಿ
ಬಿಸಿಸಿಐನ ಹಾಲಿ ಅಧ್ಯಕ್ಷ ಸುನಿಲ್ ಜೋಶಿ ಐಪಿಎಲ್ ಇತಿಹಾಸದ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ದಿಗ್ಗಜ ಬೌಲರ್ ಎನಿಸಿದ್ದ ಸುನಿಲ್ ಜೋಶಿ ಅಂದು ಆರ್‌ಸಿಬಿ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಜೋಶಿ ಮೂರು ಓವರ್‌ಗಳನ್ನು ಎಸೆದಿದ್ದರು.

ಆರ್‌ಸಿಬಿ ಪರ ಎರಡಂಕ ತಲುಪಿದ್ದ ಏಕೈಕ ಬ್ಯಾಟ್ಸ್‌ಮನ್ ಪ್ರವೀಣ್ ಕುಮಾರ್
ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಇತಿಹಾಸದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಅಬ್ಬರವನ್ನು ತೋರಿಸಿತ್ತು. ಇದನ್ನು ಬೆನ್ನತ್ತಿದ್ದ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ದೊಡ್ಡ ದೊಡ್ಡ ಹೆಸರಿತ್ತು. ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಜಾಕ್ ಕ್ಯಾಲೀಸ್ ಕ್ಯಾಮರೂನ್ ವೈಟ್ ಅವರಂತಾ ಆಟಗಾರರು ಆರ್‌ಸಿಬಿ ತಂಡದಲ್ಲಿದ್ದರು. ಆದರೆ ಎಲ್ಲಾ ಆಟಗಾರರು ಮೊದಲ ಪಂದ್ಯದಲ್ಲಿ ವಿಫಲವಾಗಿ ಒಂದಂಕೆಗೆ ವಿಕೆಟ್ ಕಳೆದುಕೊಂಡಿದ್ದರು. ಬೌಲಿಂಗ್ ಸ್ಪೆಶಲಿಸ್ಟ್ ಪ್ರವೀಣ್ ಕುಮಾರ್ ಮಾತ್ರವೇ ಈ ಪಂದ್ಯದಲ್ಲಿ ಎರಡಂಕಿಯನ್ನು ತಲುಪಿದ್ದರು. 15 ಎಸೆತಗಳಲ್ಲಿ ಪ್ರವೀಣ್ ಕುಮಾರ್ 18 ರನ್ ಗಳಿಸಿದ್ದರು. ಆರ್‌ಸಿಬಿ ಕೇವಲ 82 ರನ್ ಗಳಿಸಿತ್ತು.

ವಿರಾಟ್ ಕೊಹ್ಲಿಯ ವಿಕೆಟ್ ಪಡೆದಿದ್ದ ಅಶೋಕ್ ದಿಂಡಾ
ಅಶೋಕ್ ದಿಂಡಾ ಹೆಸರು ನೀವು ಮರೆತಿರಲಾರಿರಿ. ಟಿ20 ಕ್ರಿಕೆಟ್‌ನಲ್ಲಿ ದಿಂಡಾ ಯಶಸ್ಸನ್ನು ಗಳಿಸಲು ಸಾದ್ಯವಾಗಲಿಲ್ಲ. ಆದರೆ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಒಂದು ಸಂಗತಿಯನ್ನು ಖಂಡಿತಾ ಮರೆತಿರುತ್ತೀರಿ. ಐಪಿಎಲ್ ಇತಿಹಾಸದ ಮೊದಲ ಪಂದ್ಯದಲ್ಲಿ ಅಶೋಕ್ ದಿಂಡಾ ಈಗ ವಿಶ್ವ ಕ್ರಿಕೆಟ್‌ನಲ್ಲಿ ಸಾಮ್ರಾಟನಾಗಿ ಮಿಂಚುತ್ತಿರುವ ವಿರಾಟ್ ಕೊಹ್ಲಿ ವಿಕೆಟನ್ನು ಕಡಿಮೆ ರನ್‌ಗೆ ಕಿತ್ತು ಕೆಕೆಆರ್‌ಗೆ ಯಶಸ್ಸು ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications