ಟೀಂ ಇಂಡಿಯಾ ಬಗ್ಗುಬಡಿದು ಸರಣಿ ಬಾಚಿಕೊಂಡ ಎಬಿಡಿ ಪಡೆ
ಮುಂಬೈ, ಅ.25: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವಿನ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳು ರನ್ ಹೊಳೆ ಹರಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಡಿ ಕಾಕ್, ಡುಪ್ಲೆಸಿಸ್ ಹಾಗೂ ನಾಯಕ ಎಬಿ ಡಿ ವಿಲಿಯರ್ಸ್ ಅವರ ಆಕರ್ಷಕ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ 50 ಓವರ್ ಗಳಲ್ಲಿ 438/3 ಸ್ಕೋರ್ ಮಾಡಿತ್ತು. ಬೃಹತ್ ಮೊತ್ತವನ್ನು ಚೇಸ್ ಮಾಡಲಾಗದೆ ಟೀಂ ಇಂಡಿಯಾ 36 ಓವರ್ ಗಳಲ್ಲಿ 224 ರನ್ ಗಳಿಸಿ 214 ರನ್ ಗಳ ಭಾರಿ ಅಂತರದಲ್ಲಿ ಸೋಲು ಕಂಡಿದೆ
ದಕ್ಷಿಣ ಆಫ್ರಿಕಾ ನೀಡಿದ ಗುರಿಯನ್ನು ಬೆನ್ನು ಹತ್ತಿರುವ ಭಾರತ, ಆರಂಭಿಕ ಆಘಾತದ ನಂತರ ಚೇತರಿಸಿಕೊಂಡಿದೆ. ರೋಹಿತ್ ಹಾಗೂ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರೂ ಧವನ್ ಹಾಗೂ ರಹಾನೆ ಅವರ ಹೋರಾಟದ ಅರ್ಧಶತಕದ ನೆರವಿನಿಂದ ಅಭಿಮಾನಿಗಳಿಗೆ ಆಸೆ ಹುಟ್ಟಿಸಿದರು. ಅದರೆ, ಮಧ್ಯಮ ಕ್ರಮಾಂಕದ ಕುಸಿತ, ರಬಾಡಾ ಸೇರಿದಂತೆ ದಕ್ಷಿಣ ಆಫ್ರಿಕಾ ತಂಡದ ಕರಾರು ವಾಕ್ ಬೌಲಿಂಗ್ ನಿಂದ ಕಂಗೆಟ್ಟ ಧೋನಿ ಪಡೆ ಈ ಪಂದ್ಯ ಹಾಗೂ ಸರಣಿಯನ್ನು ಕಳೆದುಕೊಂಡಿದೆ.
ಡಿ ಕಾಕ್ 42 ಎಸೆತಗಳಲ್ಲಿ 50 ರನ್ ಗಳಿಸಿ ಭರ್ಜರಿ ಆರಂಭ ಒದಗಿಸಿದರು. ತಾಳ್ಮೆಯುತ ಅರ್ಧಶತಕ ಬಾರಿಸಿದ ಡುಫ್ಲೆಸಿಸ್ ಜೊತೆ ಉತ್ತಮ ಜೊತೆಯಾಟ (150 ರನ್ 134 ಎಸೆತ) ಪ್ರದರ್ಶಿಸುತ್ತಾ ತ್ವರಿತಗತಿಯಲ್ಲಿ ಶತಕ ಸಿಡಿಸಿದ ಡಿ ಕಾಕ್ (87 ಎಸೆತಗಳಲ್ಲಿ 109) ಅವರು ಟೀಂ ಇಂಡಿಯಾ ಬೌಲರ್ ಗಳಿಗೆ ಮಾರಕವಾದರು. 44 ಓವರ್ ಗಳಲ್ಲಿ 351/2 ಸ್ಕೋರ್ ಮಾಡಿದ್ದ ದಕ್ಷಿಣ ಆಫ್ರಿಕಾ ಅಂತಿಮ ಐದು ಓವರ್ ಗಳಲ್ಲಿ ರನ್ ಗಾತಿ ಇನ್ನಷ್ಟು ಹೆಚ್ಚಿಸಿಕೊಂಡಿತು.

ಕೊನೆಗೆ ಡಿ ಕಾಕ್ 87 ಎಸೆತಗಳಲ್ಲಿ 109ರನ್ ಗಳಿಸಿ ಔಟಾದರು. ಡುಪ್ಲೆಸಿಸ್ ಅಮೋಘ ಶತಕ 133* (114) ಸಿಡಿಸಿ,ಸ್ನಾಯುಸೆಳೆತಕ್ಕೆ ಒಳಗಾದ ಡುಪ್ಲೆಸಿಸ್ ಪೆವಿಲಿಯನ್ ಗೆ ತೆರಳಿದರು. ನಾಯಕ ಎಬಿಡಿ ಕ್ವಿಕ್ ಆಗಿ ಶತಕ (61 ಎಸೆತಗಳಲ್ಲಿ 119 ರನ್) ಬಾರಿಸಿದರು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ ಡಿ ವಿಲಿಯರ್ಸ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಐದು ಪಂದ್ಯಗಳ ಸರಣಿ 2-2ರಲ್ಲಿ ಸಮಬಲ ಕಂಡಿರುವುದರಿಂದ ಸಹಜವಾಗಿ ಈ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ.
ಟಾಸ್ ವರದಿ: ನಾಲ್ಕನೇ ಪಂದ್ಯವಾಡಿದ್ದ ತಂಡವನ್ನೇ ಟೀಂ ಇಂಡಿಯಾ ಉಳಿಸಿಕೊಂಡಿದ್ದರೆ, ದಕ್ಷಿಣ ಆಫ್ರಿಕಾ ತಂಡದಲ್ಲಿ ಕ್ರಿಸ್ ಮೋರಿಸ್ ಹಾಗೂ ಅರೋನ್ ಫಂಗೀಸೋ ಸ್ಥಾನ ಕಳೆದುಕೊಂಡಿದ್ದು, ಅವರ ಬದಲಿಗೆ ಡೀನ್ ಎಲ್ಗಾರ್ ಹಾಗೂ ಕೈಲಿ ಅಬಾಟ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.

ತಂಡಗಳು
ಭಾರತ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್), ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಸುರೇಶ್ ರೈನಾ, ಅಕ್ಷರ್ ಪಟೇಲ್, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಮೋಹಿತ್ ಶರ್ಮ, ಅಮಿತ್ ಮಿಶ್ರಾ.
ದಕ್ಷಿಣ ಆಫ್ರಿಕಾ: ಎಬಿ ಡಿ ವಿಲಿಯರ್ಸ್(ನಾಯಕ), ಕ್ವಿಂಟಾನ್ ಡಿ ಕಾಕ್, ಡೇವಿಡ್ ಮಿಲ್ಲರ್, ಹಶೀಂ ಅಮ್ಲಾ, ಡುಪ್ಲೆಸಿಸ್, ಡೀನ್ ಎಲ್ಗಾರ್, ಬೆಹರ್ದೀನ್, ಡೇಲ್ ಸ್ಟೈನ್, ಫಂಗೀಸೊಮ, ಇಮ್ರಾನ್ ತಾಹೀರ್, ಕೈಲಿ ಅಬಾಟ್. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications