ಭಾರತದಲ್ಲಿ ಎರಡನೆ ಮದುವೆಯಾದ ಅನೇಕ ಕ್ರಿಕೆಟಿಗರು ಇದ್ದಾರೆ. ಆಟಗಾರರ ಹೆಂಡಿತಿಗೆ ಮೋಸ್ ಮಾಡಿದ್ದಾರೆಂದು, ಇನ್ನೊಂದ ಕಡೆ ಹೆಂಡತಿ ಅವನಿಗೆ ಮೋಸ ಮಾಡಿದ ಸಂಗತಿಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ. ಇಂತಹ ಕೆಲವು ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.
ಈ ಪಟ್ಟಿಯಲ್ಲಿ ಎಲ್ಲರ ಮನಸ್ಸಿಗೆ ಥಟ್ಟನೆ ಬರುವ ಹಸರು ದಿನೇಶ್ ಕಾರ್ತಿಕ್. ಮುರಳಿ ವಿಜಯ್ ಗಾಗಿ ದಿನೇಶ್ ಕಾರ್ತಿಕ್ ಪತ್ನಿ ಮೋಸ ಮಾಡಿದರೆ, ಅಜರುದ್ದೀನ್ ತನ್ನ ಮೊದಲ ಪತ್ನಿ ನೌರೀನ್ ಅವರನ್ನು ಬಾಲಿವುಡ್ ನಟಿ ಸಂಗೀತಾ ಬಿಜಲಾನಿಗಾಗಿ ಬಿಟ್ಟರು. ಕೆಲವು ಕ್ರಿಕೆಟಿಗರು ಪರಸ್ಪರ ಒಪ್ಪಿಗೆಯೊಂದಿಗೆ ಪತ್ನಿಯಿಂದ ಬೇರ್ಪಟ್ಟು ಹೊಸ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರು. ಮಕ್ಕಳಾದ ನಂತರ ಮೊದಲ ಹೆಂಡತಿಯನ್ನು ಬಿಟ್ಟು ಬೇರೊಬ್ಬ ಹುಡುಗಿಯ ಕೈ ಹಿಡಿದ ಈ ಕ್ರಿಕೆಟಿಗರು ಅನೇಕರಿದ್ದಾರೆ.
ಟೀಮ್ ಇಂಡಿಯಾದ ಅನೇಕ ಯುವ ಹಾಗೂ ಹಿರಿಯ ಆಟಗಾರರು ಎರಡನೇ ಮದುವೆಯಾಗಿದ್ದಾರೆ. ವಿಶೇಷವೆಂದರೆ ಕೆಲವು ಕ್ರಿಕೆಟಿಗರು ತಮ್ಮ ಇಳಿ ವಯಸ್ಸಿನಲ್ಲಿ ಮದುವೆಯಾಗಿದ್ದಾರೆ. ಎರಡನೇ ಮದುವೆಯಾದ ಕ್ರಿಕೆಟ್ ಆಟಗಾರರು ಖುಷಿಯಿಂದ ಜೀವನ ನಡೆಸುತ್ತಿದ್ದಾರೆ.

ದಿನೇಶ್ ಕಾರ್ತಿಕ್: ಭಾರತೀಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 2007 ರಲ್ಲಿ ತನ್ನ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು ವಿವಾಹವಾದರು. ಆದರೆ ಮದುವೆಯಾದ ಹಲವಾರು ವರ್ಷಗಳ ನಂತರ, ನಿಕಿತಾ ದಿನೇಶ್ ಕಾರ್ತಿಕ್ ಅವರ ಸ್ನೇಹಿತ ಮತ್ತು ಕ್ರಿಕೆಟಿಗ ಮುರಳಿ ವಿಜಯ್ ಅವರನ್ನು ಪ್ರೀತಿಸುತ್ತಿದ್ದರು.
ನಿಕಿತಾ 2012ರಲ್ಲಿ ದಿನೇಶ್ ಕಾರ್ತಿಕ್ ಗೆ ವಿಚ್ಛೇದನ ನೀಡಿ ಮುರಳಿ ವಿಜಯ್ ಅವರನ್ನು ವಿವಾಹವಾಗಿದ್ದರು. ಇದಾದ ನಂತರ ದಿನೇಶ್ ಕಾರ್ತಿಕ್ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದರು. ದಿನೇಶ್ ಕಾರ್ತಿಕ್ 2015 ರಲ್ಲಿ ಚಾಂಪಿಯನ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾದರು. ಇಬ್ಬರಿಗೂ ಅವಳಿ ಗಂಡು ಮಕ್ಕಳಿದ್ದಾರೆ.

ಮೊಹಮ್ಮದ್ ಅಜರುದ್ದೀನ್: ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನವು ಏರಿಳಿತಗಳಿಂದ ಕೂಡಿದೆ. ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಅವರ ಹೆಸರು ಕಾಣಿಸಿಕೊಂಡ ನಂತರ ಅವರ ವೃತ್ತಿಜೀವನವು ಇದ್ದಕ್ಕಿದ್ದಂತೆ ಕುಸಿತ ಕಂಡಿತು. ಅಜರ್ ಎರಡು ಬಾರಿ ವಿವಾಹವಾದರೂ, ಇಬ್ಬರೂ ಹೆಂಡತಿಯರಿಗೆ ವಿಚ್ಛೇದನ ನೀಡಲಾಗಿದೆ.
1987 ರಲ್ಲಿ, ಅಜರ್ ನೌರೀನ್ ಅವರನ್ನು ವಿವಾಹವಾದರು ಮತ್ತು ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದರು. ಇದರ ನಂತರ, ಅಜರ್ 1996 ರಲ್ಲಿ ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಅವರನ್ನು ಮದುವೆಯಾಗಲು ನೌರೀನ್‌ಗೆ ವಿಚ್ಛೇದನ ನೀಡಿದರು. ಸಂಗೀತಾ ಬಿಜಲಾನಿ ಜತೆಗಿನ ಅಜರುದ್ದೀನ್ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ. ಅಜರ್ ಮತ್ತು ಸಂಗೀತಾ ಬಿಜಲಾನಿ 2010 ರಲ್ಲಿ ವಿಚ್ಛೇದನ ಪಡೆದರು.

ಜಾವಗಲ್ ಶ್ರೀನಾಥ್: ಸದ್ಯ ಐಸಿಸಿ ಮ್ಯಾಚ್ ರೆಫ್ರಿ, ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಅವರು 1999 ರ ವಿಶ್ವಕಪ್ ಮುಗಿದ ನಂತರ ಜ್ಯೋತ್ಸ್ನಾ ಅವರನ್ನು ವಿವಾಹವಾದರು, ಆದರೆ ಅವರಿಬ್ಬರೂ ಕೆಲವು ವರ್ಷಗಳ ನಂತರ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರು. ಜ್ಯೋತ್ಸ್ನಾಗೆ ವಿಚ್ಛೇದನ ನೀಡಿದ ನಂತರ ಶ್ರೀನಾಥ್ ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ವಿವಾಹವಾದರು.
ವಿನೋದ್ ಕಾಂಬ್ಳಿ: ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ಮತ್ತು ಮಾಜಿ ಭಾರತೀಯ ಕ್ರಿಕೆಟಿಗ ವಿನೋದ್ ಕಾಂಬ್ಳಿ. ವಿನೋದ್ 1998 ರಲ್ಲಿ ನೋಯೆಲ್ಲಾ ಲೂಯಿಸ್ ಅವರನ್ನು ವಿವಾಹವಾದರು. ನೋಯೆಲಾ ಆಗ ಹೊಟೇಲ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು, ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವು ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದರು. ಇದರ ನಂತರ, ಕಾಂಬ್ಳಿ ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು, ನಂತರ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಇತ್ತೀಚೆಗೆ ಕಾಂಬ್ಳಿ ವಿರುದ್ಧ ಅವರ ಪತ್ನಿ ಹಲ್ಲೆ ನಡೆಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.


ಶಿಖರ್ ಧವನ್: ಧವನ್ 2009 ರಲ್ಲಿ ಮೆಲ್ಬೋರ್ನ್ ಮೂಲದ ಏಷಾ ಮುಖರ್ಜಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು 2012 ರಲ್ಲಿ ಅವರನ್ನು ವಿವಾಹವಾದರು. ಶಿಖರ್ ಅವರೊಂದಿಗಿನ ವಿವಾಹದ ಮೊದಲು, ಆಶಾ ಆಸ್ಟ್ರೇಲಿಯಾದ ಉದ್ಯಮಿಯೊಂದಿಗೆ ವಿವಾಹವಾಗಿದ್ದರು.
ಶಿಖರ್ ಜೊತೆಗಿನ ಸಂಬಂಧವನ್ನು ಸಹ ಏಷಾ ಉಳಿಸಿಕೊಳ್ಳುವಲ್ಲಿ ವಿಫಲರಾದರು. 5 ಅಕ್ಟೋಬರ್ 2023 ರಂದು, ಶಿಖರ್ ಧವನ್ ಅಂತಿಮವಾಗಿ ಪತ್ನಿಯಿಂದ ವಿಚ್ಛೇದನವನ್ನು ಪಡೆದರು. ಅವರಿಗೆ ಜೋರಾವರ್ ಧವನ್ ಎಂಬ ಮಗನಿದ್ದಾನೆ.