ಇಂಗ್ಲೆಂಡ್ vs ಪಾಕಿಸ್ತಾನ ಏಕದಿನ ಸರಣಿ: ಇಂಗ್ಲೆಂಡ್ ತಂಡದ 3 ಆಟಗಾರರಿಗೆ ಕೊರೊನಾವೈರಸ್

ಲಂಡನ್, ಜುಲೈ 6: ಭಾರತದ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೆ ಒಂದು ತಿಂಗಳ ಮುನ್ನ ಇಂಗ್ಲೆಂಡ್ ತಂಡಕ್ಕೆ ಕೊರೊನಾವೈರಸ್ ಆಘಾತವನ್ನು ನೀಡಿದೆ. ಏಕದಿನ ತಂಡದಲ್ಲಿ ಕೊರೊನಾವೈರಸ್ ಕಾಣಿಸಿಕೊಂಡಿದ್ದು ಮೂವರು ಆಟಗಾರರು ಕೊರೊನಾವೈರಸ್‌ಗೆ ತುತ್ತಾಗಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡ ಶ್ರೀಲಂಕಾ ಕ್ರಿಕೆಟ್ ತಂಡದ ವಿರುದ್ಧ ಏಕದಿನ ಸರಣಿಯ ಮರು ದಿನ ಅಂದರೆ ಸೋಮವಾರ ಕೊರೊನಾವೈರಸ್ ಪರೀಕ್ಷೆಗೆ ಒಳಗಾಯಿತು. ಈ ಸಂದರ್ಭದಲ್ಲಿ ತಂಡದಲ್ಲಿನ ಮೂವರು ಆಟಗಾರರು ಹಾಗೂ ನಾಲ್ವರು ಸಿಬ್ಬಂದಿಗಳು ಕೊರೊನಾವೈರಸ್‌ಗೆ ತುತ್ತಾಗಿರುವುದು ಬೆಳಕಿದೆ ಬಂದಿದೆ. ಈಗ ಸಂಪೂರ್ಣ ತಂಡ ಐಸೋಲೇಶನ್‌ನಲ್ಲಿದೆ.
ಯಾವೆಲ್ಲಾ ಆಟಗಾರರು ಕೊರೊನಾವೈರಸ್‌ಗೆ ತುತ್ತಾಗಿದ್ದಾರೆ ಎಂಬ ಬಗ್ಗೆ ಈವರೆಗೆ ಮಾಹಿತಿಯನ್ನು ನೀಡಿಲ್ಲ. ಪಾಕಿಸ್ತಾನದ ವಿರುದ್ಧ ಏಕದಿನ ಸರಣಿ ನಿಗದಿಯಂತೆಯೇ ನಡೆಯಲಿದ್ದು ಅದಕ್ಕೆ ಹೊಸ ಸ್ಕ್ವಾಡ್ ಹೆಸರಿಸಲಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ನೀಡಿದ್ದು ಭಾನುವಾರದಿಂದ ತಂಡದ ಸದಸ್ಯರು ಪ್ರತ್ಯೇಕವಾಗಿದ್ದಾರೆ ಎಂದು ತಿಳಿಸಿದೆ. ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಮರಳಲಿದ್ದು ಖಾಯಂ ನಾಯಕ ಇಯಾನ್ ಮಾರ್ಗನ್ ಬದಲಿಗೆ ಪಾಕಿಸ್ತಾನ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಇಸಿಬಿ ಮಾಹಿತಿ ನೀಡಿದೆ.
ಜುಲೈ 7ರಿಂದ ಪಾಕಿಸ್ತಾನದ ವಿರುದ್ಧ ಆರು ಪಂದ್ಯಗಳ ಸೀಮಿತ ಓವರ್‌ಗಳ ಸರಣಿ ಆರಂಭವಾಗಲಿದೆ. ಕಾರ್ಡಿಫ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು ನಿಗದಿಯಂತೆಯೇ ಸರಣಿ ಮುಂದುವರಿಯಲಿದೆ ಎಂದು ಇಸಿಬಿ ತಿಳಿಸಿದೆ. ಬೆನ್ ಸ್ಟೋಕ್ಸ್ ನೇತೃತ್ವದ ಹೊಸ ತಂಡವನ್ನು ಇಂದು(ಜುಲೈ 6) ಹೆಸರಿಸುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications