ಐಪಿಎಲ್ : ಆರ್ ಸಿ ಬಿ & ಸಿ ಎಸ್ ಕೆ ಎರಡೂ ತಂಡಗಳಿಗೂ ಆಡಿರುವ 7 ಆಟಗಾರರ ಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಈ ಎರಡೂ ತಂಡಗಳು ಸಹ ಐಪಿಎಲ್‌ನಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗ & ಕ್ರೇಜ್ ಹೊಂದಿವೆ ಎಂದರೆ ತಪ್ಪಾಗಲಾರದು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಅವಕಾಶ ಪಡೆಯುವ ಪ್ರತಿಯೊಬ್ಬ ಆಟಗಾರನೂ ಸಹ ಸಖತ್ ಫೇಮ್ ಹೊಂದಿರುವ ಬೆಂಗಳೂರು ಮತ್ತು ಚೆನ್ನೈ ತಂಡದಲ್ಲಿ ಆಡುವ ಕನಸನ್ನು ಹೊಂದಿಯೇ ಇರುತ್ತಾರೆ.
ಇದುವರೆಗೂ ನಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡೂ ತಂಡಗಳ ಪರ ಒಟ್ಟು 7 ಆಟಗಾರರು ಆಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಲವಾರು ತಂಡಗಳ ಪರ ಆಡಿರುವ ಆಟಗಾರರ ಪೈಕಿ ಆರ್ ಸಿ ಬಿ & ಸಿ ಎಸ್ ಕೆ ಎರಡೂ ತಂಡಗಳ ಪರ ಆಡಿರುವ 6 ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.
7. ಬ್ರೆಂಡನ್ ಮೆಕಲಮ್
2008 - 2013ರವರೆಗೆ ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ್ದ ನ್ಯೂಜಿಲೆಂಡ್ ತಂಡದ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಮ್ 2014-15ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಟವಾಡಿದ್ದರು. ನಂತರ 2018ರಲ್ಲಿ ಮೆಕಲಮ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು.
6. ಶೇನ್ ವಾಟ್ಸನ್
ಐಪಿಎಲ್ ಆರಂಭದ ವೇಳೆ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಶೇನ್ ವಾಟ್ಸನ್ 2016ರ ಐಪಿಎಲ್ ಹರಾಜಿನಲ್ಲಿ ಬೃಹತ್ ಬೆಲೆಗೆ ಬೆಂಗಳೂರು ತಂಡದ ಪಾಲಾಗಿದ್ದರು. 2017ರ ಐಪಿಎಲ್ ಆರಂಭದ ಪಂದ್ಯಗಳಲ್ಲಿ ನಾಯಕ ಕೊಹ್ಲಿಅಲಭ್ಯರಾಗಿದ್ದಾಗ ಶೇನ್ ವಾಟ್ಸನ್ ಅವರೇ ಆರ್ ಸಿ ಬಿ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ನಂತರ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶೇನ್ ವಾಟ್ಸನ್ ಅವರನ್ನು ಖರೀದಿಸಿತು.
5. ಕೇದಾರ್ ಜಾಧವ್
ಕೇದಾರ್ ಜಾಧವ್ ತಮ್ಮ ಮೊದಲನೇ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರು. ಆಡಿದ ಮೊದಲನೇ ಐಪಿಎಲ್ ಪಂದ್ಯದಲ್ಲಿಯೇ 29 ಎಸೆತಗಳಲ್ಲಿ 50 ರನ್ ಬಾರಿಸಿದ್ದ ಕೇದಾರ್ ಜಾಧವ್ ಅವರನ್ನು 2016ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತು. ಬೆಂಗಳೂರು ತಂಡದ ಪರ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಕೇದಾರ್ ಜಾಧವ್ ಅವರು 2018ರಲ್ಲಿ ಚೆನ್ನೈ ಪಾಲಾದರು.
4. ಪಾರ್ಥಿವ್ ಪಟೇಲ್
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಪಾರ್ಥಿವ್ ಪಟೇಲ್ ಅವರು ಆಡಿದ್ದರು. ಆಸ್ಟ್ರೇಲಿಯದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಜೊತೆ ಪಾರ್ಥಿವ್ ಪಟೇಲ್ ಓಪನರ್ ಆಗಿ ಚೆನ್ನೈ ಪರ ಕಣಕ್ಕಿಳಿಯುತ್ತಿದ್ದರು. 2014 ಮತ್ತು 2018ರಲ್ಲಿ ಎರಡು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾರ್ಥಿವ್ ಪಟೇಲ್ ಅವರನ್ನು ಖರೀದಿಸಿತ್ತು.
3. ಟಿಮ್ ಸೌಥಿ
ನ್ಯೂಜಿಲೆಂಡ್‌ನ ಪ್ರಮುಖ ಬೌಲರ್ ಟಿಮ್ ಸೌಥಿ ಸಹ ಸಿ ಎಸ್ ಕೆ ಮತ್ತು ಆರ್ ಸಿ ಬಿ ಪರ ಆಡಿರುವ ಅನುಭವವನ್ನು ಹೊಂದಿದ್ದಾರೆ. 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜರ್ಸಿ ತೊಟ್ಟಿದ್ದ ಟಿಮ್ ಸೌಥಿ 2018 - 19ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು.
2. ಸುಬ್ರಹ್ಮಣ್ಯಂ ಬದ್ರಿನಾಥ್
ತಮಿಳುನಾಡಿನ ಆಟಗಾರ ಸುಬ್ರಹ್ಮಣ್ಯಂ ಬದ್ರಿನಾಥ್ ಬೆಂಗಳೂರು ಮತ್ತು ಚೆನ್ನೈ ಎರಡೂ ತಂಡಕ್ಕೂ ಆಡಿದ್ದರು ಎಂಬುದು ಬಹುತೇಕ ಜನರಿಗೆ ತಿಳಿಯದ ವಿಷಯ. 2008-13ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ಬದ್ರಿನಾಥ್ , 2015ರಲ್ಲಿ ಬೆಂಗಳೂರು ತಂಡದ ಪರ ಆಡಿದ್ದರು. ಬೆಂಗಳೂರು ಪರ ಕಳಪೆ ಪ್ರದರ್ಶನ ನೀಡಿದ್ದ ಬದ್ರಿನಾಥ್ ಅವರನ್ನು ತಂಡದಿಂದ ಕೈಬಿಡಲಾಯಿತು ಮತ್ತು ಇದೀಗ ಬದ್ರಿನಾಥ್ ಅವರು ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದ್ದಾರೆ.
1. ಅಲ್ಬಿ ಮೊರ್ಕೆಲ್
2008-13ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಅಲ್ಬಿ ಮೊರ್ಕೆಲ್ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಆಲ್ ರೌಂಡರ್ ಆಗಿರುವ ಮೊರ್ಕೆಲ್ ಚೆನ್ನೈ ತಂಡಕ್ಕೆ ಕೆಲ ಪಂದ್ಯಗಳಲ್ಲಿ ಆಪದ್ಬಾಂಧವ ಕೂಡ ಆಗಿದ್ದರು. 2014ರ ಐಪಿಎಲ್ ಆವೃತ್ತಿಯಲ್ಲಿ ಅಲ್ಬಿ ಮೊರ್ಕೆಲ್ ಬೆಂಗಳೂರು ತಂಡದ ಪರ ಆಡಿದರೂ ಸಹ ಚೆನ್ನೈ ತಂಡದಲ್ಲಿದ್ದಾಗ ಆಡಿದಷ್ಟು ಪರಿಣಾಮಕಾರಿ ಆಟ ಆಡಲಿಲ್ಲ. ಹೀಗಾಗಿ ಕೇವಲ ಒಂದು ಆವೃತ್ತಿಯಲ್ಲಿ ಅಲ್ಬಿ ಮೊರ್ಕೆಲ್ ಆರ್ ಸಿ ಬಿ ಜರ್ಸಿ ತೊಟ್ಟಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications