For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020 ಹರಾಜು: 73 ಸ್ಥಾನಕ್ಕೆ 971 ಆಟಗಾರರಿಂದ ಪೈಪೋಟಿ

971 PLAYERS REGISTERED FOR VIVO IPL 2020 PLAYER AUCTION | ONEINDIA KANNADA
971 players register for VIVO IPL 2020 Player Auction

ಬೆಂಗಳೂರು: ಐಪಿಎಲ್‌ ಹರಾಜಿಗೆ ದಿನಗಣನೆ ಆರಂಭವಾಗಿದೆ. ಇದೇ 19ನೇ ತಾರೀಕಿನಂದು ಕೊಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೆ ಎಲ್ಲಾ ಆಟಗಾರರು ಹಾಗೂ ತಂಡಗಳೂ ಎದುರು ನೋಡುತ್ತಿವೆ. ಉತ್ತಮ ಆಟಗಾರರನ್ನು ತೆಕ್ಕೆಗೆ ತೆಗೆದುಕೊಂಡು ತಂಡವನ್ನು ಬಲಿಷ್ಠಗೊಳಿಸಬೇಕೆಂದು ತಂಡಗಳು ಕಾಯುತ್ತಿದ್ದರೆ, ಉತ್ತಮ ಮೊತ್ತದ ನಿರೀಕ್ಷೆಯಲ್ಲಿ ಆಟಗಾರರಿದ್ದಾರೆ.

ತಂಡಗಳು ಈಗಾಗಲೇ ಬಿಡುಗಡೆಗೊಳಿಸಿರುವ ಆಟಗಾರರ ಸ್ಥಾನಕ್ಕೆ ಈ ಬಿಡ್ಡಿಂಗ್ ಮೂಲಕ ಸೇರ್ಪಡೆಗೊಳಿಸಬೇಕಿದೆ. ಐಪಿಎಲ್‌ನ 8 ತಂಡಗಳಲ್ಲಿ 73 ಸ್ಥಾನಗಳು ಮಾತ್ರವೇ ಖಾಲಿಯಾಗಿದ್ದು. ಸ್ಥಾನಗಳನ್ನಷ್ಟೇ ಭರ್ತಿ ಮಾಡಿಕೊಳ್ಳುವ ಅವಕಾಶ ಇದೆ. ಆದರೆ ಈ ಸ್ಥಾನಕ್ಕೆ ಬರೊಬ್ಬರಿ 971 ಆಟಗಾರರು ಪೈಪೋಟಿ ನಡೆಸಲಿದ್ದಾರೆ.

ಇದರಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ 19 ಆಟಗಾರರಿದ್ದಾರೆ. ಅಲ್ಲದೆ ಭಾರತದ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಆಡಿರುವ 634 ಆಟಗಾರರು ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ. ಅಂತರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿರುವ 196 ಕ್ರಿಕೆಟಿಗರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ 60 ವಿದೇಶಿ ಕ್ರಿಕೆಟಿಗರು ಕೂಡ ಈ ಹರಾಜು ಪ್ರಕ್ರಿಯೆಯ ಭಾಗವಾಗಲಿದ್ದಾರೆ. ಒಟ್ಟಾರೆ 258 ವಿದೇಶಿ ಆಟಗಾರರು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ದೇಶಗಳಿಗನುಗುಣವಾಗಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಆಟಗಾರ ಸಂಖ್ಯೆಯನ್ನು ಗಮನಿಸುವುದಾದರೆ:
ಅಫ್ಘಾನಿಸ್ತಾನ: 19
ಆಸ್ಟ್ರೇಲಿಯಾ: 55
ಬಾಂಗ್ಲಾದೇಶ: 6
ಇಂಗ್ಲೆಂಡ್: 22
ನೆದರ್ಲ್ಯಾಂಡ್: 1
ನ್ಯೂಜಿಲೆಂಡ್: 24
ದಕ್ಷಿಣ ಆಫ್ರಿಕಾ: 54
ಶ್ರೀಲಂಕಾ: 39
ಯುಎಸ್ಎ: 1
ವೆಸ್ಟ್ ಇಂಡೀಸ್: 34
ಜಿಂಬಾಬ್ವೆ: 3

Story first published: Tuesday, December 3, 2019, 14:15 [IST]
Other articles published on Dec 3, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+