IPL Auction 2023: ಮಾಲೀಕರ ಚಿತ್ತ ಕದ್ದಿರುವ 17 ವರ್ಷದ ದಕ್ಷಿಣ ಆಫ್ರಿಕಾ ಪೋರ, ಯಾರೀತ, ಏನಿವನ ಸಾಧನೆ?
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾನ ಕನಸು. ಈ ಲೀಗ್‌ನಲ್ಲಿ ಆಡುತ್ತಿದ್ದಂತೆ ಜೇಬು ತುಂಬ ಹಣ ಹಾಗೂ ಖ್ಯಾತಿ ಸಿಗುತ್ತದೆ. ಅಲ್ಲದೆ ವಿಶ್ವದ ಸ್ಟಾರ್ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಿಕೊಳ್ಳುವ ಅವಕಾಶ ಲಭಿಸುತ್ತದೆ. ಈ ಅವಕಾಶವನ್ನು ಬಳಸಿಕೊಳ್ಳಲು ಅದೆಷ್ಟೋ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಈ ಬಾರಿ ಸಹ ಐಪಿಎಲ್ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಪೋರನೊಬ್ಬ ತನ್ನ ಹೆಸರನ್ನು ನೊಂದಾಯಿಸಿಕೊಂಡಿದ್ದಾನೆ.
ದುಬೈನ ಕೋಕಾ ಕೋಲಾ ಅರೆನಾ ಐಪಿಎಲ್ 2024 ಹರಾಜಿಗೆ ಸಿದ್ಧವಾಗಿದ್ದು, ಡಿಸೆಂಬರ್ 19ರಂದು ಬಿಡ್ಡಿಂಗ್ ನಡೆಯಲಿದೆ. ಈ ಬಾರಿ ಹರಾಜಿನಲ್ಲಿ 333 ಆಟಗಾರರು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಇವರಲ್ಲಿ 214 ಮಂದಿ ಭಾರತೀಯರಾಗಿದ್ದರೆ, 119 ಮಂದಿ ವಿದೇಶಿ ಆಟಗಾರರಾಗಿದ್ದಾರೆ.

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೇವಲ 77 ಆಟಗಾರರು ಮಾತ್ರ ಸ್ಲಾಟ್‌ಗಳನ್ನು ಹೊಂದಿದ್ದಾರೆ. ಇದರರ್ಥ ಇಷ್ಟು ಆಟಗಾರರನ್ನು ಮಾತ್ರ ಅಷ್ಟೂ ಮಾಲೀಕರು ಕುಡಿ ಖರೀದಿಸಬಹುದಾಗಿದೆ. ಈ ಪೈಕಿ 256 ಆಟಗಾರರು ಔಟಾಗಲಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಈ ಹರಾಜಿನಲ್ಲಿ ಕಿರಿಯ ಮತ್ತು ಹಿರಿಯ ಆಟಗಾರರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನರಲ್ಲಿದೆ.
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕ್ವೆನಾ ಮಫಕಾ ಐಪಿಎಲ್ ಹರಾಜಿನಲ್ಲಿ ಗುರುತಿಸಿಕೊಂಡ ಅತ್ಯಂತ ಕಿರಿಯ ಆಟಗಾರ. ಮಫಕಾಗೆ 17 ವರ್ಷ. ಇದಲ್ಲದೆ, ಅಫ್ಘಾನಿಸ್ತಾನದ ಸ್ಟಾರ್ ಆಲ್‌ರೌಂಡರ್ ಮೊಹಮ್ಮದ್ ನಬಿ 39 ವರ್ಷ ವಯಸ್ಸಿನ ಅತ್ಯಂತ ಹಿರಿಯ ಆಟಗಾರನಾಗಿ ಹರಾಜು ಪ್ರವೇಶಿಸಲಿದ್ದಾರೆ.
2006 ರ ಏಪ್ರಿಲ್ 8 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಜನಿಸಿದ ಕ್ವೆನಾ ಮಫಕಾ ಎಡಗೈ ವೇಗದ ಬೌಲರ್. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಇವರು ಕಾಯುತ್ತಿದ್ದಾರೆ. ಮಫಕಾ ದಕ್ಷಿಣ ಆಫ್ರಿಕಾ ಅಂಡರ್-19, ದಕ್ಷಿಣ ಆಫ್ರಿಕಾ ಎ ಮತ್ತು ದಕ್ಷಿಣ ಆಫ್ರಿಕಾ ಟಿ20 ಲೀಗ್ ತಂಡ ಪಾರ್ಲ್ ರಾಯಲ್ಸ್ ಪರ ಕ್ರಿಕೆಟ್ ಆಡಿದ್ದಾರೆ.

ಕ್ವೆನಾ ಮಫಕಾ ಕ್ರಿಕೆಟ್ ವೃತ್ತಿಜೀವನ
ಕ್ವೆನಾ ಎಂಫಾಕಾ ದಕ್ಷಿಣ ಆಫ್ರಿಕಾ ಪರ 2 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು. ಇದರಲ್ಲಿ ಅವರು 7 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಅವರು ಎರಡು ಲಿಸ್ಟ್ ಎ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ. 5 ಟಿ20 ಪಂದ್ಯಗಳಲ್ಲಿ ಮಫಕಾ 6 ವಿಕೆಟ್‌ಗಳನ್ನು ಪಡೆದಿದ್ದಾರೆ.
ಹರಾಜಿಗೆ ನೊಂದಾಯಿಸಿಕೊಂಡ ಹಿರಿಯ ಆಟಗಾರ ನಬಿ
ಅಫ್ಘಾನಿಸ್ತಾನದ ಮಾಜಿ ನಾಯಕ ಮೊಹಮ್ಮದ್ ನಬಿ ಈ ಬಾರಿ ಹರಾಜಿನಲ್ಲಿ ನೊಂದಾಯಿಸಿಕೊಂಡ ಅತ್ಯಂತ ಹಿರಿಯ ಆಟಗಾರ. ಜನವರಿ 1, 1985 ರಂದು ಜನಿಸಿದ ನಬಿ ಅವರ ವಯಸ್ಸು 38 ಕ್ಕಿಂತ ಹೆಚ್ಚು. ನಬಿ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ. ನಬಿ ಅವರು ಬಲಗೈ ಬ್ಯಾಟ್ಸ್‌ಮನ್ ಮತ್ತು ಆಫ್-ಬ್ರೇಕ್ ಬೌಲಿಂಗ್ ಮಾಡುವ ಆಲ್‌ರೌಂಡರ್. ಒಟ್ಟಾರೆ 366 ಟಿ20 ಪಂದ್ಯಗಳಲ್ಲಿ 15 ಅರ್ಧಶತಕಗಳ ನೆರವಿನಿಂದ 5370 ರನ್ ಗಳಿಸಿದ್ದು, 331 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications