For Quick Alerts
ALLOW NOTIFICATIONS  
For Daily Alerts
 

ಹೇಗಿತ್ತು ಈ ವರ್ಷ ಭಾರತ ಮಹಿಳಾ ಮಣಿಗಳ ಪ್ರದರ್ಶನ? ಇಲ್ಲಿದೆ ರಿಪೋರ್ಟ್‌

ಭಾರತ ಮಹಿಳಾ ತಂಡ ಇತ್ತೀಚಿಗೆ ವೆಸ್ಟ್‌ ಇಂಡೀಸ್ ವಿರುದ್ಧ ಸಂಘಟಿತ ಪ್ರದರ್ಶನ ನೀಡಿ ಸರಣಿಯನ್ನು ವಶಕ್ಕೆ ಪಡೆದಿದೆ. ಈ ವೇಳೆ ಸ್ಟಾರ್ ಆಟಗಾರ್ತಿಯರು ಮನಮೋಹಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಆದರೆ ಈ ವರ್ಷ ಭಾರತ ವನಿತೆಯರು ಮೈದಾನದಲ್ಲಿ ಮಂದಹಾಸ ಮೂಡಿಸುವಲ್ಲಿ ವಿಫಲರಾಗಿದ್ದಾರೆ. ದೊಡ್ಡ ದೊಡ್ಡ ಟೂರ್ನಿಯಲ್ಲಿ ಭಾಗವಹಿಸಿದರೂ, ಕಪ್‌ ಗೆಲ್ಲುವಲ್ಲಿ ವಂಚಿತರಾಗಿದ್ದಾರೆ. ಪ್ರಸಕ್ತ ವರ್ಷ ಟೀಮ್ ಇಂಡಿಯಾದ ಮಹಿಳಾ ಮಣಿಗಳ ಸಾಧನೆ ಹೇಗಿತ್ತು ಎಂಬ ಹಿನ್ನೋಟ ಇಲ್ಲಿದೆ.

ಹರ್ಮನ್‌ ಪ್ರೀತ ಮುಂದಾಳತ್ವದಲ್ಲಿ ಮಹಿಳಾ ತಂಡ ಈ ಬಾರಿ ಒಂದೇ ಒಂದು ಪ್ರಮುಖ ಕಪ್‌ ಗೆದ್ದಿಲ್ಲ. ಈ ವರ್ಷ, ಟೀಂ ಇಂಡಿಯಾ ಮಹಿಳಾ ಏಷ್ಯಾ ಕಪ್ ಮತ್ತು ನಂತರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಿತ್ತು. ಈ ಎರಡೂ ಟೂರ್ನಿಗಳಲ್ಲಿ ಭಾರತ ತಂಡವನ್ನು ಹಾಟ್ ಫೆವರೀಟ್ ಎಂದು ಪರಿಗಣಿಸಲಾಗಿತ್ತು. ಆದರೆ ನಿರಾಸೆಯ ನೌಕೆಯಲ್ಲಿ ಆಟಗಾರ್ತಿಯರು ಪ್ರಯಾಣ ಬೆಳೆಸಿದ್ದಾರೆ.

A Disappointing Year for Indian Women s Cricket Team in T20Is Highlights of 2024

ಈ ವರ್ಷ, ಟೀಂ ಇಂಡಿಯಾ ಮಹಿಳಾ ತಂಡ ಒಟ್ಟು 23 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಂಗಳ ಪ್ರವೇಶಿಸಿದ್ದು, ಇದರಲ್ಲಿ 15 ಗೆಲುವು ಸಾಧಿಸಿದೆ. ಇನ್ನು ಒಂದು ಪಂದ್ಯ ರದ್ದಾಗಿದ್ದು, 7 ರಲ್ಲಿ ಸೋಲು ಕಂಡಿದೆ.

ಬಾಂಗ್ಲಾ ವಿರುದ್ಧ ಸೂಪರ್ ಪ್ರದರ್ಶನ

ವರ್ಷದ ಆರಂಭದಲ್ಲಿ ಭಾರತ ಮಹಿಳಾ ತಂಡ ತವರಿನಲ್ಲಿ ಆಸ್ಟ್ರೇಲಿಯಾ ಸವಾಲನ್ನು ಎದುರಿಸಿತು. ಈ ವೇಳೆ ಆಸ್ಟ್ರೇಲಿಯಾ 2-1 ರಿಂದ ಸರಣಿ ಗೆದ್ದು ಬೀಗಿತು. ಟೀಮ್‌ ಇಂಡಿಯಾ ಈ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದಿದ್ದು ಬಿಟ್ಟರೆ, ಉಳಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿತು. ಈ ಸರಣಿಯ ಬಳಿಕ ಟೀಮ್ ಇಂಡಿಯಾ ಬಾಂಗ್ಲಾದೇಶದ ಪ್ರವಾಸವನ್ನು ಬೆಳೆಸಿತು. ಈ ವೇಳೆ ಬಾಂಗ್ಲಾದೇಶವನ್ನು ತವರಿನಲ್ಲೇ ವೈಟ್‌ ವಾಶ್ ಸೋಲಿಗೆ ಶರಣಾಗುವಂತೆ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದಿತು.

A Disappointing Year for Indian Women s Cricket Team in T20Is Highlights of 2024

ಏಷ್ಯಾ ಕಪ್‌ ಫೈನಲ್‌ನಲ್ಲಿ ನಿರಾಸೆ

ಬಾಂಗ್ಲಾ ಪ್ರವಾಸದ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ ನಡೆಯಿತು. ಈ ವೇಳೆ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿತು. ಎರಡನೇ ಪಂದ್ಯ ರದ್ದಾಯಿತು. ನಿರ್ಣಾಯಕ ಪಂದ್ಯದಲ್ಲಿ ಗೆಲುವು ದಾಖಲಿಸಿದ ಹರ್ಮನ್‌ ಪಡೆ ಸರಣಿಯನ್ನು ಸಮನಾಗಿಸಿತು. ಇನ್ನು ಟೀಮ್ ಇಂಡಿಯಾ ಮಹಿಳಾ ತಂಡ ಏಷ್ಯಾ ಕಪ್ ಆಡಲು ಶ್ರೀಲಂಕಾ ಪ್ರವಾಸವನ್ನು ಬೆಳೆಸಿತು. ಈ ವೇಳೆ ಲೀಗ್ ಹಾಗೂ ಸೆಮಿಫೈನಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ, ಫೈನಲ್‌ನಲ್ಲಿ ಆತಿಥೇಯ ತಂಡದ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು.

ಇನ್ನು ಈ ವರ್ಷ ಯುಎಇನಲ್ಲಿ ಮಹಿಳಾ ಟಿ20 ವಿಶ್ವಕಪ್‌ ಆಯೋಜಿಸಲಾಗಿತ್ತು. ಈ ವೇಳೆ ಹರ್ಮನ್‌ ಪಡೆ ಲೀಗ್‌ ಹಂತದಲ್ಲೇ ಟೂರ್ನಿಗೆ ಗುಡ್‌ ಬೈ ಹೇಳಿತು. ಇದು ಟೀಮ್ ಇಂಡಿಯಾ ನೀಡಿದ ಅತ್ಯಂತ ಕಳಪೆ ಪ್ರದರ್ಶನಗಳಲ್ಲಿ ಒಂದಾಗಿದೆ.

Story first published: Sunday, December 22, 2024, 16:00 [IST]
Other articles published on Dec 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+