Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಂಪೂರ್ಣ ಫಿಟ್ ಆಗಿರೋ ಬೂಮ್ರಾ ಭಾರತದ ಪ್ರಮುಖ ಅಸ್ತ್ರ: ಬಾರ್ಡರ್

A fully fit Jasprit Bumrah will be key for India in retaining Test series Down Under: Allan Border

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಈ ಬಾರಿಯೂ ಗೆಲ್ಲಲು ಭಾರತಕ್ಕೆ ವೇಗಿ ಜಸ್‌ಪ್ರೀತ್‌ ಬೂಮ್ರಾ ಪ್ರಮುಖ ಅಸ್ತ್ರವಾಗಬಲ್ಲರು. ಟೆಸ್ಟ್ ಸರಣಿ ಉಳಿಸಿಕೊಳ್ಳಲು ಸಂಪೂರ್ಣ ಫಿಟ್ ಆಗಿರೋ ಬೂಮ್ರಾ ಭಾರತಕ್ಕೆ ಪ್ರಮುಖ ಆಟಗಾರ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಹೇಳಿದ್ದಾರೆ.

ತಾನು ಜಸ್‌ಪ್ರೀತ್ ಬೂಮ್ರಾ ಅವರ ಅಭಿಮಾನಿ ಎಂದಿರುವ ಅಲನ್ ಬಾರ್ಡರ್, ಗುರುವಾರದಿಂದ (ಡಿಸೆಂಬರ್ 17) ಆರಂಭಗೊಳ್ಳಲಿರುವ ಬಹು ನಿರೀಕ್ಷಿತ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳ ಮಧ್ಯೆ ಭಿನ್ನತೆ ಸೃಷ್ಟಿಸುವ ಶಕ್ತಿ ಬೂಮ್ರಾಗಿದೆ ಎಂದಿದ್ದಾರೆ.

'ನಾನು ಬೂಮ್ರಾ ಅವರ ದೊಡ್ಡ ಅಭಿಮಾನಿ. ಅವರು ಫಿಟ್‌ ಆಗಿ ಉಳಿದರೆ ನಮಗೊಬ್ಬ ಪಂದ್ಯ ಗೆಲ್ಲಿಸಿಕೊಡುವ ವ್ಯಕ್ತಿ ಸಿಕ್ಕಂತಾಗುತ್ತದೆ. ನಮ್ಮ ಪಿಚ್‌ಗಳು ಕೊಂಚ ಬೌನ್ಸ್ ಆಗುತ್ತವೆ ಮತ್ತು ಸೈಡ್‌ವೇ ಮೂವ್‌ಮೆಂಟ್ ಆಗುತ್ತವೆ. ಹೀಗಾಗಿ ನನಗೆ ಬೂಮ್ರಾ ಬಗ್ಗೆ ಚಿಂತೆಯಾಗಿದೆ,' ಎಂದು ಬಾರ್ಡರ್ ಹೇಳಿದ್ದಾರೆ.

ಡಿಸೆಂಬರ್ 17ರಿಂದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯ ಪಿಂಕ್‌ ಬಾಲ್ ಟೆಸ್ಟ್ ಆಗಿರಲಿದೆ. 2018-19ರ ಸೀಸನ್‌ನಲ್ಲಿ ಇದೇ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿತ್ತು. ಈ ಬಾರಿ ಮೊದಲ ಟೆಸ್ಟ್ ಆಡಿದ ಬಳಿಕ ವಿರಾಟ್ ಪಿತೃತ್ವ ರಜೆ ಪಡೆಯಲಿದ್ದಾರೆ.

Story first published: Tuesday, December 15, 2020, 19:33 [IST]
Other articles published on Dec 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+