Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್‌ಗಳ ಜೊತೆಯಾಟದ ಕಾಣಿಕೆಗಳ ಬಗ್ಗೆ ವರದಿ ಇಲ್ಲಿದೆ.

ಸೆಪ್ಟಂಬರ್‌ 9 ರಿಂದ ಯುಎಇನಲ್ಲಿ ಏಷ್ಯಾ ಕಪ್‌ ಟಿ20 ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯ ಏಷ್ಯಾ ಕಪ್‌ ಟಿ20 ಫಾರ್ಮೆಟ್‌ನಲ್ಲಿ ಆಡಿಸಲಾಗುತ್ತಿದೆ. ಭಾರತ ಈ ಬಾರಿಯ ಟೂರ್ನಿಯನ್ನು ಆಯೋಜಿಸುತ್ತಿದೆ. ಮೂರನೇ ಆವೃತ್ತಿಯ ಏಷ್ಯಾಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ಟೂರ್ನಿಗಾಗಿ ಈಗಾಗಲೇ ಸಿದ್ಧತೆಗಳು ಸಹ ಭರದಿಂದ ಸಾಗಿವೆ. ಟೀಮ್ ಇಂಡಿಯಾದ ಆಟಗಾರರು ಸಹ ಭರದ ಅಭ್ಯಾಸ ನಡೆಸಿದ್ದಾರೆ. ಒಟ್ಟಾರೆ ಏಷ್ಯಾ ಕಪ್‌ ಇತಿಹಾಸದಲ್ಲಿ ಮೂಡಿ ಬಂದ ಜೊತೆಯಾಟಗಳ ಬಗ್ಗೆ ಮಾಹಿತಿ ಇಲ್ಲಿದೆ.

ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳ ಜೊತೆಯಾಟ ಕಳೆದ ಬಾರಿ ಆಯೋಜಿಸಲಾಗಿದ್ದ ಟೂರ್ನಿಯಲ್ಲಿ ಮೂಡಿ ಬಂದಿದೆ. ಈ ಟೂರ್ನಿಯಲ್ಲಿ ಮೊದಲ ವಿಕೆಟ್‌ಗೆ ಕೆಎಲ್ ರಾಹುಲ್ ಹಾಗೂ ವಿರಾಟ್‌ ಕೊಹ್ಲಿ ಸೇರಿಸಿದ್ದ 119 ರನ್‌ಗಳ ಜೊತೆಯಾವೇ ಅತಿ ಗರಿಷ್ಠ ರನ್‌ಗಳ ಜೊತೆಯಾಟವಾಗಿದೆ. ಈ ಜೋಡಿ ದುಬೈನಲ್ಲಿ ಅಫ್ಘಾನಿಸ್ತಾನ ವಿರುದ್ಧ ಈ ಸಾಧನೆ ಮಾಡಿತ್ತು. ಕೆಎಲ್ ರಾಹುಲ್‌ ಈ ಪಂದ್ಯದಲ್ಲಿ 62 ರನ್‌ ಬಾರಿಸಿದ್ದರೆ, ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅಜೇಯ 122 ರನ್‌ಗಳನ್ನು ಕಟ್ಟಿ ತಂಡಕ್ಕೆ ಆಧಾರವಾಗಿದ್ದರು.

A Look at the Top 5 Highest Partnerships in Asia Cup T20 History

ಎರಡನೇ ಅತಿ ದೊಡ್ಡ ಜೊತೆಯಾಟ ದಾಖಲಾದ ಇತಿಹಾಸ ಪಾಕ್‌ ಹೆಸರಿನಲ್ಲಿದೆ. ಪಾಕಿಸ್ತಾನ ಎರಡನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ಹಾಂಗ್‌ ಕಾಂಗ್‌ ವಿರುದ್ಧ ಈ ಸಾಧನೆಯನ್ನು ಮಾಡಿತ್ತು. ಶಾರ್ಜಾದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಬಾಬರ್ ಅಜಮ್ (9) ಬೇಗನೆ ಪೆವಿಲಿಯನ್ ಸೇರಿದರು. ಆಗ ಆರಂಭಿಕ ಮೊಹಮ್ಮದ್ ರಿಜ್ವಾನ್‌ ಹಾಗೂ ಫಖರ್ ಜಮಾನ್‌ ಜೋಡಿ ಎರಡನೇ ವಿಕೆಟ್‌ಗೆ 116 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತ್ತು.

ಜೊತೆಯಾಟದ ಲೆಕ್ಕಾಚಾರದಲ್ಲಿ ಪಾಕ್‌ಗೂ ಸ್ಥಾನ

ಜೊತೆಯಾಟದ ಲೆಕ್ಕಾಚಾರದಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಕೀರ್ತಿ ಮತ್ತೊಮ್ಮೆ ಪಾಕ್‌ಗೆ ಸಲ್ಲುತ್ತದೆ. ಪಾಕ್‌ ಯುಎಇ ವಿರುದ್ಧ 2016ರಲ್ಲಿ ನಡೆದಿದ್ದ ಏಷ್ಯಾಕಪ್‌ನಲ್ಲಿ ಈ ಸಾಧನೆ ಮಾಡಿತ್ತು. ಈ ಜೋಡಿ ನಾಲ್ಕನೇ ವಿಕೆಟ್‌ಗೆ ಅಜೇಯ 114 ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಗಿತ್ತು. ಈ ಪಂದ್ಯದಲ್ಲಿ ಉಭಯ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದ್ದರು.

A Look at the Top 5 Highest Partnerships in Asia Cup T20 History

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ನಲ್ಲಿ ಶತಕದ ಜೊತೆಯಾಟವನ್ನು ನೀಡಿದ ಕೀರ್ತಿ ಶ್ರೀಲಂಕಾದ ತಿಲಕರತ್ನ ದಿಲ್ಶನ್‌ ಹಾಗೂ ದಿನೇಶ್‌ ಚಂಡೀಮಲ್‌ ಜೋಡಿ ಮೊದಲ ವಿಕೆಟ್‌ಗೆ 110 ರನ್‌ಗಳ ಜೊತೆಯಾಟವನ್ನು ನೀಡಿತ್ತು. ಈ ವೇಳೆ ದಿಲ್ಶನ್‌ 75 ಹಾಗೂ ಚಂಡೀಮಲ್‌ 58 ರನ್ ಸೇರಿಸಿತು.

ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ಜೊತೆಯಾಟಗಳ ಲೆಕ್ಕಾಚಾರದಲ್ಲಿ ಐದನೇ ಸ್ಥಾನದಲ್ಲಿದೆ. ಈ ಜೋಡಿ 2022ರಲ್ಲಿ ಹಾಂಗ್‌ ಕಾಂಗ್‌ ವಿರುದ್ಧ ಅಜೇಯ 98 ರನ್‌ ಜೊತೆಯಾಟ ಕಾಣಿಕೆ ನೀಡಿತ್ತು. ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ನಡೆಸಿ 26 ಎಸೆತಗಳಲ್ಲಿ ಅಜೇಯ 68 ರನ್‌ ಸಿಡಿಸಿದ್ದರು. ಈ ವೇಳೆ 6 ಬೌಂಡರಿ, 6 ಸಿಕ್ಸರ್ ಬಾರಿಸಿದ್ದರು.

Story first published: Saturday, August 30, 2025, 10:45 [IST]
Other articles published on Aug 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+